ಪಂಜಾಬ್‌ನಲ್ಲಿ ಮತ್ತೆ ಪ್ರಶಾಂತ್ ಕಿಶೋರ್‌ನತ್ತ ಕಾಂಗ್ರೆಸ್ ಒಲವು
ಚಂಡೀಗಢ, ನವೆಂಬರ್ 03: ಪಂಜಾಬ್ ಚುನಾವಣೆಯಲ್ಲಿ ಕಾಂಗ್ರೆಸ್‌ನ್ನು ಅಧಿಕಾರಕ್ಕೆ ತರುವಲ್ಲಿ ನೆರವಾಗಿದ್ದ ಪ್ರಶಾಂತ್ ಕಿಶೋರ್‌ಪರ ಮತ್ತೆ ಪಂಜಾಬ್ ಕಾಂಗ್ರೆಸ್ ನಾಯಕರು ಒಲವು ತೋರಿದ್ದಾರೆ.
ಮುಂಬರುವ ಪಂಜಾಬ್ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಶಾಸಕರೊಂದಿಗೆ ಮುಖ್ಯಮಂತ್ರಿ ಚರಣ್‌ಜಿತ್ ಚನ್ನಿ ನಡೆಸಿದ ಸಭೆಯಲ್ಲಿ ಈ ರೀತಿಯ ಸಲಹೆಗಳು ಕೇಳಿಬಂದಿವೆ.
ಪಂಜಾಬ್‌ನ ಕಾಂಗ್ರೆಸ್ ಇನ್‌ಚಾರ್ಜ್ ಹರೀಶ್ ಚೌಧರಿ ಈ ಸಲಹೆ ನೀಡಿದ್ದಾರೆ. ವಿಡಿಯೋ ಕಾನ್ಫರೆನ್ಸ್‌ನಲ್ಲಿ ಚನ್ನಿಯನ್ನು ಸ್ವಾಗತಿಸಿ ಮಾತನಾಡುವಾಗ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾರ್ಯತಂತ್ರಗಾರ ಪ್ರಶಾಂತ್ ಕಿಶೋರ್ ಅವರನ್ನು ಆಹ್ವಾನಿಸಬೇಕು ಹಾಗೂ ಅವರ ನೆರವನ್ನು ಪಡೆಯಬೇಕು ಎಂದು ಸಲಹೆ ನೀಡಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕ್ಯಾಪ್ಟನ್ ಅಮರಿಂದರ್ ಸಿಂಗ್‌ಗೆ ಪ್ರಶಾಂತ್ ಕಿಶೋರ್ ನೆರವು ನೀಡಿದ್ದರು. ಇದರಿಂದ ಕಾಂಗ್ರೆಸ್ ಪಂಜಾಬ್‌ನಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಾಯಿತು.
ಈಗಿರುವ ವಿಚಾರವೇನೆಂದರೆ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಬಳಿಕ ಚುನಾವಣಾ ತಂತ್ರಗಾರ ಹುದ್ದೆಯಿಂದ ಸ್ವಲ್ಪ ಕಾಲ ವಿರಾಮ ಪಡೆಯುತ್ತಿದ್ದೇನೆ ಎಂದು ಪ್ರಶಾಂತ್ ಕಿಶೋರ್ ಘೋಷಿಸಿದ್ದರು. ಹಾಗೆಯೇ ಹೊಸ ಜೀವನಕ್ಕೆ ಕಾಲಿಡುತ್ತಿದ್ದೇನೆ ಎನ್ನುವ ಸೂಚನೆಯನ್ನೂ ನೀಡಿದ್ದರು.
ಅಲ್ಲದೆ, ಸಕ್ರಿಯ ರಾಜಕೀಯ ಚರ್ಚೆಗಳು ಕೂಡ ನಡೆಯುತ್ತಿವೆ, ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರುತ್ತಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ. ಈ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿಯನ್ನು ಪ್ರಶಾಂತ್ ಕಿಶೋರ್ ಭೇಟಿಯಾಗಿದ್ದಾರೆ. ಆದರೆ ಕಾಂಗ್ರೆಸ್ ಸೇರ್ಪಡೆಯ ಅಂತಿಮ ನಿರ್ಧಾರವಾಗಿಲ್ಲ ಹೀಗಾಗಿ ಪ್ರಶಾಂತ್ ಕಿಶೋರ್ ಸಕ್ರಿಯವಾಗಿ ರಾಜಕೀಯಕ್ಕೆ ಸೇರಿ ಕಾಂಗ್ರೆಸ್ ಜತೆಗಿರುತ್ತಾರೋ ಅಥವಾ ತಮ್ಮ ಹಳೆಯ ವೃತ್ತಿಯಾದ ಚುನಾವಣಾ ತಂತ್ರಗಾರಿಕೆಯಲ್ಲಿ ನಿರತರಾಗುತ್ತಾರೋ ಎನ್ನುವ ಕುತೂಹಲ ಮೂಡಿದೆ.
ಒಂದು ವಾರದ ಹಿಂದೆ ಪ್ರಶಾಂತ್ ಕಿಶೋರ್ ಮಾತನಾಡಿದ್ದು, ಅನೇಕ ದಶಕಗಳವರೆಗೆ ಬಿಜೆಪಿ ಎಲ್ಲಿಗೂ ಹೋಗುವುದಿಲ್ಲ, ರಾಹುಲ್ ಗಾಂಧಿ ಅವರ ಸಮಸ್ಯೆ ಏನೆಂದರೆ ಅವರು ಅದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಚುನಾವಣಾ ಪ್ರಚಾರ ಚಾಣಾಕ್ಷ ಪ್ರಶಾಂತ್ ಕಿಶೋರ್ ಹೊಸ ಬಾಂಬ್ ಸಿಡಿಸಿದ್ದಾರೆ.
ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬದ ಸದಸ್ಯರೊಂದಿಗೆ ಅವರು ನಡೆಸಿದ ಈ ಹಿಂದಿನ ಮಾತುಕತೆಗಳು ಸಫಲವಾಗಿಲ್ಲ ಎಂಬ ಸುಳಿವು ದೊರೆತಿತ್ತು.
ಪ್ರಶ್ನೋತ್ತರ ಕಾರ್ಯಕ್ರಮವೊಂದರಲ್ಲಿ ಪ್ರತಿಕ್ರಿಯಿಸಿದ ಪ್ರಶಾಂತ್ ಕಿಶೋರ್, ಭಾರತದ ರಾಜಕಾರಣದಲ್ಲಿ ಇನ್ನೂ ಅನೇಲ ವರ್ಷ ಬಿಜೆಪಿ ಕೇಂದ್ರದಲ್ಲಿ ಇರುತ್ತದೆ. ಅದು ಗೆಲ್ಲಲಿ ಅಥವಾ ಸೋಲಲಿ. ಸ್ವಾತಂತ್ರ್ಯ ಪಡೆದ ಬಳಿಕ ಮೊದಲ 40 ವರ್ಷ ಕಾಂಗ್ರೆಸ್ ಇದ್ದಂತೆಯೇ ಅದೂ ಇರಲಿದೆ ಎಂದರು.
'ಬಿಜೆಪಿಯು ಭಾರತೀಯ ರಾಜಕಾರಣದ ಕೇಂದ್ರದಲ್ಲಿ ಇರಲಿದೆ. ಅವರು ಗೆಲ್ಲಲಿ ಅಥವಾ ಅವರು ಪರಾಜಯ ಹೊಂದಲಿ. ಅದು ಕಾಂಗ್ರೆಸ್‌ನ ಮೊದಲ 40 ವರ್ಷಗಳಲ್ಲಿದ್ದಂತೆಯೇ ಇರಲಿದೆ. ಬಿಜೆಪಿ ಎಲ್ಲಿಗೂ ಹೋಗುವುದಿಲ್ಲ. ಭಾರತದ ಮಟ್ಟದಲ್ಲಿ ಒಮ್ಮೆ ನೀವು ಶೇ 30ಕ್ಕೂ ಹೆಚ್ಚು ಮತಗಳನ್ನು ಪಡೆದುಕೊಂಡರೆ ತಕ್ಷಣಕ್ಕೆ ಕದಲಿಸಲು ಆಗುವುದಿಲ್ಲ.
ಹೀಗಾಗಿ ಜನರು ಬಹಳ ಆಕ್ರೋಶಗೊಳ್ಳುತ್ತಿದ್ದಾರೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಿತ್ತೊಗೆಯಲಿದ್ದಾರೆ ಎಂಬ ಈ ಬಲೆಯೊಳಗೆ ಬೀಳಬೇಡಿ. ಬಹುಶಃ ಅವರು ಮೋದಿ ಅವರನ್ನು ಕಿತ್ತು ಹಾಕಬಹುದು. ಆದರೆ ಬಿಜೆಪಿ ಎಲ್ಲಿಯೂ ಹೋಗುವುದಿಲ್ಲ. ಅವರು ಇಲ್ಲಿಯೇ ಇರಲಿದ್ದಾರೆ. ಅವರು ಮುಂದಿನ ಅನೇಕ ದಶಕಗಳ ಕಾಲ ಹೋರಾಟ ನಡೆಸಲಿದ್ದಾರೆ. ಅದನ್ನು ತರಾತುರಿಯಲ್ಲಿ ತೆಗೆಯಲು ಸಾಧ್ಯವಿಲ್ಲ' ಎಂದು ಹೇಳಿದ್ದರು.
ರಾಹುಲ್ ಗಾಂಧಿ ಅವರಲ್ಲಿ ಇರುವ ಸಮಸ್ಯೆ ಬಹುಶಃ ಇರುವುದು ಇಲ್ಲಿಯೇ. ಜನರು ಅವರನ್ನು ಕಿತ್ತು ಹಾಕಲು ಕೆಲವೇ ಸಮಯದ ಕೆಲಸ ಎಂದು ಅವರು ಭಾವಿಸಿದ್ದಾರೆ. ಅದು ಆಗುತ್ತಿಲ್ಲ. ನೀವು ಪ್ರಧಾನಿ ನರೇಂದ್ರ ಮೋದಿ ಅವರ ಶಕ್ತಿಯನ್ನು ಪರಿಶೀಲಿಸಲು, ಅರ್ಥಮಾಡಿಕೊಳ್ಳಲು ಮತ್ತು ಅರಿವಿಗೆ ಪಡೆದುಕೊಳ್ಳಲು ಸಾಧ್ಯವಾಗದ ಹೊರತು ಅವರನ್ನು ಸೋಲಿಸುವ ಪ್ರತಿತಂತ್ರವನ್ನು ಅಳವಡಿಸಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದರು.












Click it and Unblock the Notifications