ಪತ್ನಿ, ಇಬ್ಬರು ಮಕ್ಕಳಿಗೆ ಗುಂಡಿಕ್ಕಿ ತಾನೂ ಆತ್ಮಹತ್ಯೆ: ಕಾರಣವೇನು?
ಪಾಣಿಪತ್, ಮಾರ್ಚ್ 30: ವ್ಯಕ್ತಿಯೊಬ್ಬ ಇಬ್ಬರು ಮಕ್ಕಳಿಗೆ ಗುಂಡಿಕ್ಕಿ ಪತ್ನಿಯನ್ನೂ ಸಾಯಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಾಣಿಪತ್‌ನ ರಾಜ್‌ನಗರದಲ್ಲಿ ನಡೆದಿದೆ.
ಮೃತ ವ್ಯಕ್ತಿ ರೇಷನ್ ಡಿಪೋ ಮಾಲೀಕ ಅನಿಲ್ ಶರ್ಮಾ ಎಂದು ತಿಳಿದುಬಂದಿದೆ. ಪತ್ನಿ ಪೂನಂ, ಮಗಳು ಪ್ರಾಚಿ ಹಾಗೂ ಮಗ ಅನ್ಶುವನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.
ಪೂನಂ ಮಾವ ನಫೆ ಸಿಂಗ್ , ಅತ್ತೆ, ಭಾವ ನವೀನ್, ಅವರ ಪತ್ನಿ ಕವಿತಾ ಕೆಲವು ವರ್ಷಗಳಿಂದ ಮಾನಸಿಕ ಹಿಂಸೆ ನೀಡುತ್ತಿದ್ದರು. ಆಸ್ತಿ ವಿಚಾರದಲ್ಲಿ ಬೆದರಿಕೆ ಹಾಕಿದ್ದರು ಎಂದು ಪೂನಮ್ ಸಹೋದರ ಮಾಹಿತಿ ನೀಡಿದ್ದಾರೆ.
ಮೂಲತಃ ಹರಿಯಾಣದ ಜಿಂದ್ ನಗರದ ಸಮೀಪ ಮೊರ್ಖಿ ಗ್ರಾಮದ ನಿವಾಸಿಯಾಗಿದ್ದ ಅನಿಲ್ ಕುಟುಂಬ ಸಮೇತ ರಾಜ್ ನಗರದಲ್ಲಿ ನೆಲೆಸಿದ್ದರು. ಅನಿಲ್ ಮನೆಗೆ ಬಂದಿದ್ದ ವ್ಯಕ್ತಿ ಸಾಕಷ್ಟು ಬಾರಿ ಕರೆದಾಗ ಯಾರೂ ಕೂಡ ಮನೆಯಿಂದ ಹೊರಬಂದಿರಲಿಲ್ಲ.

ಬಳಿಕ ಅನಿಲ್ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ. ಬಳಿಕ ಮನೆಯ ಛಾವಣಿ ಮೂಲಕ ಅನಿಲ್ ಮನೆಗೆ ಜಿಗಿದು ಬಾಗಿಲು ಮುರಿದು ಒಳಗೆ ಹೋದಾಗ ರಕ್ತದ ಮಡುವಿನಲ್ಲಿ ನಾಲ್ಕು ಶವಗಳಿದ್ದವು.
ಅನಿಲ್ ಅವರ ತಂದೆ ಅನಿಲ್ ಸಾಯುವ ದಿನವೂ ಕೂಡ ಬೆದರಿಕೆ ಹಾಕಿದ್ದರು. ಅದಾದ ಬಳಿಕವೇ ಅನಿಲ್ ಪೂನಮ್, ಇಬ್ಬರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪೂನಮ್ ಸಹೋದರ ನೀಡಿರುವ ದೂರಿನ ಆಧಾರದ ಮೇಲೆ ಒಟ್ಟು ಆರು ಮಂದಿಯನ್ನು ಬಂಧಿಸಲಾಗಿದೆ.












Click it and Unblock the Notifications