ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಧು ಒಬ್ಬ ಅಸಮರ್ಥ ವ್ಯಕ್ತಿ ಎಂದು ಮೊದಲೇ ಹೇಳಿದ್ದೆ: ಅಮರಿಂದರ್

|
Google Oneindia Kannada News

ಚಂಡೀಗಢ, ಜನವರಿ 24: ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನವಜೋತ್‌ ಸಿಂಗ್ ಸಿಧು ಅವರ ವಿರುದ್ಧ ವ್ಯಂಗ್ಯವಾಡಿದ್ದಾರೆ.

ನವಜೋತ್‌ಸಿಂಗ್ ಸಿಧುಗೆ ಮೆದುಳೇ ಇಲ್ಲ, ಇಂತಹ ಅಸಮರ್ಥ ವ್ಯಕ್ತಿಯನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಡಿ ಎಂದು ಪ್ರಿಯಾಂಕಾ ಗಾಂಧಿಗೆ ಐದು ವರ್ಷಗಳ ಹಿಂದೆಯೇ ಸಲಹೆ ನೀಡಿದ್ದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯಲ್ಲಿ ಪ್ರಸ್ತುತ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಹಾಗೂ ಇತರೆ ಕೆಲವು ಕಾಂಗ್ರೆಸ್ ನಾಯಕರು ಭಾಗಿಯಾಗಿರುವ ಕುರಿತು ಮಾಹಿತಿ ಪಡೆದಿದ್ದರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ.

ಪಂಜಾಬ್‌ ಚುನಾವಣೆ: ಕ್ಯಾಪ್ಟನ್‌ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಪಂಜಾಬ್‌ ಚುನಾವಣೆ: ಕ್ಯಾಪ್ಟನ್‌ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಪಂಜಾಬ್ ವಿಧಾನಸಭೆ ಚುನಾವಣೆಗೆ ಪಂಜಾಬ್ ಲೋಕ ಕಾಂಗ್ರೆಸ್ ನ 22 ಅಭ್ಯರ್ಥಿಗಳ ಹೆಸರನ್ನು ಇಂದು ಪ್ರಕಟಿಸಿದ್ದಾರೆ.

Navjot Singh Sidhu Has No Brains, Totally Incompetent: Amarinder Singh

ಕ್ಯಾಪ್ಟನ್ ಪಟಿಯಾಲ ಅರ್ಬನ್ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ. ಇನ್ನೆರಡು ದಿನಗಳಲ್ಲಿ ಎರಡನೇ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಕ್ಯಾಪ್ಟನ್ ಅಮರಿಂದರ್ ಸಿಂಗ್ ಹೇಳಿದ್ದಾರೆ.

ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಪಕ್ಷವು 38 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಇದೇ ಮೊದಲ ಬಾರಿಗೆ ಅಮರಿಂದರ್ ಕಾಂಗ್ರೆಸ್ ತೊರೆದು ಅಖಾಡಕ್ಕೆ ಇಳಿದಿದ್ದಾರೆ. ಈ ಬಾರಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಒಂಭತ್ತು ಜಾಟ್ ಸಿಖ್, ನಾಲ್ವರು ದಲಿತರು, ಮೂವರು ಒಬಿಸಿ, ಐವರು ಹಿಂದೂಗಳು ಮತ್ತು ಒಬ್ಬ ಮಹಿಳೆಗೆ ಪಕ್ಷವು ಈ ಬಾರಿ ಟಿಕೆಟ್ ನೀಡಿದೆ.

ಈ ಬಾರಿ ಪಂಜಾಬ್‌ನಲ್ಲಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಬಿಜೆಪಿ ಮತ್ತು ಶಿರೋಮಣಿ ಅಕಾಲಿದಳ ಯುನೈಟೆಡ್‌ನೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ಬಿಜೆಪಿ ತನ್ನ 35 ಅಭ್ಯರ್ಥಿಗಳನ್ನು ಘೋಷಿಸಿದೆ. ಅದೇ ಸಮಯದಲ್ಲಿ ಶಿರೋಮಣಿ ಅಕಾಲಿದಳ ಸಂಯುಕ್ತ ಕೂಡ 14 ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ.

ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಎಸ್‌ಎಡಿ (ಸಂಯುಕ್ತ) ಜೊತೆಗಿನ ಮೈತ್ರಿಯ ಭಾಗವಾಗಿ ಪಂಜಾಬ್ ಲೋಕ ಕಾಂಗ್ರೆಸ್ ಪ್ರಸ್ತುತ ರಾಜ್ಯದಲ್ಲಿನ 117 ಸ್ಥಾನಗಳಲ್ಲಿ 37 ಸ್ಥಾನಗಳಲ್ಲಿ ಸ್ಪರ್ಧೆ ಮಾಡಲಿದೆ. ಪಕ್ಷಕ್ಕೆ ಇನ್ನೂ ಐದು ಸ್ಥಾನಗಳ ಕುರಿತು ಚರ್ಚೆಗಳು ನಡೆಯುತ್ತಿದೆ. ಪಂಜಾಬ್ ಲೋಕ ಕಾಂಗ್ರೆಸ್‌ನ 37 ಸ್ಥಾನಗಳಲ್ಲಿ ಗರಿಷ್ಠ 26 ಸ್ಥಾನಗಳು ಮಾಲ್ವಾ ಪ್ರದೇಶದಲ್ಲಿ ಬರುತ್ತದೆ. ಕ್ಯಾಪ್ಟನ್‌ ಅಮರಿಂದರ್ ಏಕಾಂಗಿಯಾಗಿ 2007ರಲ್ಲಿ ಕಾಂಗ್ರೆಸ್‌ಗೆ ಗೇಮ್‌ ಚೇಂಜರ್‌ ಆಗಿದ್ದರು.

ಕಾಂಗ್ರೆಸ್‌ನಲ್ಲಿ ವೈಮನಸ್ಸು ಉಂಟಾಗಿ ತನ್ನ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಅಮರಿಂದರ್‌ ಸಿಂಗ್‌ ಬಳಿಕ ಪಂಜಾಬ್ ಲೋಕ ಕಾಂಗ್ರೆಸ್ ಪಕ್ಷವನ್ನು ಸ್ಥಾಪನೆ ಮಾಡಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ಈಗ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.

ಅಮರಿಂದರ್‌ ಪಕ್ಷದ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ ಪಿಎಲ್‌ಸಿ ನಾಯಕ, "ಈ ಎಲ್ಲಾ ಅಭ್ಯರ್ಥಿಗಳು ಪ್ರಬಲ ರಾಜಕೀಯ ಅರ್ಹತೆಗಳನ್ನು ಹೊಂದಿದ್ದಾರೆ. ಆಯಾ ಕ್ಷೇತ್ರಗಳಲ್ಲಿ ಚಿರಪರಿಚಿತ ಮುಖಗಳು," ಎಂದು ಹೇಳಿದ್ದಾರೆ. ಈ ಮೊದಲ ಪಟ್ಟಿಯಲ್ಲಿ ಒಬ್ಬ ಮಹಿಳೆ ಇದ್ದಾರೆ. ಮಾಜಿ ಎಸ್‌ಎಡಿ ಶಾಸಕಿ ಮತ್ತು ದಿವಂಗತ ಡಿಜಿಪಿ ಇಝಾರ್ ಆಲಂ ಖಾನ್‌ರ ಪತ್ನಿ ಫರ್ಜಾನಾ ಆಲಂ ಖಾನ್ ಮಾಲ್ವಾ ಪ್ರದೇಶದ ಮಲೇರ್‌ಕೋಟ್ಲಾದಿಂದ ಸ್ಪರ್ಧಿಸಲಿದ್ದಾರೆ. ಕ್ಯಾಪ್ಟನ್ ಅಮರಿಂದರ್ ಸಿಂಗ್ ತಮ್ಮ ತವರು ಕ್ಷೇತ್ರವಾದ ಪಟಿಯಾಲ ಅರ್ಬನ್‌ನಿಂದ ಸ್ಪರ್ಧಿಸುವ ನಿರ್ಧಾರವನ್ನು ಶನಿವಾರವೇ ಘೋಷಿಸಿದ್ದಾರೆ.

ಮೊದಲ ಪಟ್ಟಿಯಲ್ಲಿ ಇತರ ಎಂಟು ಜಾಟ್ ಸಿಖ್‌ಗಳಿದ್ದಾರೆ. ನಾಲ್ವರು ಎಸ್‌ಸಿ ಸಮುದಾಯಕ್ಕೆ, ಮೂವರು ಒಬಿಸಿ ಸಮುದಾಯಕ್ಕೆ ಸೇರಿದವರಾಗಿದ್ದರೆ. ಐವರು ಹಿಂದೂ ಸಮುದಾಯವರು ಕೂಡಾ ಇದ್ದಾರೆ.

Recommended Video

IND vs SA: KL Rahul ಹಾಗು Kohli ನಡುವೆ ಮೈದಾನದಲ್ಲಿ ನಡೆದಿದ್ದೇನು | Oneindia Kannada

ಈ ಪೈಕಿ ಮೂವರು ಪಂಡಿತರು ಮತ್ತು ಇಬ್ಬರು ಅಗರ್‌ವಾಲ್‌ಗಳು ಆಗಿದ್ದಾರೆ. ಕ್ಯಾಪ್ಟನ್ ಅಮರಿಂದರ್ ಮತ್ತು ಫರ್ಜಾನಾ ಆಲಂ ಜೊತೆಗೆ ಮಾಲ್ವಾ ಪ್ರದೇಶದ ಇನ್ನೊಬ್ಬ ಪ್ರಮುಖ ಅಭ್ಯರ್ಥಿ ಎಂಸಿ ಪಟಿಯಾಲದ ಪ್ರಸ್ತುತ ಮೇಯರ್, ಸಂಜೀವ್ ಶರ್ಮಾ ಅಲಿಯಾಸ್ ಬಿಟ್ಟು ಶರ್ಮಾ ಕೂಡಾ ಸ್ಪರ್ಧಿಸಲಿದ್ದಾರೆ. ಇವರು ಹಲವಾರು ವರ್ಷಗಳಿಂದ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಶರ್ಮಾ ಪಟಿಯಾಲ ಗ್ರಾಮಾಂತರ ಕ್ಷೇತ್ರಕ್ಕೆ ಸ್ಪರ್ಧಿಸಲಿದ್ದಾರೆ.

English summary
Former Punjab Chief Minister Amarinder Singh on Sunday claimed that the state Congress chief Navjot Singh Sidhu has "no brains" and he had advised party president Sonia Gandhi five years ago not to induct "this incompetent man" in the party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X