'ಸಿಎಂ ಇಲ್ಲದ ಚುನಾವಣೆ ವರನಿಲ್ಲದೆ ಮೆರವಣಿಗೆ ಹೋದಂತೆ' ನವಜೋತ್ ಸಿಧು
ಚಂಡೀಗಢ, ಡಿಸೆಂಬರ್ 29: ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರು ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಪಂಜಾಬ್ ಮುಖ್ಯಮಂತ್ರಿ ಯಾರೆಂದು ಘೋಷಿಸಬೇಕೆಂದು ಪಕ್ಷದ ಹೈಕಮಾಂಡ್ ಅನ್ನು ಒತ್ತಾಯಿಸಿದ್ದಾರೆ. ಸಿಎಂ ಯಾರೆಂದು ಹೇಳದೆ ಚುನಾವಣೆಗೆ ಹೋಗುವುದು ವರ ಇಲ್ಲದೆ ಮೆರವಣಿಗೆಗೆ ಕರೆ ನೀಡಿದಂತೆ. ಇಂದು (ಡಿಸೆಂಬರ್ 29) ಸಿದ್ದು ತಮ್ಮದೇ ಪಕ್ಷದ ವಿರುದ್ಧ ವ್ಯಂಗ್ಯವಾಡಿದರು. ಜನರು ಚುನಾವಣೆಗೆ ಮುನ್ನ ಮುಖ್ಯಮಂತ್ರಿಯ ಮುಖವನ್ನು ನೋಡಲು ಬಯಸುತ್ತಾರೆ ಎಂದು ಹೇಳಿದರು.
ಉತ್ತರ ಪ್ರದೇಶ, ಪಂಜಾಬ್ ಸೇರಿದಂತೆ ಐದು ರಾಜ್ಯಗಳಲ್ಲಿ ವಿಧಾನ ಸಭೆ ಚುನಾವಣೆಯು ನಡೆಯಲಿದೆ. ಈ ಪಂಚ ರಾಜ್ಯಗಳಲ್ಲಿ ಉತ್ತರ ಪ್ರದೇಶ, ಗೋವಾ, ಉತ್ತರಾಖಂಡ ಹಾಗೂ ಮಣಿಪುರ ರಾಜ್ಯಗಳು ಬಿಜೆಪಿ ಆಡಳಿತ ಇರುವ ರಾಜ್ಯವಾದರೆ, ಪಂಜಾಬ್ ಮಾತ್ರ ಕಾಂಗ್ರೆಸ್ ಆಡಳಿತವಿರುವ ರಾಜ್ಯವಾಗಿದೆ. ಬಿಜೆಪಿ ಆಡಳಿತವಿರುವ ನಾಲ್ಕು ರಾಜ್ಯಗಳ ಪೈಕಿ ಉತ್ತರ ಪ್ರದೇಶವು ಪ್ರಮುಖ ರಾಜ್ಯವಾದರೂ ಕೂಡಾ ಈ ನಡುವೆ ಈ ಪಂಜ ರಾಜ್ಯಗಳಲ್ಲಿ ಕಾಂಗ್ರೆಸ್ ಆಡಳಿತವಿರುವ ಪಂಜಾಬ್ ರಾಜ್ಯದ ಮೇಲೆ ರಾಜಕೀಯ ವಲಯದಲ್ಲಿ ಅಧಿಕ ಗಮನವಿದೆ. ಇನ್ನು ಅಧಿಕವಾಗಿ ಇತ್ತೀಚೆಗೆ ಪಂಜಾಬ್ ಕಾಂಗ್ರೆಸ್‌ನಲ್ಲಿ ನಡೆದ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪಂಜಾಬ್‌ನತ್ತವೂ ದೇಶದ ಚಿತ್ತ ನೆಟ್ಟಿದೆ. ಪಂಜಾಬ್ ರಾಜ್ಯ ಮುಖ್ಯಸ್ಥ ಸ್ಥಾನಕ್ಕೆ ನವಜ್ಯೋತ್ ಸಿಂಗ್ ರಾಜೀನಾಮೆ ನೀಡಿದ ಬಳಿಕ ಸಿಎಂ ಯಾರೆಂದು ಸಾರ್ವಜನಿಕವಾಗಿ ಘೋಷಣೆ ಮಾಡುವಂತೆ ನವಜೋತ್ ಸಿಂಗ್ ಸಿಧು ಪತ್ತು ಹಿಡಿಸಿದ್ದಾರೆ.

ಪಕ್ಷದ ವಿರುದ್ಧ ಹರಿಹಾಯ್ದ ಸಿಧು
ಸುದ್ದಿ ವಾಹಿನಿಯೊಂದರೊಂದಿಗಿನ ಸಂವಾದದಲ್ಲಿ ಸಿಧು ಹೇಳಿದಿಷ್ಟು ಕಾಂಗ್ರೆಸ್ ಗೆ ತನ್ನ ಸಿಎಂ ಮುಖವನ್ನು ಘೋಷಿಸುವ ಮೂಲಕ ಚುನಾವಣೆಗೆ ಪ್ರವೇಶಿಸಬೇಕು. ಪಂಜಾಬ್‌ನ ಜನರು ಮುಖ್ಯಮಂತ್ರಿಯ ಮುಖ ಯಾರೆಂದು ತಿಳಿಯಲು ಬಯಸುತ್ತಾರೆ. ಹೀಗಿರುವಾಗ ಸಿಎಂ ಅಭ್ಯರ್ಥಿಯ ಹೆಸರು ಘೋಷಣೆ ಮಾಡದೆ ಕಾಂಗ್ರೆಸ್ ಚುನಾವಣೆಗೆ ಹೋದರೆ ನಷ್ಟವಾಗಬಹುದು. 2017ರಲ್ಲಿ ಆಮ್ ಆದ್ಮಿ ಪಕ್ಷವು ಮುಖ್ಯಮಂತ್ರಿಯ ಮುಖವನ್ನು ಘೋಷಿಸದ ಕಾರಣ ತನಗೆ ಹಾನಿಯಾಗಿದೆ ಎಂದು ಸಿಧು ಹೇಳುತ್ತಾರೆ. ಅದೇ ತಪ್ಪು ಮಾಡಿದರೆ ಕಾಂಗ್ರೆಸ್ ನಷ್ಟ ಅನುಭವಿಸಬಹುದು ಎಂದಿದ್ದಾರೆ.

'ಸಿಎಂ ಯಾರೆಂದು ಘೋಷಿಸಿ'
ಪಂಜಾಬ್‌ನಲ್ಲಿ ಯಾರ ಮಾರ್ಗಸೂಚಿ ಕೆಲಸ ಮಾಡುತ್ತದೆ. ಯಾರು ನಮ್ಮ ಸಿಎಂ ಆಗುತ್ತಾರೆ ಎಂಬುದನ್ನು ಪಂಜಾಬ್‌ನ ಜನರು ತಿಳಿಯಲು ಬಯಸುತ್ತಾರೆ ಎಂದು ಸಿಧು ಹೇಳಿದ್ದಾರೆ. ಕಳೆದ ಬಾರಿಯಂತೆ ಈ ಬಾರಿಯೂ ಕಾಂಗ್ರೆಸ್ ಸಿಎಂ ಮುಖ ಘೋಷಣೆ ಮಾಡಬೇಕು. ಅಷ್ಟಕ್ಕೂ ನಿಮ್ಮ ವರ ಯಾರು ಹೇಳಿ ಎಂದು ಚುನಾವಣೆಯಲ್ಲಿ ಜನ ನಮ್ಮನ್ನು ಕೇಳುತ್ತಾರೆ. ವರನಿಲ್ಲದೆ ಮೆರವಣಿಗೆ ಹೋಗಲು ಹೇಗೆ ಸಾಧ್ಯವಿಲ್ಲವೋ ಹಾಗೆ ಸಿಎಂ ಯಾರು ಎಂದು ತಿಳಿಯದೆ ಚುನಾವಣೆ ಹೋಗುದು ಕಷ್ಟ ಎಂದಿದ್ದಾರೆ. ಚುನಾವಣೆಯಲ್ಲಿ ಸಿಎಂ ಯಾರೆಂದು ತಿಳಿಯುವುದು ಬಳ ಮುಖ್ಯ. ವಾಸ್ತವವಾಗಿ, ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ, ಪಕ್ಷದ ರಾಜ್ಯಾಧ್ಯಕ್ಷ ನವಜೋತ್ ಸಿಧು ಮತ್ತು ಪಿಪಿಸಿಸಿ ಮಾಜಿ ಮುಖ್ಯಸ್ಥ ಸುನೀಲ್ ಜಾಖರ್ ಅವರ ಜಂಟಿ ನಾಯಕತ್ವದಲ್ಲಿ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಹೋರಾಡುವ ಬಗ್ಗೆ ಮಾತನಾಡಿದೆ. ಈ ಬಗ್ಗೆ ನವಜೋತ್ ಸಿಧು ಈಗ ಅಸಮ್ಮತಿ ವ್ಯಕ್ತಪಡಿಸಿದ್ದಾರೆ.

ಪಂಜಾಬ್‌ನಲ್ಲಿ ಮತ್ತೆ 'ಕೈ' ಕಿತ್ತಾಟ
ನವಜೋತ್ ಸಿಂಗ್ ಸಿಧು ತಮ್ಮದೇ ಪಕ್ಷದ ಸಿಎಂ ಚರಂಜಿತ್ ಚನ್ನಿ ಅವರನ್ನೂ ಗುರಿಯಾಗಿಸಿದ್ದಾರೆ. ಚನ್ನಿ ಅವರ ಹಲವು ಘೋಷಣೆಗಳನ್ನು ಉಲ್ಲೇಖಿಸಿದ ಸಿದ್ದು, ಎಲ್ಲರೂ ಘೋಷಣೆ ಮಾಡುತ್ತಾರೆ ಆದರೆ ಅದನ್ನು ಸಕಾರಗೊಳಿಸಲು ಸಾಧ್ಯವೇ ಇಲ್ಲ. ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಘೋಷಣೆ ಮಾಡಬೇಕು ಎಂದಿದ್ದಾರೆ. ಸಿಎಂ ಯಾರೆಂದು ಘೋಷಿಸಬೇಕು ಎಂದು ನವಜೋತ್ ಸಿಂಗ್ ಸಿಧು ಒತ್ತಾಯಿಸಿದ್ದಾರೆ.

ವಿವಾದಕ್ಕೀಡಾಗಿದ್ದ ನವಜೋತ್ ಸಿಂಗ್
ಈ ಹಿಂದೆ ಕಾಂಗ್ರೆಸ್ ಪಕ್ಷದ ಇಬ್ಬರು ಸದಸ್ಯರು ಪೊಲೀಸರ ಪ್ಯಾಂಟ್ ಒದ್ದೆ ಮಾಡುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳುವ ಮೂಲಕ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ವಿವಾದಕ್ಕೀಡಾಗಿದ್ದಾರೆ. ತಮ್ಮ ಪಕ್ಷದ ಸದಸ್ಯರನ್ನು ಹೊಗಳುವ ನವಜೋತ್ ಸಿಂಗ್ ಸಿಧು ಅವರ ಭಾಷಣದ ವಿಡಿಯೋ ವೈರಲ್ ಆಗಿದ್ದು, ಪಂಜಾಬ್ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದೆ. ಈ ಹಿನ್ನೆಲೆಯಲ್ಲಿ ನವಜೋತ್ ಸಿಂಗ್ ಸಿಧು ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ.












Click it and Unblock the Notifications