ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹರಿಯಾಣ: ಅಕ್ರಮ ಚಟುವಟಿಕೆಗಳ ವಿರುದ್ಧ ಕಾರ್ಯಾಚರಣೆ: 960ಕ್ಕೂ ಹೆಚ್ಚು ಬಂಧನ

|
Google Oneindia Kannada News

ಚಂಡಿಗಢ, ಸೆಪ್ಟೆಂಬರ್ 7: ಅಕ್ರಮ ಚಟುವಟಿಕೆಗಳ ವಿರುದ್ಧ ಒಂದು ದಿನದ ಕಾರ್ಯಾಚರಣೆಯಲ್ಲಿ ಹರಿಯಾಣ ಪೊಲೀಸರು 960 ಕ್ಕೂ ಹೆಚ್ಚು ಜನರನ್ನು ಬಂಧಿಸಿ, 710 ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ.

ಹರಿಯಾಣ ಪೊಲೀಸರು ಮಂಗಳವಾರ ರಾಜ್ಯದಲ್ಲಿ ಅಕ್ರಮ ಚಟುವಟಿಕೆಗಳ ವಿರುದ್ಧ ದಿನವಿಡೀ ನಡೆಸುತ್ತಿರುವ ಕಾರ್ಯಾಚರಣೆಯ ಭಾಗವಾಗಿ ಒಟ್ಟು 964 ಜನರನ್ನು ಬಂಧಿಸಿದ್ದಾರೆ ಮತ್ತು ಭಾರತೀಯ ದಂಡ ಸಂಹಿತೆ, ಶಸ್ತ್ರಾಸ್ತ್ರ ಮತ್ತು ಅಬಕಾರಿ ಕಾಯ್ದೆಯಡಿ 710 ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ರಾಜ್ಯದಲ್ಲಿ ಸರಣಿ ಸಂಘಟಿತ ದಾಳಿಗಳ ನಂತರ ಬಂಧನಗಳು ಮತ್ತು ಎಫ್‌ಐಆರ್‌ಗಳು ದಾಖಲಾಗಿವೆ.

ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಪಿಕೆ ಅಗರವಾಲ್ ಮಾತನಾಡಿ, ಕ್ರಿಮಿನಲ್ ಅಂಶಗಳ ವಿರುದ್ಧ ಪರಿಣಾಮಕಾರಿ ಕ್ರಮ ಕೈಗೊಳ್ಳಲು, ಬೀದಿ ಅಪರಾಧ, ಅಕ್ರಮ ಶಸ್ತ್ರಾಸ್ತ್ರಗಳ ಮೇಲೆ ನಿಯಂತ್ರಣ, ಮದ್ಯ ಮತ್ತು ಮಾದಕ ವಸ್ತುಗಳನ್ನು ಪತ್ತೆಹಚ್ಚುವ ಕಾರ್ಯ ನಡೆಸಲಾಗುತ್ತಿದೆ. ಇದರ ಭಾಗವಾಗಿ ಎಫ್‌ಐಆರ್‌ಗಳು ದಾಖಲಾಗಿದ್ದು ಹಲವರನ್ನು ಬಂಧಿಸಲಾಗಿದೆ ಎಂದಿದ್ದಾರೆ.

Haryana: Operation against illegal activities: Over 960 arrests, 710 FIRs

"ಪ್ರತಿ ಜಿಲ್ಲೆಯ ಅಪರಾಧಿಗಳು ಮತ್ತು ಸಮಾಜ ವಿರೋಧಿ ಶಕ್ತಿಗಳು ತಪ್ಪಿಸಿಕೊಳ್ಳಲು ಅವಕಾಶವನ್ನು ಬಿಡದೆ ಅವರ ಬೀದಿಗಳು ಅಥವಾ ಮನೆಗಳ ಮೇಲೆ ದಾಳಿ ಮಾಡುವ ಮೂಲಕ ಅವರ ಹೃದಯದಲ್ಲಿ ಕಾನೂನಿನ ಭಯವನ್ನು ಉಂಟುಮಾಡಲು ನಾವು ಬಯಸುತ್ತೇವೆ" ಎಂದು ಡಿಜಿಪಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕ್ಷೇತ್ರ ಘಟಕಗಳಿಂದ ಪಡೆದ ವರದಿಗಳ ಪ್ರಕಾರ, 645 ತಂಡಗಳಲ್ಲಿ ಸುಮಾರು 3,500 ಪೊಲೀಸ್ ಸಿಬ್ಬಂದಿ ಹಲವಾರು ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ. ಈ ದಾಳಿಗಳ ಸಮಯದಲ್ಲಿ, ತಂಡಗಳು 45 ಘೋಷಿತ ಅಪರಾಧಿಗಳು ಮತ್ತು 34 ಜಾಮೀನು ಸಂಬಂದಿತ ಅಪರಾಧಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದಾಳಿ ವೇಳೆ ಪಾಣಿಪತ್ ಜಿಲ್ಲೆಯಲ್ಲಿ 116, ಗುರುಗ್ರಾಮ್‌ನಲ್ಲಿ 108 ಮತ್ತು ಅಂಬಾಲಾದಲ್ಲಿ 102 ಆರೋಪಿಗಳನ್ನು ಬಂಧಿಸಲಾಗಿದೆ.

Haryana: Operation against illegal activities: Over 960 arrests, 710 FIRs

ಅಂತೆಯೇ, ಸೋನಿಪತ್ ಜಿಲ್ಲೆಯಲ್ಲಿ ಗರಿಷ್ಠ ಸಂಖ್ಯೆಯ ಘೋಷಿತ ಅಪರಾಧಿಗಳು ಬಂಧಿಸಲಾಗಿದೆ. ನಂತರ ಪಾಣಿಪತ್‌ನಲ್ಲಿ ಒಂಬತ್ತು ಮಂದಿಯನ್ನು ಬಂಧಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ. ಅಂತೆಯೇ, ಶಸ್ತ್ರಾಸ್ತ್ರ ಕಾಯ್ದೆಯಡಿ ಬಂಧಿತ ಆರೋಪಿಗಳಿಂದ 67 ಅಕ್ರಮ ಬಂದೂಕುಗಳು ಮತ್ತು 36 ಕಾಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಹಿರಿಯ ಪೊಲೀಸ್ ಅಧಿಕಾರಿಗಳು ಈ ದಾಳಿಗಳಲ್ಲಿ ಭಾಗವಹಿಸಿದ್ದರು ಮತ್ತು ಕ್ರಿಮಿನಲ್ ಅಂಶಗಳ ಸಂಪೂರ್ಣ ನಿಗ್ರಹವನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

English summary
Haryana Police on Tuesday arrested a total of 964 people and registered 710 FIRs under the Indian Penal Code, Arms and Excise Act as part of a day-long operation against illegal activities in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X