ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಜಾಬ್‌ನಲ್ಲಿ ಸಿಖ್ ಧ್ವಜಕ್ಕೆ ಅಗೌರವ ಆರೋಪ: ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

|
Google Oneindia Kannada News

ಚಂಡಿಗಢ, ಸೆಂಬರ್ 19: ಅಮೃತಸರದ ಗೋಲ್ಡನ್ ಟೆಂಪಲ್‌ನಲ್ಲಿ ವ್ಯಕ್ತಿಯನ್ನು ಥಳಿಸಿ ಕೊಂದ 24 ಗಂಟೆಗಳ ನಂತರ ಪಂಜಾಬ್‌ನಲ್ಲಿ ಮತ್ತೋರ್ವ ವ್ಯಕ್ತಿಯನ್ನು ಹತ್ಯೆ ಮಾಡಲಾಗಿದೆ. ಕಪುರ್ತಲಾ ಜಿಲ್ಲೆಯ ನಿಜಂಪುರ ಗ್ರಾಮದ ನಿವಾಸಿಗಳು ಇಂದು ಮುಂಜಾನೆ ಗುರುದ್ವಾರದಿಂದ ವ್ಯಕ್ತಿಯನ್ನು ಹಿಡಿದಿದ್ದಾರೆ ಎಂದು ಆರೋಪಿಸಲಾಗಿದೆ. ಮುಂಜಾನೆ 4 ಗಂಟೆಯ ಸುಮಾರಿಗೆ ವ್ಯಕ್ತಿ ನಿಶಾನ್ ಸಾಹಿಬ್ (ಸಿಖ್ ಧ್ವಜ)ವನ್ನು "ಅಗೌರವ" ತೋರಿರುವುದು ಕಂಡುಬಂದಿದೆ ಎಂದು ಗುಂಪು ಆರೋಪಿಸಿದೆ.

ಪೊಲೀಸ್ ತಂಡವು ಸ್ಥಳಕ್ಕೆ ತಲುಪಿ ವ್ಯಕ್ತಿಯನ್ನು ಕಸ್ಟಡಿಗೆ ತೆಗೆದುಕೊಂಡರೂ, ಸಿಖ್ ಗುಂಪುಗಳು ಆತನನ್ನು ತಮ್ಮ ಮುಂದೆ ಪ್ರಶ್ನಿಸುವಂತೆ ಒತ್ತಾಯಿಸಿವೆ. ಬಳಿಕ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದ ಸ್ಥಳೀಯರು ವ್ಯಕ್ತಿಯನ್ನು ಮನಬಂದಂತೆ ಥಳಿಸಿ ಕೊಂದಿದ್ದಾರೆ. ಗುರುದ್ವಾರದ ಕೇರ್‌ಟೇಕರ್ ಅಮರ್ಜಿತ್ ಸಿಂಗ್ ಫೇಸ್‌ಬುಕ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಿದ ವಿಡಿಯೊದಲ್ಲಿ, ಬೆಳಿಗ್ಗೆ 4 ಗಂಟೆಗೆ ನಿಟ್ನೆಮ್ (ದೈನಂದಿನ ಪ್ರಾರ್ಥನೆ) ಗಾಗಿ ಹೊರಬಂದಾಗ ಯುವಕರು ನಿಶಾನ್ ಸಾಹಿಬ್‌ಗೆ ಅಗೌರವ ತೋರುತ್ತಿರುವುದನ್ನು ನೋಡಿದ್ದೇನೆ ಎಂದು ಹೇಳಿದರು. "ನಾನು ಶಂಕಿತನಿಗೆ ಸವಾಲು ಹಾಕಿದಾಗ, ಅವನು ಕತ್ತಲೆಯಲ್ಲಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದನು ಆದರೆ ಸ್ವಲ್ಪ ಸಮಯದ ನಂತರ ಅವನು ಸಿಕ್ಕಿಬಿದ್ದನು" ಎಂದು ಸಿಂಗ್ ಹೇಳಿದರು.

ಇನ್ನೂ ಅಮೃತಸರದ ಗೋಲ್ಡನ್ ಟೆಂಪಲ್‌ನಲ್ಲಿ ಗುಂಪೊಂದು ವ್ಯಕ್ತಿಯನ್ನು ಹೊಡೆದು ಕೊಂದ ಘಟನೆ ಶನಿವಾರ ನಡೆದಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಗೋಲ್ಡನ್ ಟೆಂಪಲ್‌ನಲ್ಲಿ ದೈನಂದಿನ ಸಂಜೆ ಪ್ರಾರ್ಥನೆಯ ಸಮಯದಲ್ಲಿ ವ್ಯಕ್ತಿಯೊಬ್ಬ ಟೆಂಪಲ್ ಒಳಗಿನ ಗರ್ಭಗುಡಿಯ ರೇಲಿಂಗ್ ಮೇಲೆ ಹಾರಿ ಮತ್ತು ಸಿಖ್ಖರ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್ ಮುಂದೆ ಇರಿಸಲಾದ ಕತ್ತಿಯನ್ನು ಹಿಡಿಯಲು ಪ್ರಯತ್ನಿಸಿದನು. ಆಗ ಅಲ್ಲಿದ್ದವರು ಆತನನ್ನು ತಡೆದು ಥಳಿಸಿದ್ದಾರೆ. ಬಳಿಕ ವ್ಯಕ್ತಿ ಅಸುನೀಗಿದ್ದಾನೆ. ಘಟನೆ ಟಿವಿ ದೃಶ್ಯಗಳಲ್ಲಿ ಸೆರೆಯಾಗಿದೆ. ಅಮೃತಸರದ ಗೋಲ್ಡನ್ ಟೆಂಪಲ್‌ನಲ್ಲಿ ಹತ್ಯಾಕಾಂಡದ ಯತ್ನವನ್ನು ಪಂಜಾಬ್ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಅವರು ಖಂಡಿಸಿದ್ದಾರೆ.

After Golden Temple another killed in Punjab

ಪ್ರತಿದಿನ ಪ್ರಾರ್ಥನೆಯ ದೃಶ್ಯಗಳನ್ನು ಪ್ರಸಾರ ಮಾಡಲಾಗುತ್ತದೆ. ವಿಡಿಯೋ ಕ್ಲಿಪ್‌ನಲ್ಲಿ ಜನರು ವ್ಯಕ್ತಿಯನ್ನು ತಡೆಯಲು ಧಾವಿಸುತ್ತಿರುವುದನ್ನು ಕಾಣಬಹುದು. ಘಟನೆಯ ನಂತರ ವ್ಯಕ್ತಿಯು ಕೊಲ್ಲಲ್ಪಟ್ಟಿದ್ದಾನೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಅವನು ಎಲ್ಲಿಂದ ಬಂದಿದ್ದಾನೆ? ಯಾವಾಗ ಗೋಲ್ಡನ್ ಟೆಂಪಲ್‌ಗೆ ಪ್ರವೇಶಿಸಿದನು ಮತ್ತು ಅವನೊಂದಿಗೆ ಎಷ್ಟು ಜನರು ಇದ್ದರು ಎಂಬುದನ್ನು ಕಂಡುಹಿಡಿಯಲು ಎಲ್ಲಾ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಅಮೃತಸರದ ಉಪ ಪೊಲೀಸ್ ಆಯುಕ್ತ ಪರ್ಮಿಂದರ್ ಸಿಂಗ್ ಭಂಡಾಲ್ ಹೇಳಿದ್ದಾರೆ.

"ಇಂದು ಸಂಜೆ ಪ್ರಾರ್ಥನೆಯ ಸಮಯದಲ್ಲಿ, ತಲೆಯ ಮೇಲೆ ಹಳದಿ ಬಟ್ಟೆಯನ್ನು ಕಟ್ಟಿಕೊಂಡಿದ್ದ ಸುಮಾರು 20 ರಿಂದ 25 ವರ್ಷ ವಯಸ್ಸಿನ ವ್ಯಕ್ತಿ ಬೇಲಿ ಹಾರಿ ಸುತ್ತುವರಿದ ಪ್ರದೇಶಕ್ಕೆ ಪ್ರವೇಶಿಸಿದನು. ಈ ವೇಳೆ ದೇವಸ್ಥಾನದ ಒಳಗೆ ಪ್ರಾರ್ಥನೆ ಸಲ್ಲಿಸಲಾಗುತ್ತಿತ್ತು. ಒಳಗಿದ್ದ ಜನರು ಅವನನ್ನು ಹಿಡಿದು ಕಾರಿಡಾರ್‌ಗೆ ಕರೆದೊಯ್ದರು. ಅಲ್ಲಿ ಹಿಂಸಾತ್ಮಕ ವಾಗ್ವಾದ ನಡೆಯಿತು ಮತ್ತು ಅವನು ಥಳಿತದಿಂದ ಸಾವನ್ನಪ್ಪಿದ್ದಾನೆ" ಎಂದು ಅವರು ಹೇಳಿದರು.

"ಪ್ರವೇಶದ ವೇಳೆ ಮೃತ ವ್ಯಕ್ತಿ ಒಬ್ಬನೇ ಇದ್ದನು. ಪ್ರದೇಶದಲ್ಲಿ ಸಾಕಷ್ಟು ಸಿಸಿಟಿವಿ ಕ್ಯಾಮೆರಾಗಳು ಇರುವುದರಿಂದ ಎಲ್ಲಾ ವಿವರಗಳನ್ನು ಬಹಿರಂಗಪಡಿಸಲಾಗುವುದು. ನಮ್ಮ ತಂಡಗಳು ಜಾಗರೂಕರಾಗಿದ್ದು, ದೃಶ್ಯಗಳ ಮೂಲಕ ಶೋಧಿಸುತ್ತಿದ್ದಾರೆ. ನಾಳೆ ಪೋಸ್ಟ್‌ಮಾರ್ಟಮ್ ಮಾಡಲಾಗುತ್ತದೆ. ಅವರು ಎಲ್ಲಿಂದ ಬಂದವರು ಎಂಬುದನ್ನು ನಾವು ಪರಿಶೀಲಿಸುತ್ತೇವೆ," ಎಂದು ಭಂಡಾಲ್ ಸೇರಿಸಲಾಗಿದೆ. ಆ ವ್ಯಕ್ತಿ ಉತ್ತರ ಪ್ರದೇಶಕ್ಕೆ ಸೇರಿದವರು ಎಂದು ಅವರು ಹೇಳಿರುವುದಾಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ, ಅವರ ಪಕ್ಷ ಹತ್ಯೆ ಪ್ರಕರಣಗಳನ್ನು ನಿರ್ವಹಿಸುವಲ್ಲಿ ನಿರ್ಲಕ್ಷ್ಯ ವಹಿಸಿದೆ ಎಂಬ ಆರೋಪವನ್ನು ಎದುರಿಸುತ್ತಿದೆ. ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಟ್ವಿಟರ್‌ನಲ್ಲಿ ಘಟನೆಯನ್ನು ಖಂಡಿಸಿದ್ದಾರೆ. "ಶ್ರೀ ಹರಿಮಂದಿರ ಸಾಹಿಬ್‌ನ ಗರ್ಭಗುಡಿಯಲ್ಲಿ ದಾಳಿ ಮಾಡಲು ಪ್ರಯತ್ನಿಸಿದ್ದು ಅತ್ಯಂತ ದುರದೃಷ್ಟಕರ ಮತ್ತು ಹೇಯ ಕೃತ್ಯವನ್ನು ಸಿಎಂ ಚರಂಜಿತ್ ಚನ್ನಿ ಬಲವಾಗಿ ಖಂಡಿಸಿದ್ದಾರೆ" ಈ ವಿಷಯವನ್ನು ಕೂಲಂಕಷವಾಗಿ ತನಿಖೆ ಮಾಡಲು ಮತ್ತು "ನಿಜವಾದ ಪಿತೂರಿಗಾರರನ್ನು" ಪತ್ತೆ ಮಾಡುವಂತೆ ರಾಜ್ಯ ಪೊಲೀಸರಿಗೆ ನಿರ್ದೇಶನ ನೀಡಿದರು.

Posted by Baba Amarjit Singh on Saturday, December 18, 2021

English summary
Another person has been killed in Punjab 24 hours after he was beaten to death at the Golden Temple in Amritsar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X