ಗುರುಗ್ರಾಮ ಜಾತ್ರೆಯಲ್ಲಿ ಪ್ರಸಾದ ಸೇವಿಸಿ 28 ಮಂದಿ ಆಸ್ಪತ್ರೆಗೆ ದಾಖಲು
ಗುರುಗ್ರಾಮ ಏಪ್ರಿಲ್ 13: ಹರಿಯಾಣದ ಗುರುಗ್ರಾಮ ಜಾತ್ರೆಯಲ್ಲಿ ವಿಷಯುಕ್ತ ಪ್ರಸಾದ ಸೇವಿಸಿ 28 ಮಂದಿ ಆಸ್ಪತ್ರೆಗೆ ದಾಖಲಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಕಲಬೆರಕೆ ಪ್ರಸಾದ ಸೇವಿಸಿ ಹಲವಾರು ಮಕ್ಕಳು ಸೇರಿದಂತೆ 28 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಫರೂಖ್‌ನಗರ ಸಮೀಪದ ಮುಬರಿಕ್‌ಪುರದಲ್ಲಿ ಮಂಗಳವಾರ ರಾತ್ರಿ ನಡೆದ ಜಾತ್ರೆಯಲ್ಲಿ ಈ ಘಟನೆ ನಡೆದಿದೆ. ವರದಿಗಳ ಪ್ರಕಾರ, ಜಾತ್ರೆಯಲ್ಲಿ ಜನರಿಗೆ ಅಮಲು ಮಿಶ್ರಿತ ರಸವನ್ನು ನೀಡಲಾಗಿದೆ.

ಜ್ಯೂಸ್ ಕುಡಿದ ನಂತರ 8-10 ಮಕ್ಕಳು ಸೇರಿದಂತೆ ಸುಮಾರು 28 ಜನರು ಅಸ್ವಸ್ಥರಾಗಿದ್ದು, ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಕುರಿತು ಗುರುಗ್ರಾಮ ಪೊಲೀಸರು ತನಿಖೆ ಆರಂಭಿಸಿದ್ದಾರೆ.












Click it and Unblock the Notifications