ಹಣ ಹಂಚುತ್ತಿರುವಾಗ ಸಿಕ್ಕಿಬಿದ್ದ ಜಿ.ಪಂ ಸದಸ್ಯ ಪೊಲೀಸರ ವಶಕ್ಕೆ
ಗುಂಡ್ಲುಪೇಟೆಯ ಬರಗಿ ಜಿ.ಪಂ ಸದಸ್ಯ ಕಾಂಗ್ರೆಸ್ ನ ಚೆನ್ನಪ್ಪ ಮತದಾರರಿಗೆ ಹಣ ಹಂಚುತ್ತಿದ್ದರು. ಈ ವೇಳೆ ಒಂದು ಲಕ್ಷ ರೂ. ಸಮೇತ ಸೆಕ್ಟರ್ ಅಧಿಕಾರಿಗಳಿಗೆ ಚೆನ್ನಪ್ಪ ಸಿಕ್ಕಿ ಬಿದ್ದಿದ್ದಾರೆ.
ಗುಂಡ್ಲುಪೇಟೆ, ಏಪ್ರಿಲ್ 5: ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಮತಹಾಕುವಂತೆ ಮತದಾರರಿಗೆ ಹಣ ಹಂಚುತ್ತಿರುವಾಗ ಜಿಲ್ಲಾಪಂಚಾಯತ್ ಸದಸ್ಯನೋರ್ವನನ್ನು ವಶಕ್ಕೆ ಪಡೆದ ಘಟನೆ ನಡೆದಿದೆ.
ಗುಂಡ್ಲುಪೇಟೆಯ ಬರಗಿ ಜಿ.ಪಂ ಸದಸ್ಯ ಕಾಂಗ್ರೆಸ್ ನ ಚೆನ್ನಪ್ಪ ಮತದಾರರಿಗೆ ಹಣ ಹಂಚುತ್ತಿದ್ದರು. ಈ ವೇಳೆ ಒಂದು ಲಕ್ಷ ರೂ. ಸಮೇತ ಸೆಕ್ಟರ್ ಅಧಿಕಾರಿಗಳಿಗೆ ಚೆನ್ನಪ್ಪ ಸಿಕ್ಕಿ ಬಿದ್ದಿದ್ದಾರೆ. ಗುಂಡ್ಲುಪೇಟೆ ಠಾಣೆಯಲ್ಲಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಠಾಣೆಯ ಮುಂದೆ ಮಾಜಿ ಸಚಿವ ರೇಣುಕಾಚಾರ್ಯ ನೇತೃತ್ವದಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಯಿತು.












Click it and Unblock the Notifications