ಮೇಲೂರು ಕೆರೆಯಲ್ಲಿ ತೇಲಿದ ಮಹಿಳೆ & ಬಾಲಕನ ಶವ ಪತ್ತೆ

ಚಾಮರಾಜನಗರ, ನವೆಂಬರ್, 09: ಇಂದು (ನವೆಂಬರ್‌ 09) ಮಹಿಳೆ ಮತ್ತು ಬಾಲಕನ ಶವಗಳು ಪತ್ತೆಯಾಗಿರುವ ಘಟನೆ ಚಾಮರಾಜನಗರ ತಾಲೂಕಿನ ಯಾನಗಳ್ಳಿ ಸಮೀಪದ ಮೇಲೂರು ಕೆರೆಯಲ್ಲಿ ನಡೆದಿದೆ. ಹಾಗಾದರೆ ಆ ಮಹಿಳೆಯ ಹಿನ್ನೆಲೆ ಏನು ಹಾಗೂ ಇದಕ್ಕೆ ಕಾರಣ ಏನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಮೊದಲು ಬಾಲಕನ ಶವ ಮೇಲೆ ಬಂದಿದ್ದು, ಬಳಿಕ ಮಹಿಳೆ ಶವವೂ ತೇಲಿದೆ‌.‌ ಮೇಲ್ನೋಟಕ್ಕೆ ತಮಿಳುನಾಡಿನ ಮೂಲದವರು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಇನ್ನೂ ಮೃತರ ಗುರುತು ಹಾಗೂ ಸಾವಿಗೆ ಕಾರಣ ಏನೆಂದು ತಿಳಿದುಬಂದಿಲ್ಲ.

Woman amp amp boy Body found in Meluru lake

ಇನ್ನು ಸ್ಥಳೀಯರ ಮಾಹಿತಿ ಮೇರೆಗೆ ಚಾಮರಾಜನಗರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಶವಗಳನ್ನು ಮೇಲಕ್ಕೆತ್ತಿ ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಬದುಕಿದ್ದವರ ಮರಣ ಪತ್ರ: ಸಾಮಾನ್ಯವಾಗಿ ಮರಣ ಹೊಂದಿದವರ ಮರಣ ಪತ್ರವನ್ನು ಕೊಡಲಾಗುತ್ತಿದೆ. ಆದರೆ ಇದೀಗ ವಿಚಿತ್ರ ಎಂಬಂತೆ ಎದುರಿಗೆ ಕುಳಿತ ವ್ಯಕ್ತಿಗೆ ಮರಣ ಪ್ರಮಾಣ ಪತ್ರ ಕೊಟ್ಟು ಎಲ್ಲರನ್ನೂ ಹೌಹಾರುವಂತೆ ಮಾಡಿರುವ ಘಟನೆ ಕೊಳ್ಳೇಗಾಲ ನಗರಸಭೆಯಲ್ಲಿ ನಡೆದಿದೆ. ಹಾಗಾದರೆ ಮುಂದಾಗಿದ್ದೇನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಕೊಳ್ಳೇಗಾಲ ನಗರಸಭೆ ಸಿಬ್ಬಂದಿಯ ಎಡವಟ್ಟು ಕಂಡು ದಾಖಲೆಯಲ್ಲಿ ಮೃತಪಟ್ಟು ದೈಹಿಕವಾಗಿ ಬದುಕಿರುವ ವ್ಯಕ್ತಿ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಏನಿದು ಎಡವಟ್ಟು?: ಕೊಳ್ಳೇಗಾಲದ ಕುರುಬರ ಬೀದಿ ನಿವಾಸಿಯಾದ ಶಂಕರ ಎಂಬವರು, ನಿಧನ ಹೊಂದಿದ ತಮ್ಮ ತಾಯಿ ಪುಟ್ಟಮ್ಮ ಮರಣ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಕೊಳ್ಳೇಗಾಲ ನಗರಸಭೆಯ ಜನನ-ಮರಣ ನೋಂದಣಿ ವಿಭಾಗದ ಮಹಾದೇವಸ್ವಾಮಿ ಎಂಬವರು ನಿಧನ ಹೊಂದಿದ ಪುಟ್ಟಮ್ಮ ಬದಲಾಗಿ ಬದುಕಿರುವ ಶಂಕರ್‌ಗೆ ಮರಣ ಪ್ರಮಾಣ ಪತ್ರ ಕೊಟ್ಟು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಬಳಿ ಆಕ್ರೋಶಗೊಂಡ ಶಂಕರ್‌ ಆತನ ಮುಂದೆ ಜೀವಂತವಾಗಿ ಕೂತಿದ್ದರೂ, ಅರ್ಜಿಯಲ್ಲಿ ಪುಟ್ಟಮ್ಮ ಎಂದು ಬರೆಯಲಾಗಿತ್ತು. ಆದರೂ ಕರ್ತವ್ಯ ಲೋಪ‌ ಎಸಗಿ ಮರಣ ಪ್ರಮಾಣ ಪತ್ರ ಕೊಟ್ಟಿದ್ದನ್ನು ಕೂಡಲೇ ಸರಿಪಡಿಸಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+