ಹಿರಿಕಾಟಿ ಕಲ್ಲು ಕ್ವಾರಿಯಲ್ಲಿ ಸ್ಫೋಟ: ಕಾರ್ಮಿಕರ ಕಾಲಿಗೆ ಗಾಯ

ಚಾಮರಾಜನಗರ, ಜುಲೈ 23: ಅಕ್ರಮ ಗಣಿಗಾರಿಕೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರೂ ಗುಂಡ್ಲುಪೇಟೆ ತಾಲೂಕು ವ್ಯಾಪ್ತಿಯಲ್ಲಿ ಗಣಿಗಾರಿಕೆ ಮುಂದುವರಿದಿದೆ. ಈ ನಡುವೆ, ಅಕ್ರಮ ಬಿಳಿಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಸಂದರ್ಭ ಕಲ್ಲು ಸ್ಫೋಟಗೊಂಡು ಬಂಡೆ ಉರುಳಿ ಬಿದ್ದ ಪರಿಣಾಮ ಇಬ್ಬರು ಕಾರ್ಮಿಕರ ಕಾಲುಗಳಿಗೆ ಗಂಭೀರ ಗಾಯವಾಗಿರುವ ಘಟನೆ ಹಿರಿಕಾಟಿ ಕ್ವಾರಿಯಲ್ಲಿ ನಡೆದಿದೆ.

ಹಿರಿಕಾಟಿ ಗ್ರಾಮದ ಸರ್ಕಾರಿ ಭೂಮಿ ಸರ್ವೆ ನಂ.108ರಲ್ಲಿ ಅಕ್ರಮ ಬಿಳಿಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಇಲ್ಲಿ ಕೆಲಸ ಮಾಡುತ್ತಿದ್ದ ಚಿಕ್ಕಾಟಿ ಗ್ರಾಮದ ಸುಂದ್ರ ಹಾಗೂ ಮಹದೇವಸ್ವಾಮಿ ಎಂಬಿಬ್ಬರು ಇದೀಗ ಕಾಲು ಕಳೆದುಕೊಂಡು ಜೀವನ್ಮರಣ ಸ್ಥಿತಿಯಲ್ಲಿದ್ದಾರೆ.

ಹಿರಿಕಾಟಿಯಲ್ಲಿರುವ ಹರಿಜನ ಗಿರಿಜನ ಮತ್ತು ಇತರೆ ಅರೆಬಂಡೆ ಕೆಲಸಗಾರರ ಸಂಘವು ಬಿಳಿಕಲ್ಲು ಗಣಿಗಾರಿಕೆಯನ್ನು ನಡೆಸುತ್ತಿದ್ದು, ಬೆಳಿಗ್ಗೆ ಬಂಡೆ ಕಲ್ಲನ್ನು ಸಿಡಿಮದ್ದಿನಿಂದ ಸ್ಪೋಟಿಸಿ ಒಡೆಯುತ್ತಿದ್ದಾಗ ಬಂಡೆಯೊಂದು ಉರುಳಿ ಕೂಲಿ ಕೆಲಸ ಮಾಡುತ್ತಿದ್ದ ಸುಂದ್ರ ಎಂಬುವರ ಬಲಗಾಲು ತುಂಡಾಗಿ ಎಡಕಾಲಿಗೆ ಗಂಭೀರ ಗಾಯವಾಗಿದ್ದರೆ, ಮತ್ತೊಬ್ಬ ಕಾರ್ಮಿಕ ಮಹದೇವಸ್ವಾಮಿಯ ಎರಡು ಕಾಲುಗಳಿಗೂ ಪೆಟ್ಟಾಗಿದೆ.

two workers injured in Explosion at Hirikati stone quarry

ಕೂಡಲೇ ಗಾಯಾಳುಗಳನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನಾ ಸ್ಥಳಕ್ಕೆ ಬೇಗೂರು ಪೊಲೀಸ್ ಠಾಣೆಯ ಪಿ.ಎಸ್.ಐ,ರೋಹಿತ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಮಹಜರು ನಡೆಸಿ ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಈ ಘಟನೆ ನಡೆಯುತ್ತಿದ್ದಂತೆಯೆ ಗಣಿಗಾರಿಕೆ ನಡೆಯುತ್ತಿರುವ ಸ್ಥಳಕ್ಕೆ ಹೋದಾಗ ಗಣಿಗಾರಿಕೆಯಲ್ಲಿನ ಮತ್ತೊಂದು ಮುಖದ ದರ್ಶನವಾಗಿದೆ. ಇಲ್ಲಿ ಕಾರ್ಮಿಕರನ್ನು ಪ್ರಾಣಿಗಳಿಗಿಂತಲೂ ಕಡೆಯಾಗಿ ದುಡಿಸಿಕೊಳ್ಳುತ್ತಿದ್ದು, ಅವರಿಗೆ ಯಾವುದೇ ರೀತಿಯ ಆರ್ಥಿಕ ಭದ್ರತೆ ನೀಡದೆ ದುಡಿಸಿಕೊಳ್ಳುತ್ತಿರುವುದು ಕಂಡು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+