• search
 • Live TV
ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಾಮರಾಜನಗರ; 25 ಮಂದಿ ನೌಕರರ ವರ್ಗಾವಣೆ, 61 ಬಸ್ ಸಂಚಾರ

By ಚಾಮರಾಜನಗರ ಪ್ರತಿನಿಧಿ
|

ಚಾಮರಾಜನಗರ, ಏಪ್ರಿಲ್ 11; ಸಾರಿಗೆ ನೌಕರರ ಮುಷ್ಕರದ ಹಿನ್ನಲೆಯಲ್ಲಿ ಕರ್ನಾಟಕ ಸರ್ಕಾರ ನೌಕರರನ್ನು ವರ್ಗಾವಣೆ ಮಾಡುತ್ತಿದೆ. ಏಪ್ರಿಲ್ 7ರಿಂದ ಬಸ್ ಸಂಚಾರ ಸ್ಥಗಿತಗೊಳಿಸಿ ನೌಕರರು ಮುಷ್ಕರವನ್ನು ನಡೆಸುತ್ತಿದ್ದಾರೆ.

ಸಾರಿಗೆ ನೌಕರರ ಮುಷ್ಕರದ 4ನೇ ದಿನವಾದ ಶನಿವಾರ ಚಾಮರಾಜನಗರ ವಿಭಾಗದಿಂದ 61 ಸರ್ಕಾರಿ ಸಾರಿಗೆ ಬಸ್‌ಗಳು ಕಾರ್ಯಾಚರಣೆ ನಡೆಸಿವೆ. 150 ಮಂದಿ ನೌಕರರು ಕೆಲಸಕ್ಕೆ ಹಾಜರಾಗಿದ್ದಾರೆ.

ಕೋಲಾರ: ಮುಷ್ಕರದ ಮಧ್ಯೆ ಬಸ್ ಓಡಿಸಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಚಾಲಕನಿಗೆ ಶ್ರದ್ಧಾಂಜಲಿಕೋಲಾರ: ಮುಷ್ಕರದ ಮಧ್ಯೆ ಬಸ್ ಓಡಿಸಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಚಾಲಕನಿಗೆ ಶ್ರದ್ಧಾಂಜಲಿ

ಮುಷ್ಕರಕ್ಕೆ ಕರೆ ನೀಡಿದ್ದ ಹಾಗೂ ಮುಷ್ಕರದ ನೇತೃತ್ವ ವಹಿಸಿದ್ದ ವಿಭಾಗದ 25 ಮಂದಿ ನೌಕರರನ್ನು ಪುತ್ತೂರು, ಕೋಲಾರ, ದಾವಣಗೆರೆ ವಿಭಾಗಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ಮೈಸೂರಿನ ಖಾಸಗಿ ಬಸ್ ಮಾಲೀಕರಿಗೆ ಎಚ್ಚರಿಕೆ ನೀಡಿದ ಡಿಸಿಪಿ ಮೈಸೂರಿನ ಖಾಸಗಿ ಬಸ್ ಮಾಲೀಕರಿಗೆ ಎಚ್ಚರಿಕೆ ನೀಡಿದ ಡಿಸಿಪಿ

ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ ಈ ಕುರಿತು ಮಾಹಿತಿ ನೀಡಿದ್ದಾರೆ. "ಚಾಮರಾಜನಗರ ವಿಭಾಗದಿಂದ ಶನಿವಾರ 61 ಬಸ್‌ ಕಾರ್ಯಾಚರಣೆ ನಡೆಸಿವೆ. ಚಾಲಕರು, ನಿರ್ವಾಹಕರು ಸೇರಿ 150 ಮಂದಿ ಶನಿವಾರ ಕರ್ತವ್ಯಕ್ಕೆ ಹಾಜರಾಗಿದ್ಧಾರೆ" ಎಂದು ಹೇಳಿದ್ದಾರೆ.

ಸಾರಿಗೆ ಮುಷ್ಕರ; ನೌಕರರಿಗೆ ಮತ್ತೊಂದು ಕರೆ ಕೊಟ್ಟ ಯಡಿಯೂರಪ್ಪ ಸಾರಿಗೆ ಮುಷ್ಕರ; ನೌಕರರಿಗೆ ಮತ್ತೊಂದು ಕರೆ ಕೊಟ್ಟ ಯಡಿಯೂರಪ್ಪ

ಶನಿವಾರ 61 ಕೆಎಸ್‌ಆರ್‌ಟಿಸಿ ಬಸ್‌ಗಳು ಮೈಸೂರು, ಗುಂಡ್ಲುಪೇಟೆ, ಮಹದೇಶ್ವರ ಬೆಟ್ಟ, ಕೊಳ್ಳೇಗಾಲಕ್ಕೆ ಸಂಚರಿಸಿವೆ. ಸಂಜೆ ಬೆಂಗಳೂರಿಗೆ ಎರಡು ಬಸ್‌ಗಳು ಸಂಚರಿಸಿವೆ. ಇದರ ಜೊತೆಗೆ ಖಾಸಗಿ ಬಸ್‌ಗಳು ಸಹ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ವಿವಿಧೆಡೆಗೆ ಸಂಚಾರ ನಡೆಸಿವೆ.

   ಕೊರೊನಾ ನಿಯಂತ್ರಿಸಲು ಎಲ್ಲರೂ ಲಸಿಕೆ ಪೆರಯಬೇಕೆಂದು ಕರೆ ನೀಡಿದ ಆದಿಚುಂಚನಗಿರಿ ಶ್ರೀಗಳು | Oneindia Kannada

   "ಬಸ್ ಸಂಚಾರ ನಡೆಸಿದ್ದರಿಂದ ಮುಷ್ಕರದ 4ನೇ ದಿನ ಪ್ರಯಾಣಿಕರಿಗೆ ಹೆಚ್ಚಿನ ಅನಾನುಕೂಲವಾಗಲಿಲ್ಲ. ಮುಷ್ಕರ ನಡೆಸುತ್ತಿರುವ ನೌಕರರನ್ನು ಕರ್ತವ್ಯಕ್ಕೆ ಹಾಜರಾಗಲು ಸೂಚನೆ ನೀಡಲಾಗಿದೆ. ಭಾನುವಾರ ಇನ್ನಷ್ಟು ಮಂದಿ ಕರ್ತವ್ಯಕ್ಕೆ ಹಾಜರಾಗುವ ಸಾಧ್ಯತೆ ಇದೆ" ಎಂದು ಶ್ರೀನಿವಾಸ್ ವಿಶ್ವಾಸ ವ್ಯಕ್ತಪಡಿಸಿದರು.

   English summary
   Transport employees strike entered 4th day in Karnataka. On April 10th 150 employees attend for work in Chamarajanagar bus depot and 61 bus run in the various routes.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   loader
   X