ಅಪಾಯವಿದ್ದರೂ ಶಿವನಸಮುದ್ರದ ವೆಸ್ಲಿ ಸೇತುವೆ ಬಳಿ ಪ್ರವಾಗರ ದಂಡು; ಪೊಲೀಸರು ಮೌನ
ಚಾಮರಾಜನಗರ, ನವೆಂಬರ್, 29: ಚಾಮರಾಜನಗರದ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರದ ವೆಸ್ಲಿ ಸೇತುವೆ ಬಳಿ ಅಪಾಯ ಇದೆ ಇಲ್ಲಿ ಪ್ರವಾಸಿಗರು ಬರಬಾರದು ಎಂದು ಸೂಚಿಸಲಾಗಿದೆ. ಆದರೂ ಕೂಡ ಇದನ್ನೆಲ್ಲ ಲೆಕ್ಕಿಸದೇ ಪ್ರವಾಸಿಗರು ಮಾತ್ರ ತಮ್ಮ ಕುಟುಂಬದೊಂದಿಗೆ ಬಂದು ಇಲ್ಲಿನ ನೀರಿನಲ್ಲಿ ಆಟ ಆಡುತ್ತಲೇ ಇದ್ದಾರೆ. ಹೆಚ್ಚಾಗಿ ಮಳೆ ಸುರಿದ ಕಾರಣ ಎರಡು ವರ್ಷಗಳ ಹಿಂದೆಯೇ ವೆಸ್ಲಿ ಸೇತುವೆಯ ಒಂದು ಭಾಗ ಕೊಚ್ಚಿ ಹೋಗಿತ್ತು. ಇನ್ನುಳಿದ ಭಾಗದ ಮೇಲೆ ಓಡಾಟಕ್ಕೆ ನಿರ್ಬಂಧವಿದೆ. ಆದರೂ ಇದನ್ನು ಲೆಕ್ಕಿಸದೇ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಮೋಜು ಮಸ್ತಿ ಮಾಡುತ್ತಿದ್ದಾರೆ.
ನದಿಯನ್ನು ಕಂಡ ಕೂಡಲೇ ನೀರಿಗೆ ಇಳಿಯುವವರ ಸಂಖ್ಯೆ ಹೆಚ್ಚಾಗಿದೆ. ಪ್ರವಾಸಿ ಸ್ಥಳಗಳಲ್ಲಿ ಎಚ್ಚರಿಕೆ ಫಲಕ ಹಾಕಿದ್ದರೂ, ಅದನ್ನು ನಿರ್ಲಕ್ಷಿಸಿ ನೀರಿಗೆ ಇಳಿಯುತ್ತಿದ್ದಾರೆ. ಇಂತಹವರಲ್ಲಿ ಹೊರ ಜಿಲ್ಲೆಗಳಿಂದ ಬಂದವರೇ ಹೆಚ್ಚಾಗಿದ್ದಾರೆ. ಅದರಲ್ಲೂ ಬೆಂಗಳೂರಿಗರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎನ್ನಲಾಗಿದೆ. ಭರಚುಕ್ಕಿ ಜಲಪಾತ ವೀಕ್ಷಣೆಗೆಂದು ಬಂದವರಲ್ಲಿ ಕೆಲವರು, ವೆಸ್ಲಿ ಸೇತುವೆ ಕೆಳಗಡೆ ನೀರಿನಲ್ಲಿ ಆಟವಾಡಲು ಹೋಗುತ್ತಾರೆ. ಮದ್ಯಪಾನ ಮಾಡಿ ನೀರಿನಲ್ಲಿ ಈಜಲು ತೆರಳುವುದು ಕೂಡ ನಡೆಯುತ್ತಿದ್ದು, ಇದಕ್ಕೂ ಕಡಿವಾಣ ಬೀಳಬೇಕಿದೆ ಎನ್ನುವ ಕೂಗುಗಳು ಎದ್ದಿವೆ.
ನದಿಗೆ ಇಳಿಯುವ ಸ್ಥಳದಲ್ಲಿ ತಾಲೂಕು ಆಡಳಿತ ವತಿಯಿಂದ ಎಚ್ಚರಿಕೆ ಫಲಕ ಹಾಕಲಾಗಿದೆ. ಆದರೂ ಪ‍್ರವಾಸಿಗರು ನೀರಿಗೆ ಇಳಿಯುತ್ತಿದ್ದಾರೆ. ಎಚ್ಚರಿಕೆ ಫಲಕ ಇಲ್ಲದಿರುವ ಕಡೆಗಳಲ್ಲಿ, ಸಿಬ್ಬಂದಿ ಇಲ್ಲದಿರುವ ಜಾಗದಲ್ಲಿ ಈಜಾಟ ಅಥವಾ ನೀರಿನಲ್ಲಿ ಆಟವಾಡುವುದಕ್ಕೆ ತೆರಳುತ್ತಾರೆ. ಇದಕ್ಕೆ ಕಡಿವಾಣ ಹಾಕದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಅಲ್ಲಿನ ಸ್ಥಳೀಯರು ಹೇಳುತ್ತಿದ್ದಾರೆ.

ಹುಲಿ ಸಂರಕ್ಷಿತ ಪ್ರದೇಶ ಸ್ಥಾಪನೆ ಹೇಗೆ?
ಇನ್ನು ರಾಜ್ಯವಷ್ಟೇ ಅಲ್ಲದೇ ದೇಶದ ಜನಪ್ರಿಯ ಹಾಗೂ ಟೈಗರ್ ಪ್ರಾಜೆಕ್ಟ್‌ನ ಮೊದಲ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಒಂದಾಗಿರುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವು 50ರ ಹೊಸ್ತಿಲಿಗೆ ಇಚ್ಚೀಗಷ್ಟೇ ಬಂದು ನಿಂತಿತ್ತು. 1973ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಬೆಂಗಾಲ್ ಟೈಗರ್ ಅನ್ನು ಉಳಿಸುವ ಸಲುವಾಗಿ ದೇಶದ 9 ಕಡೆಗಳಲ್ಲಿ ಹುಲಿ ಸಂರಕ್ಷಿತ ಪ್ರದೇಶಗಳನ್ನು ಘೋಷಣೆ ಮಾಡಿದ್ದರು. ಆಗಸ್ಟ್ 9ರ ಪಟ್ಟಿಯಲ್ಲಿ ಬಂಡೀಪುರವೂ ಒಂದಾಗಿದ್ದು, ಮೊದಲಿಗೆ ಕೇವಲ 12 ಹುಲಿಗಳಿದ್ದವು. ಇದೀಗ ಇಲ್ಲಿ ಹುಲಿಗಳದ್ದೇ ಆಡಳಿತ ಆಗಿರುವುದು ಸಂತಸದ ವಿಚಾರವಾಗಿದೆ.
ವರ್ಷಪೂರ್ತಿ ಕಾರ್ಯಕ್ರಮ ನಡೆಸಲು ಪ್ಲಾನ್
ಗುಂಡ್ಲುಪೇಟೆ ತಾಲೂಕಿನಲ್ಲಿರುವ ಬಂಡೀಪುರ ಅರಣ್ಯ, ಹುಲಿ ಸಂರಕ್ಷಿತ ಅರಣ್ಯವಾಗಿ 50ನೇ ವಸಂತಕ್ಕೆ ಕಾಲಿಟ್ಟಿತ್ತು. ಆದ್ದರಿಂದ ವರ್ಷಪೂರ್ತಿ ಕಾರ್ಯಕ್ರಮ ನಡೆಸಲು ಅರಣ್ಯ ಇಲಾಖೆ ಉದ್ದೇಶಿಸಿತ್ತು. 13 ವಲಯವಿರುವ 1,200 ಚದರ ಕಿಲೋ ಮೀಟರ್ ವ್ಯಾಪ್ತಿಯ ಅರಣ್ಯದಲ್ಲಿ ಆಗ ಕೇವಲ 10 ರಿಂದ 13 ಹುಲಿಗಳಷ್ಟೆ ಇದ್ದವು. ಇದಾದ ಬಳಿಕ ಉತ್ತಮವಾದ ಸಂರಕ್ಷಣೆಯಿಂದ ಇದೀಗ ಬಂಡೀಪುರದಲ್ಲಿ 140ಕ್ಕೂ ಹೆಚ್ಚು ಹುಲಿಗಳಿವೆ ಎಂದು ಕಳೆದ ಹುಲಿಗಣತಿ ವೇಳೆ ಅಂದಾಜು ಮಾಡಲಾಗಿತ್ತು. ಅಷ್ಟೇ ಅಲ್ಲದೆ ಉತ್ತಮವಾದ ಸಂರಕ್ಷಣೆಯಿಂದ ಕಾಡಿನಲ್ಲಿ ಪ್ರಾಣಿಗಳ ಭೇಟೆ ಆಗುತ್ತಿದ್ದ ಪ್ರಕರಣಗಳ ಸಂಖ್ಯೆಯಲ್ಲೂ ಇಳಿಕೆ ಕಂಡಿದೆ.
ಇದೀಗ ಹುಲಿಗಳಂತಹ ಮಾಂಸಹಾರಿ ಪ್ರಾಣಿಗಳಿಗೆ ಬೇಕಾದ ಬೇಟೆ ಪ್ರಾಣಿಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಈ ಕಾರಣದಿಂದಲೇ ಬಂಡೀಪುರದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿದೆ. ಇದರಿಂದಾಗಿಯೇ ಚಾಮರಾಜನಗರ ಜಿಲ್ಲೆಯನ್ನು ಹುಲಿಗಳ ನಾಡು ಎಂದು ಕರೆಯಲಾಗುತ್ತದೆ. ಬಂಡೀಪುರ ಹುಲಿ ಸಂರಕ್ಷಿತ ಅರಣ್ಯವಾಗಿ ಘೋಷಣೆಯಾದ ಸಂದರ್ಭದಲ್ಲಿ ಕಳ್ಳಬೇಟೆಯೂ ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಕಾನೂನುಗಳು ಕಠಿಣವಾದ ಹಿನ್ನೆಲೆ ವರ್ಷ ಕಳೆಯುತ್ತಿದ್ದಂತೆ ಕಳ್ಳಬೇಟೆ ಪ್ರಕರಣಗಳು ಕೂಡ ತೀರ ಕಡಿಮೆ ಆಗಿದೆ. ಇದರಿಂದ ಕಾಡು ಪ್ರಾಣಿಗಳ ಸಂತತಿಯೂ ಕೂಡ ದುಪ್ಪಟ್ಟಾಗಿದೆ.

ಬಂಡೀಪುರ 50ರ ವಸಂತ ಪೂರೈಸಿರುವ ಹಿನ್ನೆಲೆ ಅರಣ್ಯ ಇಲಾಖೆ ವತಿಯಿಂದ ಈ ಸಂಭ್ರಮವನ್ನು ವಿಭಿನ್ನವಾಗಿ ಆಚರಣೆ ಮಾಡಬೇಕು ಎಂಬ ಯೋಜನೆಯನ್ನು ಹಾಕಿಕೊಂಡಿತ್ತು. ಈ ಮೂಲಕ ಅರಣ್ಯ ಇಲಾಖೆಯಿಂದ ವರ್ಷ ಪೂರ್ತಿ ವಿಭಿನ್ನ ಕಾರ್ಯಕ್ರಮಗಳನ್ನು ನಡೆಸಲು ಚಿಂತಿಸಿತ್ತು. ಕಾಡು ಪ್ರಾಣಿಗಳ ಕುರಿತು ಸಾಕ್ಷ್ಯ ಚಿತ್ರ, ಪ್ರದರ್ಶನ, ಪರಿಸರ ಪ್ರಿಯರೊಂದಿಗೆ ಸಂವಾದ, ಅಧಿಕಾರಿಗಳಿಗೆ ಸನ್ಮಾನ, ಕಾರ್ಯಾಗಾರ ಸೇರಿದಂತೆ ಇನ್ನಿತರ ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲು ಸಿದ್ಧತೆ ನಡೆಸಲಾಗಿದೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ಡಾ.ರಮೇಶ್ ಕುಮಾರ್ ಮಾಹಿತಿ ನೀಡಿದ್ದರು.
ಪ್ರವಾಸಿಗರ ಮುಖ್ಯ ಆಕರ್ಷಣೆ ಸಫಾರಿ
ಬಂಡೀಪುರದಲ್ಲಿ ಈ ಅರಣ್ಯ ಪ್ರವಾಸಿಗರಿಗೆ ಬಹುಮುಖ್ಯ ಆಕರ್ಷಣೆ ಸಫಾರಿ ಆಗಿದ್ದು, ಇಲ್ಲಿಗೆ ದೇಶ, ವಿದೇಶಗಳಿಂದ ಜನರು ಅಧಿಕ ಸಂಖ್ಯೆಯಲ್ಲಿ ಆಗಮಿಸುತ್ತಲೇ ಇದ್ದಾರೆ. ದಿನದ ಬೆಳಗ್ಗೆ ಮತ್ತು ಸಂಜೆ ಸಫಾರಿಗೆ ವ್ಯವಸ್ಥೆಯಿದ್ದು, ಬಂಡೀಪುರಕ್ಕೆ ಆದಾಯದ ಮೂಲವೂ ಸಹ ಸಫಾರಿ ಆಗಿದೆ. ಇಲ್ಲಿ ಕೆಲವು ವರ್ಷಗಳ ಹಿಂದೆ ಇದ್ದ ಪ್ರಿನ್ಸ್ ಎಂಬ ಟೈಗರ್ ಪ್ರವಾಸಿಗರ ಅಚ್ಚುಮೆಚ್ಚಿನ ಪ್ರಾಣಿ ಆಗಿತ್ತು. ಯಾರಿಗೂ ಹೆದರದೇ ಸಫಾರಿ ವಾಹನಗಳ ಸಮೀಪದಲ್ಲೇ ತುಂಟಾಟ ಆಡುತ್ತಿದ್ದ ಪ್ರಿನ್ಸ್ ಟೈಗರ್ ವಿದೇಶಗಳಲ್ಲೂ ಹೆಸರುವಾಸಿಯಾಗಿತ್ತು. ಒಂದು ಕಾಲದಲ್ಲಿ ರಾಜ- ಮಹರಾಜರು ಬೇಟೆಯಾಡುತ್ತಿದ್ದ ಕಾಡು, ಕಳ್ಳರು ಅಟ್ಟಹಾಸ ಮೆರೆಯುತ್ತಿದ್ದ ಅರಣ್ಯ ಇದೀಗ ಹುಲಿಗಾಳ ಅವಾಸ ಸ್ಥಾನವಾಗಿದೆ.












Click it and Unblock the Notifications