ಫೋಟೋ ಕ್ಲಿಕ್: ಬಂಡೀಪುರದ ರಸ್ತೆ ಬದಿಯಲ್ಲೇ ಕಾಣುತ್ತಿವೆ ಹುಲಿಗಳು
ಗುಂಡ್ಲುಪೇಟೆ, ಜನವರಿ 6 : ಬಂಡೀಪುರ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ ಹುಲಿಗಳ ಓಡಾಟ ಹೆಚ್ಚಾಗಿದ್ದು, ಭಾನುವಾರದಿಂದ ಹುಲಿಗಣತಿ ಆರಂಭವಾಗುತ್ತಿರುವ ಬೆನ್ನಲ್ಲೇ ರಸ್ತೆ ಪಕ್ಕದಲ್ಲೇ ಹುಲಿಗಳು ಕಾಣಸಿಗುತ್ತಿವೆ. ಪ್ರವಾಸಿಗರು ಅದರ ಚಿತ್ರ ತೆಗೆದು ಖುಷಿ ಪಡುತ್ತಿದ್ದಾರೆ.
ಹಾಗೆ ನೋಡಿದರೆ ಬಂಡೀಪುರದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿದ್ದು, ಸಫಾರಿಗೆ ತೆರಳುವವರಿಗೆ ಮಾತ್ರವಲ್ಲದೆ ಅರಣ್ಯದೊಳಗೆ ಹಾದು ಹೋಗಿರುವ ಹೆದ್ದಾರಿಯ ಪ್ರಯಾಣಿಕರಿಗೆ ಕಾಣಸಿಗುತ್ತಿವೆ. ಈ ನಡುವೆ ಕೆಕ್ಕನಹಳ್ಳ ಬಳಿ ಕೇರಳಕ್ಕೆ ತೆರಳುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಹುಲಿ ದಾಟುತ್ತಿರುವ ದೃಶ್ಯ ಕಂಡು ಬಂದಿದ್ದು, ಈ ಚಿತ್ರ ಇದೀಗ ಒಬ್ಬರಿಂದ ಮತ್ತೊಬ್ಬರಿಗೆ ಹರಿದಾಡುತ್ತಿದೆ.

ಕೆಲವು ಹುಲಿಗಳು ತಮ್ಮ ಪರಿವಾರ ಸಹಿತ ಒಂದೆಡೆಯಿಂದ ಮತ್ತೊಂದೆಡೆಗೆ ದಾಟುತ್ತಿರುತ್ತವೆ. ಈ ಸಂದರ್ಭ ವಾಹನದಲ್ಲಿ ತೆರಳುವ ಜನರ ಕಣ್ಣಿಗೆ ಬೀಳುತ್ತಿವೆ. ಈ ಅಪರೂಪದ ದೃಶ್ಯಗಳಿಗಾಗಿ ಕೆಲವರು ತಮ್ಮ ವಾಹನಗಳನ್ನು ನಿಲ್ಲಿಸಿಕೊಂಡು ಕಾಯುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ.
ಇನ್ನೊಂದೆಡೆ ಹುಲಿಗಳು ರಸ್ತೆಯಲ್ಲೇ ಅಡ್ಡಾಡುತ್ತಿರುವುದರಿಂದ ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವವರು ಭಯ ಪಡುವಂತಾಗಿದೆ.












Click it and Unblock the Notifications