ಚಾಮರಾಜನಗರ: KCET ಪರೀಕ್ಷೆಯಲ್ಲಿ ಮಾನಸ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

ಚಾಮರಾಜನಗರ, ಆಗಸ್ಟ್‌ 1: ಕೊಳ್ಳೇಗಾಲ ಪಟ್ಟಣದ ನಿಸರ್ಗ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಈ ಭಾರಿಯ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸೆಟ್) ಉತ್ತಮ ಫಲಿತಾಂಶ ನೀಡಿರುವ ವಿದ್ಯಾರ್ಥಿಗಳಿಗೆ ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ದತ್ತೇಶ್ ಕುಮಾರ್ ಸಿಹಿ ತಿನಿಸಿ ಅಭಿನಂದಿಸಿದರು.

ಕಾಲೇಜಿನ ಆವರಣದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಿದ ಬಳಿಕ ಮಾತನಾಡಿದ ಅವರು, KCET ಪರೀಕ್ಷೆ ಎದುರಿಸಿ ಉತ್ತಮ ರ‍್ಯಾಂಕ್ ಪಡೆದು ವಿದ್ಯೆ ಕಲಿಸಿದ ಸಂಸ್ಥೆಗೆ ಕೀರ್ತಿ ತಂದಿರುವ ಮಕ್ಕಳನ್ನು ಸನ್ಮಾನಿಸಿ ಗೌರವಿಸಿದ್ದೇನೆ. ಹೀಗೆ ಅವರ ಮುಂದಿನ ಶೈಕ್ಷಣಿಕ ಜೀವನ ಅತ್ಯುತ್ತಮವಾಗಿ ಸಾಗಲಿ. ಓದಿದ ವಿದ್ಯಾ ಸಂಸ್ಥೆಗೆ ಹೆತ್ತವರಿಗೆ ಮತ್ತು ಕಲಿಸಿದ ಗುರುಗಳಿಗೆ ಹೆಸರನ್ನು ತಂದುಕೊಡಲಿ ಎಂದು ಹಾರೈಸಿದರು.

ವಿದ್ಯಾರ್ಥಿಗಳ ಸಾಧನೆಗೆ ಹಾಗೂ ಈ ಯಶಸ್ಸಿಗೆ ಕಾರಣಿಭೂತರಾದ ಕಾಲೇಜಿನ ಎಲ್ಲಾ ಉಪನ್ಯಾಸಕರು ಕಾಲೇಜಿನೊಡನೆ ಸಹಯೋಗ ಬೋಧನೆ ಮಾಡಿದ ಜೆಬಿ ಅಕಾಡೆಮಿಯ ಮುಖ್ಯಸ್ಥ ಜಗದೀಶ್ ಬಾಬು ಅವರಿಗೆ ಧನ್ಯವಾದ ತಿಳಿಸಿದರು.

Students of Manasa College Did Well in the KCET Examination

ರ‍್ಯಾಂಕ್‌ ಪಡೆದ ವಿದ್ಯಾರ್ಥಿಗಳು
ಇಂಜಿನಿಯರ್ ವಿಭಾಗ: ಎಂ.ಮೇಘನಾ 737, ಎಂ.ಎಸ್ ನಾಗತೇಜಸ್ 2650, ಇಂದ್ರಕುಮಾರ್ 2998, ಹರ್ಷಿತಾ ಎಸ್ 3770, ಸ್ಫೂರ್ತಿ ಕೆ ಗೌಡ 4165, ಎನ್.ರಮ್ಯ 4346, ಸಾತ್ವಿಕ್ ಪ್ರಸಾದ್ 5035, ವಿ.ಎಚ್ ಶಿವಕುಮಾರ್ 5179 ಮತ್ತು ಜಿ. ವರದರಾಜ್ 5952 ರ‍್ಯಾಂಕ್‌ಗಳನ್ನು ಪಡೆದಿದ್ದಾರೆ.

ಬಿಎನ್‌ವೈಎಸ್ ವಿಭಾಗ:
ಎಂ.ಮೇಘನಾ 86, ಎನ್.ರಮ್ಯ 1302, ಸ್ಫೂರ್ತಿ ಕೆ ಗೌಡ 1345, ಹರ್ಷಿತಾ ಎಸ್ 1567, ಇಂದ್ರಕುಮಾರ್ 3252 ಮತ್ತು ನಾಗತೇಜಸ್ 5070ರ‍್ಯಾಂಕ್‌ಗಳನ್ನು ಪಡೆದಿದ್ದಾರೆ.

ಬಿಎಸ್‌ಸಿ ಎಜಿ ವಿಭಾಗ: ಎಂ.ಮೇಘನಾ 132, ಎಸ್.ಹರ್ಷಿತಾ 1592, ಸ್ಫೂರ್ತಿ ಕೆ ಗೌಡ 1848, ಇಂದ್ರಕುಮಾರ್ 2134, ಎಂ.ಎಸ್ ನಾಗತೇಜಸ್ 2898,, ವಿ.ಎಚ್ ಶಿವಕುಮಾರ್ 3065,ಜಿ.ವರದರಾಜ್ 3450 ರ‍್ಯಾಂಕ್‌ಗಳನ್ನು ಗಳಿಸಿದ್ದಾರೆ.

ವೆಟನರಿ ಸೈನ್ಸ್ ವಿಭಾಗ: ಎಂ.ಮೇಘನಾ 133, ಸ್ಫೂರ್ತಿ ಕೆ ಗೌಡ 2771 ಮತ್ತು ಎಸ್.ಹರ್ಷಿತಾ 4014ರ‍್ಯಾಂಕ್ ಪಡೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+