ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾರ್ಚ್ 28, 29ರಂದು ಗುಂಡ್ಲುಪೇಟೆಯಲ್ಲಿ ನಿಷೇದಾಜ್ಞೆ ಜಾರಿ!

ಚಾಮರಾಜನಗರದಲ್ಲಿ ಪ್ರತಿಭಟನೆ ವೇಳೆ ಆತ್ಮಹತ್ಯೆಗೆ ಯತ್ನಸಿದ್ದ ಕಗ್ಗಳದಹುಂಡಿಯ ನಾಗೇಶ್ (32) ಮೃತಪಟ್ಟಿದ್ದಾರೆ. ಇದನ್ನು ಬಳಿಸಿಕೊಂಡು ಪ್ರಕ್ಷುಬ್ದ ವಾತಾವರಣ ಶಂಕೆ ಹಿನ್ನಲೆಯಲ್ಲಿ ಚುನಾವಣೆ ಅಧಿಕಾರಿ ನಲೀನ್ ಅತುಲ್ ನಿಷೇದಾಜ್ಞೆ ಜಾರಿಗೊಳಿಸಿ ಆ

|
Google Oneindia Kannada News

ಗುಂಡ್ಲುಪೇಟೆ, ಮಾರ್ಚ್. 28 : ದಿನದಿಂದ ದಿನಕ್ಕೆ ರಂಗೇರುತ್ತಿರುವ ಗುಂಡ್ಲುಪೇಟೆ ಉಪಚುನಾವಣೆ ಕ್ಷೇತ್ರದಲ್ಲಿ ಎರಡು ದಿನ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ.

ಚಂಡು ಹೂ ಸಂಸ್ಕರಣಾ ಘಟಕ ವಿರೋಧಿಸಿ ಚಾಮರಾಜನಗರದಲ್ಲಿ ಪ್ರತಿಭಟನೆ ವೇಳೆ ಆತ್ಮಹತ್ಯೆಗೆ ಯತ್ನಸಿದ್ದ ಕಗ್ಗಳದಹುಂಡಿಯ ನಾಗೇಶ್ (32) ಮೃತಪಟ್ಟಿದ್ದಾರೆ. ಮೃತ ನಾಗೇಶ್ ಬಿಜೆಪಿ ಬೆಂಬಲಿತ ಎನ್ನಲಾಗಿದೆ.

ಇದನ್ನು ಬಳಿಸಿಕೊಂಡು ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗುವ ಶಂಕೆ ವ್ಯಕ್ತವಾದ ಹಿನ್ನಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಚುನಾವಣೆ ಅಧಿಕಾರಿ ನಲೀನ್ ಅತುಲ್ ನಿಷೇದಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.[ತೆರಕಣಾಂಬಿ ಪೊಲೀಸ್ ಠಾಣೆ ಬಳಿ ವಿಷ ಸೇವಿಸಿದ್ದ ರೈತ ಸಾವು]

Section 144 has been imposed in Gundlupet after a farmer was died

ಮಾಚ್ 28 ಮಂಗಳವಾರ ಬೆಳಗ್ಗೆ 6ರಿಂದ ಮಾರ್ಚ 29 ಸಂಜೆ 6ರ ವರೆಗೆ ಎರಡು ದಿನ ಗುಂಡ್ಲುಪೇಟೆ ಕ್ಷೇತ್ರದಲ್ಲಿ ನಿಷೇದಾಜ್ಞೆ ಜಾರಿ ಮಾಡಲಾಗಿದೆ.

ಯಾವುದೇ ಸಭೆ ಸಮಾರಂಭ, 5ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ, ಕಾನುನೂ ಭಂಗಕ್ಕೆ ಅವಕಾಶಗಳಿಲ್ಲ ಎಂದು ಅತುಲ್ ಹೇಳಿದ್ದಾರೆ.

ಮಾಹದೇವ ಪ್ರಸಾದ್ ಅವರ ಅಕಾಲಿಕ ಮರಣದಿಂದ ತೆರವಾಗಿರುವ ಗುಂಡ್ಲುಪೇಟೆ ವಿಧಾನಸಭೆ ಉಪಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು ಏಪ್ರಿಲ್ 9 ಚುನಾವಣೆ ನಡೆಯಲಿದೆ.

English summary
Section 144 has been imposed in Gundlupet after a farmer was died. He belongs to BJP and few days back he participated in a protest against a factory in Chamarajanagar and attempted suicide in that protest. After several days of treatment he lost his life.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X