B.R.Hills: ಬಿಳಿಗಿರಿರಂಗನಬೆಟ್ಟದ ಕುಂಬೇಶ್ವರನಿಗೆ ರೊಟ್ಟಿಯೇ ನೈವೇದ್ಯ; ಏನಿದು ರೊಟ್ಟಿ ಹಬ್ಬ?
ಚಾಮರಾಜನಗರ, ಮೇ 15: ಕೃಷಿಯೆ ಜೀವಾಳವಾಗಿರುವ ಜಿಲ್ಲೆಯಲ್ಲಿ ಯಾವುದೇ ಬೆಳೆಯಾಗಲಿ ಅದು ಬೆಳೆದು ಕೈಸೇರಿದಾಗ ರೈತರು ಖುಷಿಯಲ್ಲಿ ತೇಲುವುದು ಮಾಮೂಲಿಯಾಗಿದೆ. ಇವತ್ತಿನ ಪರಿಸ್ಥಿತಿಯಲ್ಲಿ ಕೃಷಿ ಮಾಡುವುದು ಸುಲಭವಾಗಿ ಉಳಿದಿಲ್ಲ. ಅದರಲ್ಲೂ ಮಳೆಯನ್ನು ನಂಬಿ ಕೃಷಿ ಮಾಡುವ ರೈತರ ಬದುಕು ಮೂರಾಬಟ್ಟೆಯಾಗಿದೆ. ಆದರೂ ತಾವು ಕಷ್ಟಪಟ್ಟು ಬೆಳೆದ ಬೆಳೆ ಮನೆಯನ್ನು ತುಂಬಿದಾಗ ಎಲ್ಲಿಲ್ಲದ ಸಂಭ್ರಮ ಮನೆ ಮಾಡುತ್ತದೆ. ಇಂತಹ ಸಂದರ್ಭದಲ್ಲಿ ಎಲ್ಲರೂ ಜತೆ ಸೇರಿ ಸಂಭ್ರಮಿಸಿದರೆ ಹೇಗಿರುತ್ತದೆ? ಅದಕ್ಕೆ ಸಾಕ್ಷಿಯೇ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ವ್ಯಾಪ್ತಿಯಲ್ಲಿ ನಡೆಯುವ ರೊಟ್ಟಿ ಹಬ್ಬವಾಗಿದೆ.
ಒಂದು ಕಾಲದಲ್ಲಿ ಪ್ರಕೃತಿಯೊಂದಿಗೆ ಬೆರೆತು ಬದುಕುತ್ತಿದ್ದ ಸೋಲಿಗರು ತಮ್ಮ ಆಹಾರದ ಸಮಸ್ಯೆ ನೀಗಿಸಿಕೊಳ್ಳಲು ಸುತ್ತಮುತ್ತ ಬೆಳೆಗಳನ್ನು ಬೆಳೆಯುತ್ತಿದ್ದರು. ಆ ಬೆಳೆಯನ್ನು ವನ್ಯ ಪ್ರಾಣಿಗಳಿಂದ ರಕ್ಷಿಸಿಕೊಂಡು ಫಸಲು ಪಡೆಯುವುದು ಅಷ್ಟು ಸುಲಭವಾಗಿರಲಿಲ್ಲ. ಈ ವೇಳೆ ವನದೇವತೆಯನ್ನು ಪೂಜಿಸಿಕೊಂಡು ಯಾವುದೇ ತೊಂದರೆಯಾಗದಂತೆ ಬೆಳೆಯನ್ನು ರಕ್ಷಿಸುವಂತೆ ಬೇಡಿಕೊಳ್ಳುತ್ತಿದ್ದರು. ಬೆಳೆ ಬೆಳೆದು ಫಸಲು ಮನೆ ಸೇರಿದ ಬಳಿಕ ಎಲ್ಲರೂ ದೇವರಿಗೆ ಹರಕೆಯನ್ನು ಅರ್ಪಿಸುವ ಸಲುವಾಗಿ ಧಾನ್ಯದಿಂದ ರೊಟ್ಟಿ ತಯಾರಿಸಿ ಬಡಿಸಿ, ಬಳಿಕ ತಾವೆಲ್ಲರೂ ಅದನ್ನು ಸವಿದು ಹಿಂತಿರುಗುತ್ತಿದ್ದರು. ಇದುವೇ ರೊಟ್ಟಿ ಹಬ್ಬವಾಗಿದೆ.

ಹಾಗೆನೋಡಿದರೆ ಕೃಷಿಯನ್ನೇ ಬದುಕಾಗಿಸಿಕೊಂಡ ಎಲ್ಲ ಕಡೆಯಲ್ಲಿಯೂ ಪ್ರಕೃತಿಯನ್ನು, ವನದೇವತೆಯನ್ನು ಪೂಜಿಸುವ ಸಂಪ್ರದಾಯವಿದೆ. ಅದು ಒಂದೊಂದು ಊರಿಗೆ ಭಿನ್ನವಾಗಿದೆಯಷ್ಟೆ. ಪ್ರಕೃತಿಯೇ ಎಲ್ಲವೂ ಆಗಿರುವುದರಿಂದ ಅದನ್ನು ಹೊರತುಪಡಿಸಿ ನಾವು ಯಾರೂ ಕೂಡ ನೆಮ್ಮದಿಯಾಗಿ ಬದುಕಲು ಸಾಧ್ಯವಿಲ್ಲ. ಕಾಲಕ್ಕೆ ತಕ್ಕಂತೆ ಮಳೆ, ಬಿಸಿಲು, ಚಳಿ ಇಲ್ಲದೆ ಹೋದರೆ ಇದರಲ್ಲಿ ಯಾವುದೇ ಒಂದು ವ್ಯತ್ಯಯವಾದರೂ ಪರಿಸರದ ಮೇಲೆ ಪರಿಣಾಮ ಬೀರುವುದರೊಂದಿಗೆ ಮನುಷ್ಯನಿಗೆ ಬದುಕುವುದೇ ಕಷ್ಟವಾಗುತ್ತದೆ.
ಕುಂಬೇಶ್ವರ ದೇವಸ್ಥಾನದಲ್ಲಿ ಹರಕೆ ಸಲ್ಲಿಕೆ
ಹಿಂದಿನ ಕಾಲದಲ್ಲಿ ಎಲ್ಲಿ ನೀರಿನಾಶ್ರಯವಿದೆಯೋ ಅಲ್ಲಿ ಕೃಷಿ ಮಾಡುತ್ತಿದ್ದರು. ಹೆಚ್ಚಿನವರು ಅರಣ್ಯದ ಒಡನಾಟದಲ್ಲಿಯೇ ಜೀವನ ಸಾಗಿಸುತ್ತಿದ್ದರು. ಕಾಡಿನ ಉತ್ಪನ್ನಗಳೇ ಜೀವನಾಧಾರವಾಗಿತ್ತು. ಅದರಲ್ಲೂ ಸೋಲಿಗರು ಕಾಡಿನ ನಡುವೆ ಬದುಕು ಕಟ್ಟಿಕೊಂಡಿದ್ದರು. ಸುತ್ತಮುತ್ತಲಿನ ಪ್ರದೇಶದಲ್ಲಿ ಆಹಾರ ಧಾನ್ಯಗಳನ್ನು ಬೆಳೆಯುತ್ತಿದ್ದರು. ಅದರಲ್ಲೂ ರಾಗಿಯನ್ನು ಹೆಚ್ಚಾಗಿ ಬೆಳೆಯುತ್ತಿದ್ದರು. ಈ ರಾಗಿಯನ್ನು ಬೆಳೆದು ಫಸಲು ಪಡೆಯುವುದು ಸುಲಭವಾಗಿರಲಿಲ್ಲ. ಹೀಗಾಗಿ ಜನ ಜಾನುವಾರು ಮತ್ತು ಬೆಳೆಗಳನ್ನು ಕಾಡುಪ್ರಾಣಿಗಳಿಂದ ಕಾಪಾಡುವಂತೆ ದೇವರಲ್ಲಿ ಹರಕೆ ಹೊತ್ತುಕೊಳ್ಳುತ್ತಿದ್ದರು. ಬೆಳೆ ಬಂದ ಬಳಿಕ ಹರಕೆ ಅರ್ಪಿಸಿ ಮುಂದಿನ ವರ್ಷವೂ ಎಲ್ಲವೂ ಸುಖಕರವಾಗಿ ನಡೆಸಿಕೊಡುವಂತೆಯೂ ಬೇಡಿಕೊಳ್ಳುತ್ತಿದ್ದರು.

ಇಂತಹದೊಂದು ಆಚರಣೆ ರೊಟ್ಟಿಹಬ್ಬವಾಗಿ ಈಗಲೂ ಮುಂದುವರಿದುಕೊಂಡು ಬಂದಿದ್ದು ಬಿಳಿಗಿರಿರಂಗನಬೆಟ್ಟದ ಮುತ್ತುಗದಗದ್ದೆ ಪೋಡಿನ ಸೋಲಿಗ ಜನಾಂಗದವರು ವರ್ಷಕ್ಕೊಮ್ಮೆ ಆಚರಣೆ ನಡೆಸುತ್ತಾರೆ. ಅಂದು ಹತ್ತಿರದಲ್ಲಿರುವ ತೊಂಡೆಹಣ್ಣು ಪೋಡಿಗೆ ತೆರಳಿ ಕುಂಬೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ತಾವು ಬೆಳೆದ ರಾಗಿಯಿಂದ ತಯಾರಿಸಿದ ರೊಟ್ಟಿಯನ್ನು ನೈವೇದ್ಯಕ್ಕೆ ಇಟ್ಟು ಪೂಜೆ ಸಲ್ಲಿಸಿ ದೇವರಲ್ಲಿ ಸ್ವೀಕರಿಸುವಂತೆಯೂ ಹಾಗೆಯೇ ಮಳೆ, ಬೆಳೆಯಾಗಿ ನಾಡು ಸುಭೀಕ್ಷೆ ಕಾಣುವಂತಾಗಲಿ ಎಂದು ಬೇಡಿಕೊಳ್ಳುತ್ತಾರೆ.
ಮೊದಲ ಫಸಲಲ್ಲಿ ನೈವೇದ್ಯ ಅರ್ಪಣೆ
ಇನ್ನು ರಾಗಿ ಬೆಳೆಯುವ ಸೋಲಿಗರು ಅದನ್ನು ಕಟಾವು ಮಾಡಿ ಬಳಿಕ ಮೊದಲಿಗೆ ಪ್ರತಿ ಕುಟುಂಬದವರು ಹರಕೆಯಾಗಿ ಒಂದು ಕೆಜಿಯಷ್ಟು ರಾಗಿಯನ್ನು ತೆಗೆದಿಡುತ್ತಾರೆ. ಬಳಿಕ ಅದನ್ನು ಸ್ವಚ್ಛಗೊಳಿಸಿ ಬೀಸುಕಲ್ಲಿನಿಂದ ಬೀಸಿ ಪುಡಿ(ಹಿಟ್ಡು) ತಯಾರಿಸುತ್ತಾರೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾಗಿರುವ ವಿಚಾರ ಏನೆಂದರೆ, ರಾಗಿ ಫಸಲನ್ನು ದೇವರಿಗೆ ಅರ್ಪಿಸಿ ದೇವರಿಗೆ ಹರಕೆ ಸಲ್ಲಿಸುವ ತನಕ ಮೊದಲ ಫಸಲಿನ ರಾಗಿಯನ್ನು ಸೋಲಿಗರು ಉಪಯೋಗಿಸುವುದಿಲ್ಲ. ಅಷ್ಟೇ ಅಲ್ಲದೆ ಬೇರೆಯರಿಗೂ ನೀಡುವುದಿಲ್ಲ.

ಹೀಗೆ ಕಟ್ಟು ನಿಟ್ಟಿನ ಸಂಪ್ರದಾಯ ಪಾಲನೆ ಮಾಡುವ ಅವರು ಕುಂಬೇಶ್ವರ ದೇವಸ್ಥಾನಕ್ಕೆ ಆಗಮಿಸಿ, ದೇಗುಲದ ಮುಂಭಾಗ ಹಿಟ್ಟನ್ನು ಚೆನ್ನಾಗಿ ಕಲೆಸಿ ಮುತ್ತುಗದ ಎಲೆಯಲ್ಲಿ ರೊಟ್ಟಿಯನ್ನು ತಟ್ಟುತ್ತಾರೆ. ಬಳಿಕ ಅದನ್ನು ಮೊದಲೇ ಹರಡಿದ್ದ ಕೆಂಡದ ರಾಶಿಯಲ್ಲಿಟ್ಟು ಚೆನ್ನಾಗಿ ಬೇಯಿಸಿ ರಾಶಿ ಹಾಕುತ್ತಾರೆ. ಆ ನಂತರ ದೇವರಿಗೆ ನೈವೇದ್ಯವಾಗಿ ರೊಟ್ಟಿಯನ್ನು ಅರ್ಪಿಸುತ್ತಾರೆ. ಜತೆಗೆ ಕುಂಬೇಶ್ವರನಿಗೆ ಪೂಜೆ ಸಲ್ಲಿಸಿ ಮುಂಬರುವ ದಿನಗಳಲ್ಲಿ ಉತ್ತಮ ಮಳೆ, ಬೆಳೆಯಾಗಲಿ, ಹಾಡಿಯಲ್ಲಿ ರೋಗರುಜಿನಗಳು ದೂರಾಗಲಿ ಎಂದು ಪ್ರಾರ್ಥಿಸಿ ಪ್ರಸಾದ ಪಡೆದ ಬಳಿಕ ಸಾಮೂಹಿಕ ರೊಟ್ಟಿ ಬೋಜನ ನಡೆಯುತ್ತದೆ.
ಆಧುನಿಕತೆಯಲ್ಲೂ ಉಳಿದ ಸಂಪ್ರದಾಯ
ಈ ವೇಳೆ ರೊಟ್ಟಿ ಜೊತೆಗೆ ತಿನ್ನಲು ಘಮಘಮಿಸುವ ಅವರೆಕಾಯಿ, ಕುಂಬಳಪಲ್ಯವೂ ತಯಾರಾಗುತ್ತದೆ. ಎಲ್ಲರೂ ದೇಗುಲದ ಬಳಿ ಸಹಪಂಕ್ತಿ ಭೋಜನ ಮಾಡಿ ಮನೆಯತ್ತ ಮುಖ ಮಾಡುತ್ತಾರೆ. ಅಲ್ಲಿಗೆ ರೊಟ್ಟಿ ಹಬ್ಬ ಮುಗಿದು ಹೋಗುತ್ತದೆ. ಈ ವೇಳೆ ನೆರೆದವರ ಮುಖದಲ್ಲಿ ಸಡಗರ ಸಂಭ್ರಮದ ಜೊತೆಗೆ ದೇವರಿಗೆ ಹರಕೆ ಅರ್ಪಿಸಿದ ತೃಪ್ತಿ ಮನೆ ಮಾಡುತ್ತದೆ. ಗತಕಾಲದಿಂದ ನಡೆದುಕೊಂಡು ಬಂದಿದ್ದ ಸಂಪ್ರದಾಯವನ್ನು ಆಧುನಿಕತೆಯ ಕಾಲಘಟ್ಟದಲ್ಲಿಯೂ ಸೋಲಿಗರು ಉಳಿಸಿ ಬೆಳೆಸಿಕೊಂಡು ಹೋಗುತ್ತಿರುವುದು ಖುಷಿಯ ಸಂಗತಿಯಾಗಿದೆ. ಅಷ್ಟೇ ಅಲ್ಲದೆ ರೊಟ್ಟಿ ಹಬ್ಬ ಉಳಿದು ಬೆಳೆಯಲು ಸಾಧ್ಯವಾಗಿದೆ.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications