ವಾಹನ ಸಂಚಾರಕ್ಕೆ ಅಡಚಣೆಯಾದ ರಸ್ತೆಯಲ್ಲಿನ ಒಕ್ಕಣೆ

ಚಾಮರಾಜನಗರ, ನವೆಂಬರ್ 29 : ಸರ್ಕಾರ ಗ್ರಾಮೀಣ ಪ್ರದೇಶಗಳಲ್ಲಿ ರೈತರ ಅನುಕೂಲಕ್ಕಾಗಿ ಕಣಗಳನ್ನು ನಿರ್ಮಿಸಿಕೊಟ್ಟಿದ್ದರೂ ಕೂಡ ಬಹಳಷ್ಟು ಕಡೆಗಳಲ್ಲಿ ರಸ್ತೆಗಳಲ್ಲೇ ಒಕ್ಕಣೆ ಮಾಡುತ್ತಿರುವುದು ಇದೀಗ ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಸೇರಿದಂತೆ ಹಲವು ಕಡೆಗಳಲ್ಲಿ ಕಂಡು ಬರುತ್ತಿರುವ ದೃಶ್ಯವಾಗಿದೆ.

ಈಗಾಗಲೇ ರಸ್ತೆಯಲ್ಲಿ ಹುರುಳಿಯ ಒಕ್ಕಣೆ ಮಾಡುವುದರಿಂದ ಬಳ್ಳಿಗಳು ವಾಹನಗಳ ಚಕ್ರಕ್ಕೆ ಸಿಲುಕಿ ಅಪಾಯಗಳು ಸಂಭವಿಸಿದ್ದರೂ ಆ ಬಗ್ಗೆ ತಲೆಕೆಡಿಸಿಕೊಳ್ಳದೆ ಮುಂದುವರೆಸುತ್ತಿರುವುದರಿಂದ ಅದರ ಮೇಲೆಯೇ ವಾಹನವನ್ನು ಚಲಾಯಿಸಿಕೊಂಡು ಹೋಗುವುದು ಚಾಲಕರಿಗೆ ಅನಿವಾರ್ಯವಾಗಿದೆ.

Roads have become harvest field in Gundlupete

ಈಗಾಗಲೇ ಹುರುಳಿ ಕಟಾವಿಗೆ ಬಂದಿರುವ ಕಾರಣ ಬಹುತೇಕ ಕಡೆಗಳಲ್ಲಿ ರೈತರು ಬಳ್ಳಿಯನ್ನು ಕಟಾವು ಮಾಡಿ ತಂದು ರಸ್ತೆಗೆ ಹಾಕುತ್ತಿದ್ದಾರೆ. ವಾಹನಗಳು ಅದರ ಮೇಲೆ ತೆರಳುವುದರಿಂದ ಒಕ್ಕಣೆಯಾಗುತ್ತಿದೆ. ಆ ನಂತರ ಬಳ್ಳಿಯನ್ನು ಬೇರ್ಪಡಿಸಿ ತೆಗೆದು ಹುರುಳಿ ಕಾಳುಗಳನ್ನು ಒಟ್ಟು ಸೇರಿಸಿ ಚೀಲಗಳಲ್ಲಿ ತುಂಬಿಸಿಕೊಂಡು ಹೋಗುತ್ತಾರೆ. ಇದೆಲ್ಲವೂ ರಸ್ತೆಯಲ್ಲಿಯೇ ನಡೆಯುವುದರಿಂದಾಗಿ ವಾಹನಗಳು ತೆರಳುವುದಕ್ಕೆ ಅನಾನುಕೂಲವಾಗುತ್ತಿದೆ.

ಕಳೆದ ಕೆಲವು ವರ್ಷಗಳಿಂದ ಈ ವ್ಯಾಪ್ತಿಯಲ್ಲಿ ಸರಿಯಾಗಿ ಮಳೆಯಾಗದೆ ಬರ ಕಾಣಿಸಿಕೊಂಡಿದ್ದರಿಂದ ರೈತರು ಯಾವುದೇ ಬೆಳೆಯನ್ನು ಬೆಳೆದಿರಲಿಲ್ಲ. ಆದರೆ ಈ ಬಾರಿ ಹಿಂಗಾರು ಮಳೆ ಸುರಿದ ಕಾರಣ ಬಹಳಷ್ಟು ರೈತರು ಹುರುಳಿ ಬೆಳೆಯನ್ನು ಬೆಳೆದಿದ್ದಾರೆ.

ಇದೀಗ ಅದು ಕಟಾವಿಗೆ ಬಂದಿರುವುದರಿಂದ ಕೆಲವರು ತಮ್ಮ ಕಣಗಳಲ್ಲಿ ಹಾಕಿ ಒಕ್ಕಣೆ ಮಾಡಿದರೆ ಒಂದಷ್ಟು ಮಂದಿಗೆ ರಸ್ತೆಗೆ ಹಾಕಿ ಒಕ್ಕಣೆ ಮಾಡುತ್ತಿದ್ದಾರೆ. ರಸ್ತೆಯಲ್ಲಿ ಒಕ್ಕಣೆ ಮಾಡಬಾರದು ಎಂಬ ಎಚ್ಚರಿಕೆ ನೀಡಿದ್ದರೂ ಅದನ್ನು ರೈತರು ಪಾಲಿಸದೆ ಇರುವುದರಿಂದ ರಸ್ತೆಯಲ್ಲಿ ಓಡಾಡುವ ವಾಹನಗಳಿಗೆ ತೊಂದರೆಯಾಗುತ್ತಿದೆ.

Roads have become harvest field in Gundlupete

ಕೃಷಿ ಇಲಾಖೆಯು ಎಲ್ಲ ಗ್ರಾಮಗಳಲ್ಲಿಯೂ ಸಾಮೂಹಿಕ ಒಕ್ಕಣೆ ಕಣ ಹಾಗೂ ವೈಯುಕ್ತಿಕ ಕಣ ನಿರ್ಮಿಸಲು ಹೆಚ್ಚಿನ ಯೋಜನೆ ರೂಪಿಸದ ಪರಿಣಾಮವಾಗಿ ಒಕ್ಕಣೆ ಕಾರ್ಯಕ್ಕೆ ಅಡ್ಡಿಯುಂಟಾಗಿದೆ. ತಮ್ಮ ಜಮೀನುಗಳಲ್ಲಿ ಕಣಗಳನ್ನು ನಿರ್ಮಿಸಿಕೊಳ್ಳಲು ಮುಂದಾಗದ ಬಹುತೇಕ ರೈತರು ತಮ್ಮ ಬೆಳೆಗಳನ್ನು ರಸ್ತೆಯ ನಡುವೆ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿಯಿಂದ ಹೊಂಗಹಳ್ಳಿವರೆಗೂ ಕಿರಿದಾದ ರಸ್ತೆಯ ಮೇಲೆಯೇ ಹುರುಳಿಬಳ್ಳಿ ಹರಡುತ್ತಿದ್ದು ಸಂಚಾರಕ್ಕೆ ಅಡ್ಡಿಯುಂಟಾಗುತ್ತಿದೆ. ಗಾಳಿಬಂದಾಗ ಕಾಳನ್ನು ರಸ್ತೆಯ ಬದಿಯಲ್ಲಿಯೇ ತೂರುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ.

ಇನ್ನು ಲಘುವಾಹನಗಳ ಚಕ್ರಗಳಿಗೆ ಹುರುಳಿಯ ಬಳ್ಳಿಗಳು ಸುತ್ತಿಕೊಂಡು ವಾಹನಗಳು ನಿಂತುಕೊಳ್ಳುತ್ತಿವೆ. ಇನ್ನೊಂದೆಡೆ ದ್ವಿಚಕ್ರ ಸವಾರರು ಆಯತಪ್ಪಿ ಬಿದ್ದು ಪೆಟ್ಟು ಮಾಡಿಕೊಳ್ಳುವ ಪರಿಸ್ಥಿತಿ ಬಂದೊದಗಿದೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ರೈತರಿಗೆ ಒಕ್ಕಣೆ ಮಾಡಲು ಬದಲಿ ವ್ಯವಸ್ಥೆ ಮಾಡಿಕೊಡುವ ಮೂಲಕ ರಸ್ತೆಯಲ್ಲಿ ನಡೆಸುವ ಒಕ್ಕಣೆಯನ್ನು ತಪ್ಪಿಸಬೇಕಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+