Republic day 2023: ಚಾಮರಾಜನಗದಲ್ಲಿ ಪೊಲೀಸ್‌ ಇಲಾಖೆ ಸೇರಿದಂತೆ ವಿವಿಧ ತುಕಡಿಗಳಿಂದ ಆಕರ್ಷಕ ಪಥ ಸಂಚಲನ

ಚಾಮರಾಜನಗರದಲ್ಲಿ 74ನೇ ಗಣರಾಜ್ಯೋತ್ಸವ ಆಚರಿಸಲಾಗಿದ್ದು, ಗಣರಾಜ್ಯೋತ್ಸವದಲ್ಲಿ ಪೊಲೀಸ್‌ ಇಲಾಖೆ ಸೇರಿದಂತೆ ವಿವಿಧ ತುಕಡಿಗಳ ಪಥಸಂಚಲನ ಹೇಗಿತ್ತು ನೀವೆ ನೋಡಿ.

ಚಾಮರಾಜನಗರ, ಜನವರಿ, 26: ಜಿಲ್ಲಾಡಳಿತದ ವತಿಯಿಂದ ನಗರದ ಡಾ.ಬಿ‌.ಆರ್‌.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿದ್ದ 74ನೇ ಗಣರಾಜ್ಯೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ‌.ಸೋಮಣ್ಣ ಧ್ವಜಾರೋಹಣ ಮಾಡಿದರು.

ಧ್ವಜಾರೋಹಣ ನೆರವೇರಿಸಿದ ಬಳಿಕ ಪೊಲೀಸ್, ಅಬಕಾರಿ, ಅರಣ್ಯ ಇಲಾಖೆ ಸೇರಿದಂತೆ ವಿವಿಧ ತುಕಡಿಗಳು ಆಕರ್ಷಕ ಪಥ ಸಂಚಲನ ನಡೆಸಿ ಗೌರವ ವಂದನೆ ಸಲ್ಲಿಸಿದರು. ಬಳಿಕ, ಗಣರಾಜ್ಯೋತ್ಸವದ ಸಂದೇಶ ಹಂಚಿಕೊಂಡ ಸೋಮಣ್ಣ, ಕರ್ನಾಟಕದ ಪಾಲಿಗೆ ಅಭಿವೃದ್ಧಿಯಲ್ಲಿ ಸುವರ್ಣ ಯುಗ ಆರಂಭಗೊಂಡಿದೆ. ನಮ್ಮ ಸರ್ಕಾರದ ಯೋಜನೆ, ಕಾರ್ಯಕ್ರಮಗಳು ಕರ್ನಾಟಕದ ಚಿತ್ರಣ ಬದಲಿಸಿದೆ ಎಂದರು.

ಸಿದ್ದರಾಮಯ್ಯ ನಿವೃತ್ತಿಯಾದ್ರೆ, ನಾನು ಕೂಡ ನಿವೃತ್ತಿಯಾಗುವೆ: ಸಿ‌.ಪುಟ್ಟರಂಗಶೆಟ್ಟಿ
ಜಿಲ್ಲೆಯ ಅಭಿವೃದ್ಧಿಗೆ ಬದ್ಧರಿದ್ದೇವೆ

ಗಡಿಜಿಲ್ಲೆ ಚಾಮರಾಜನಗರ ಸರ್ವತೋಮುಖ ಅಭಿವೃದ್ಧಿಗೆ ನಮ್ಮ ಸರ್ಕಾರ ಕಟಿಬದ್ಧವಾಗಿದೆ. ಬಲಿಷ್ಠ ಭಾರತದ ನಿರ್ಮಾಣದ ಸಂಕಲ್ಪ ತೊಟ್ಟು ದಿನದ 24 ಗಂಟೆ ಪ್ರಜಾ ಸೇವಕನಂತೆ ದುಡಿಯುತ್ತಿರುವ ಪ್ರಧಾನಿ ಮೋದಿ ಕೈ ಬಲಪಡಿಸುವ ಜೊತೆಗೆ ಶಕ್ತಿಶಾಲಿ ಕರ್ನಾಟಕದ ನಿರ್ಮಾಣಕ್ಕೆ ಪ್ರತಿಜ್ಞೆ ಮಾಡೋಣ ಎಂದರು. ಇನ್ನು, ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೂ ಮುನ್ನ ಚಾಮರಾಜನಗರ ಜಿಲ್ಲಾಡಳಿತ ಭವನ ಆವರಣದಲ್ಲಿ ಬಸವೇಶ್ವರ ಪ್ರತಿಮೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.

Republic day: Attracted attention police march in Chamarajanagar

ಸಾರಿಗೆ ವ್ಯವಸ್ಥೆ ಇಲ್ಲದೆ ಜನರ ಪರದಾಟ

ಅನಾರೋಗ್ಯಕ್ಕೀಡಾದ ವ್ಯಕ್ತಿಯನ್ನು ವಾಹನ ಸೌಕರ್ಯ ಇಲ್ಲದಿದ್ದರಿಂದ ಡೋಲಿ ಮೂಲಕ 10 ಕಿಲೋ ಮೀಟರ್‌ ಆಸ್ಪತ್ರೆಗೆ ರವಾನಿಸಿರುವ ಘಟನೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ತಪ್ಪಲಿನ ದೊಡ್ಡಾನೆ ಗ್ರಾಮದಲ್ಲಿ ನಡೆದಿತ್ತು. ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿದ್ದ ದೊಡ್ಡಾಣೆ ಗ್ರಾಮದ ಮಹದೇವ್ (62) ಎಂವುವವರು ಗುರುವಾರ (ಜನವರಿ 19) ಮಧ್ಯಾಹ್ನ ತೀವ್ರ ಅಸ್ವಸ್ಥರಾಗಿದ್ದರು. ಈ ಹಿನ್ನೆಲೆ ಮಹದೇವ್ ಅವರನ್ನು ಡೋಲಿ ಮೂಲಕ ಸುಳ್ವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ಚಿಕಿತ್ಸೆ ಕೊಡಿಸಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಚಾಮರಾಜನಗರ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಸ್ವಾತಂತ್ರ್ಯ ಬಂದು 75 ವರ್ಷಗಳೇ ಕಳೆದಿದೆ. ಆದರೆ ಮಲೆ ಮಾದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹತ್ತಕ್ಕೂ ಹೆಚ್ಚು ಗ್ರಾಮಗಳಿಗೆ ಸಾರಿಗೆ ವ್ಯವಸ್ಥೆ ಇಲ್ಲದೆ ಜನರು ಪರಿತಪಿಸುತ್ತಿದ್ದಾರೆ.

ಮನವಿಗೂ ಕ್ಯಾರೆ ಅನ್ನದ ಅಧಿಕಾರಿಗಳು

ಸಾರಿಗೆ ವ್ಯವಸ್ಥೆ ಮಾಡಿಕೊಡುವಂತೆ ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಪ್ರಾಧಿಕಾರದವರಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಕಾಡಂಚಿನ ಗ್ರಾಮಗಳ ರಸ್ತೆಗಳು ಹಾಳಾಗಿರುವುದರಿಂದ 108 ತುರ್ತು ವಾಹನ ತೆರಳಲು ಸಾಧ್ಯವಾಗುತ್ತಿಲ್ಲ. ಇದರಿಂದ ಇಲ್ಲಿಯ ರೋಗಿಗಳು ನರಕ ಅನುಭವಿಸುವಂತಾಗಿದೆ ಎಂದು ಜನರು ಅಳಲು ತೋಡಿಕೊಂಡಿದ್ದಾರೆ. ಗರ್ಭಿಣಿಯರನ್ನು ಆಸ್ಪತ್ರೆಗೆ ಡೋಲಿಯಲ್ಲಿ ಕರೆ ತರುವ ವೇಳೆ ಮಾರ್ಗ ಮಧ್ಯದಲ್ಲಿಯೇ ಹೆರಿಗೆಯೂ ಆಗಿದೆ. ಇನ್ನು ಕೆಲವರು ಮಾರ್ಗದ ಮಧ್ಯದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ. ಇಷ್ಟಾದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

"ಜನವನ" ವಾಹನ ಸಂಚಾರ ಸ್ತಬ್ಧ

ಈ ಹಿಂದೆ ಮೆಂದಾರೆ, ತುಳಸಿಕೆರೆ, ಇಂಡಿಗನತ್ತ, ಪಡಸಲನತ್ತ, ಮೆದಗನಾಣೆ, ಪಾಲಾರ್, ದೊಡ್ಡಣೆ, ತೊಕೆರೆ, ಕೊಕ್ಕಬರೆ ಗ್ರಾಮಗಳಿಗೆ ಜನವನ ಸಾರಿಗೆ ಎಂಬ ಯೋಜನೆ ಆರಂಭಿಸಿ ಮೂರು ಜೀಪ್‌ಗಳನ್ನು ಕೊಡಲಾಗಿತ್ತು. ಮಕ್ಕಳನ್ನು ಶಾಲೆಗೆ ಕರೆದೊಯ್ಯಲು, ಆಸ್ಪತ್ರೆಗೆ ತೆರಳಲು, ನಿತ್ಯದ ಸಂಚಾರಕ್ಕಾಗಿ ಒಂದೆರೆಡು ತಿಂಗಳು ವಾಹನ ಬಳಕೆಯಾಗಿತ್ತು. ಆದರೆ, ಕಳೆದ ಎರಡು ತಿಂಗಳಿನಿಂದ ರಸ್ತೆ ಹದಗೆಟ್ಟಿರುವುದರಿಂದ ಹಾಗೂ ಚಾಲಕರಿಗೆ ಸಂಬಳ ನೀಡದೆ ಇರುವುದರಿಂದ "ಜನವನ" ಇದ್ದೂ ಇಲ್ಲದಂತಾಗಿದೆ. ಇಂಡಿಗನತ್ತ ಗ್ರಾಮದ ರಸ್ತೆಯನ್ನು ದುರಸ್ತಿ ಪಡಿಸಲಾಗುತ್ತಿದೆ. ಅರಣ್ಯ ಇಲಾಖೆಯವರು ಚಾಲಕನನ್ನು ನೇಮಕ ಮಾಡಿದರೇ ಈ ಮಾರ್ಗವಾಗಿ "ಜನಮನ" ವಾಹನ ಪ್ರಾರಂಭ ಮಾಡುತ್ತೇವೆ ಎಂದು ಇಡಿಸಿ ಅಧ್ಯಕ್ಷ ತೊಳಸಿಕೆರೆ ಕೆಂಪ್ಪಣ್ಣ ಹೇಳಿದರು.

Republic day: Attracted attention police march in Chamarajanagar

ಒಟ್ಟಿನಲ್ಲಿ ಸ್ವಾತಂತ್ರ್ಯ ಬಂದು 75 ವರ್ಷ ಕಳೆದಿವೆ. 5 ಜಿ ಯುಗಕ್ಕೆ ಭಾರತ ಕಾಲಿಟ್ಟು ಎಕ್ಸ್‌ಪ್ರೆಸ್‌ ವೇಗಳು ನಿರ್ಮಾಣವಾಗುತ್ತಿವೆ. ಆದರೆ, ಮತ್ತೊಂದೆಡೆ ಕನಿಷ್ಠ ಸೌಲಭ್ಯವೂ ಇಲ್ಲದೇ ಡೋಲಿ ಆಶ್ರಯಿಸಬೇಕಾಗಿರುವುದು ವಿಪರ್ಯಾಸವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+