ಗುಂಡ್ಲುಪೇಟೆ: ಮಳೆಗೆ ಧರೆಗುರುಳುತ್ತಿರುವ ಕಟ್ಟಡಗಳು!

Posted By: ಚಾಮರಾಜನಗರ ಪ್ರತಿನಿಧಿ
Subscribe to Oneindia Kannada

ಚಾಮರಾಜನಗರ, ಸೆಪ್ಟೆಂಬರ್ 12: ಗುಂಡ್ಲುಪೇಟೆ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಮಳೆಗೆ ಹಳೆಯ ಶಿಥಿಲಾವಸ್ಥೆಯಲ್ಲಿರುವ ಮನೆ ಮತ್ತು ಕಟ್ಟಡಗಳು ಕುಸಿದು ಬೀಳುತ್ತಿದ್ದರೆ ಮತ್ತೊಂದೆಡೆ ನೀರು ಸಂಗ್ರಹಕ್ಕಾಗಿ ನಿರ್ಮಿಸಿದ್ದ ಚೆಕ್ ಡ್ಯಾಂಗೂ ಹಾನಿಯಾಗಿದೆ ಇದರಿಂದಾಗಿ ಜನ ಆತಂಕಗೊಂಡಿದ್ದಾರೆ.

ಗುಂಡ್ಲುಪೇಟೆಯಲ್ಲಿ ಒಡೆದ ದೊಡ್ಡಕೆರೆ ಏರಿ: ರೈತರ ಆಕ್ರೋಶ

ಗುಂಡ್ಲುಪೇಟೆ ಪಟ್ಟಣದ ತಾಲೂಕು ಪಂಚಾಯಿತಿಗೆ ಸೇರಿದ ಹಳೆಯ ಕಟ್ಟಡಕ್ಕೆ ಹೊಂದಿಕೊಂಡಿದ್ದ ಜೀಪ್ ಗ್ಯಾರೇಜಿನ ಮೇಲ್ಛಾವಣಿ ಕುಸಿದುಬಿದ್ದ ಪರಿಣಾಮ ತಾಪಂ ಇಒ ಅವರಿಗೆ ಸೇರಿದ ಜೀಪ್ ಜಖಂಗೊಂಡಿದೆ.

Rain in Chamarajanagara: Many buildings and dams are collapsing

ಜೀಪ್ ಮೇಲೆ ಕಟ್ಟಡದ ಅವಶೇಷಗಳು ಬಿದ್ದಿದ್ದರಿಂದ ಜೆಸಿಬಿ ಬಳಸಿ ಅದನ್ನು ಹೊರತೆಗೆಯಲಾಗಿದೆ. ಇದರಿಂದ ಪಕ್ಕದ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ, ಹಿಂದುಳಿದ ವರ್ಗ ಹಾಗೂ ಅಂಗವಿಕಲರ ಕಚೇರಿಗಳಿಗೂ ಹಾನಿಯಾಗಿದೆ.

Rain in Chamarajanagara: Many buildings and dams are collapsing

ಚೆಕ್ ಡ್ಯಾಂ ಕುಸಿತ

ಮತ್ತೊಂದೆಡೆ ಚಿಕ್ಕತುಪ್ಪೂರು ಗ್ರಾಮದ ಮಾದಯ್ಯನಕಟ್ಟೆಗೆ ನೀರು ಹರಿದು ಬರುವ ಅಡ್ಡಹಳ್ಳದ ಸಮೀಪ ಕೃಷಿ ಇಲಾಖೆಯು ಜಲಾನಯನ ಯೋಜನೆಯಡಿ ನಿರ್ಮಿಸಿದ್ದ ಚೆಕ್‍ಡ್ಯಾಂ ನೀರಿನ ರಭಸಕ್ಕೆ ಕುಸಿದು ಬಿದ್ದಿದೆ.

Rain in Chamarajanagara: Many buildings and dams are collapsing

ಈ ಚೆಕ್ ಡ್ಯಾಂ ಕುಸಿಯಲು ಕಳಪೆ ಕಾಮಗಾರಿಯೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಗ್ರಾಮಕ್ಕೆ ನೀರು ಸರಬರಾಜು ಮಾಡುವ ಕೊಳವೆ ಬಾವಿಗಳಲ್ಲಿ ಅಂತರ್ಜಲ ವೃದ್ಧಿಸುವ ಸಲುವಾಗಿ ಕೆಲ ತಿಂಗಳ ಹಿಂದೆ ಈ ಚೆಕ್ ಡ್ಯಾಂ ನಿರ್ಮಿಸಲಾಗಿತ್ತು. ಇದಕ್ಕೆ ಸ್ಥಳೀಯವಾಗಿ ಲಭ್ಯವಿದ್ದ ಮರಳು, ಮಣ್ಣು, ನಿಗದಿತ ಪ್ರಮಾಣದಲ್ಲಿ ಸಿಮೆಂಟ್ ಬಳಕೆ ಮಾಡದೆ ತರಾತುರಿಯಲ್ಲಿ ನಿರ್ಮಿಸಿದ್ದರಿಂದ ಮಳೆಗೆ ನೀರು ಸಂಗ್ರಹವಾಗುತ್ತಿದ್ದಂತೆ ಕುಸಿದು ಬಿದ್ದಿದೆ ಎನ್ನಲಾಗಿದೆ. ಇದರ ನಿರ್ಮಾಣಕ್ಕೆ 3.2 ಲಕ್ಷ ರೂ. ಖರ್ಚಾಗಿತ್ತು ಎಂದು ಹೇಳಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
After heavy rain in many districts in Karnataka, Chamarajanagara district is facing a strange problem. Many old and poor construction buildings and dams are collapsing in the district.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ