ಕಾಂಗ್ರೆಸ್‌ನವರ ಮಾನಸಿಕತೆ ಹಾಗೂ ಓಲೈಕೆ ರಾಜಕಾರಣದಿಂದ ಗಲಭೆ- ಮುತಾಲಿಕ್ ಕಿಡಿ

ಚಾಮರಾಜನಗರ, ನವೆಂಬರ್‌ 24: ''ಕಾಂಗ್ರೆಸ್‌ನವರ ಮಾನಸಿಕತೆ ಹಾಗೂ ಓಲೈಕೆ ರಾಜಕಾರಣದಿಂದ ಗಲಭೆ, ಭಯೋತ್ಪಾದನೆ, ಗಲಾಟೆ ಆಗುತ್ತಿದೆ'' ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ.

ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಓಲೈಕೆಯಿಂದ ಭಯೋತ್ಪಾದಕ ಚಟುವಟಿಕೆ ಬೆಳೆದಿದೆ ಬೇಕಾದರೆ ದಾಖಲೆ ಸಮೇತ ಸಾಬೀತು ಪಡಿಸುತ್ತೇನೆ ಎಂದು ಹೇಳಿದ್ದಾರೆ.

ಇನ್ನು ದೇಶದ್ರೋಹಿ ಚಟುವಟಿಕೆಗೆ ಮೈಸೂರು ಪ್ರಯೋಗ ಶಾಲೆಯಾಗಿ ಬದಲಾಗಿದೆ. ಪಿಎಫ್ಐ ನಿಷೇಧಕ್ಕೊಳಗಾದರೂ ಪಿಎಫ್ಐ ಮಾನಸಿಕ ಸ್ಥಿತಿಯ ಸಾವಿರಾರು ಮಂದಿ ಇನ್ನೂ ಇದ್ದಾರೆ ಎಂದು ಕಿಡಿಕಾರಿದರು.

ಭಯೋತ್ಪಾದಕ ಮನಸ್ಥಿತಿ ವಿರುದ್ಧ ಈ ಬಹಿಷ್ಕಾರ

ಭಯೋತ್ಪಾದಕ ಮನಸ್ಥಿತಿ ವಿರುದ್ಧ ಈ ಬಹಿಷ್ಕಾರ

ಚಂಪಷಷ್ಟಿ ಹಿನ್ನೆಲೆಯಲ್ಲಿ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಹಿಂದುಯೇತರರಿಗೆ ವ್ಯಾಪಾರಕ್ಕೆ ಅವಕಾಶ ಕೊಡದಿರುವ ಬಗ್ಗೆ ಮಾತನಾಡಿದ ಅವರು, "ಈ ನಿರ್ಧಾರ ಸ್ವಾಗತಾರ್ಹ. ಈ ದೇಶದಲ್ಲಿದ್ದುಕೊಂಡು, ಇಲ್ಲಿನ ಸವಲತ್ತು ಪಡೆದುಕೊಂಡು ದೇಶದ್ರೋಹಿ ಚಟುವಟಿಕೆ ನಡೆಸುವವ ಕಿಡಿಗೇಡಿಗಳು. ಭಯೋತ್ಪಾದಕರಿಂದ ಈ ನಿರ್ಬಂಧ ಎಂಬುದನ್ನು ಮೌಲ್ವಿಗಳು, ಮುಲ್ಲಾಗಳು ಅರಿಯಬೇಕು. ಭಯೋತ್ಪಾದಕ ಮನಸ್ಥಿತಿ ವಿರುದ್ಧ ಈ ಬಹಿಷ್ಕಾರ. ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ಹಿಂದೂಯೇತರರಿಗೆ ವ್ಯಾಪಾರ, ಪ್ರವೇಶ ನಿರ್ಬಂಧಿಸಬೇಕು," ಎಂದು ಪ್ರಮೋದ್‌ ಮುತಾಲಿಕ್‌ ಒತ್ತಾಯಿಸಿದ್ದಾರೆ.

ಯೋಗಿ ಮಾದರಿ ರೀತಿ ಸರ್ಕಾರ ನಮ್ಮಲ್ಲಿ ತರಲು ಏಕೆ ಸಾಧ್ಯವಿಲ್ಲ

ಯೋಗಿ ಮಾದರಿ ರೀತಿ ಸರ್ಕಾರ ನಮ್ಮಲ್ಲಿ ತರಲು ಏಕೆ ಸಾಧ್ಯವಿಲ್ಲ

ಇನ್ನು ಮಂಗಳೂರು ಕುಕ್ಕರ್‌ನಲ್ಲಿ ಬಾಂಬ್‌ ಬ್ಲಾಸ್ಟ್‌ ಬಗ್ಗೆ ಮಾತನಾಡಿದ ಅವರು, "ಪೊಲೀಸ್ ಇಲಾಖೆಯ ವೈಫಲ್ಯದಿಂದಾಗಿ ಶಾರೀಕ್ ನಂತವರು ಬಾಂಬ್ ಹಾಕುತ್ತಿದ್ದಾರೆ. ಯೋಗಿ ಮಾದರಿ ರೀತಿ ಸರ್ಕಾರ ನಮ್ಮಲ್ಲಿ ತರಲು ಏಕೆ ಸಾಧ್ಯವಿಲ್ಲ. ಸಿದ್ದರಾಮಯ್ಯ ಹಿಂಪಡೆದ 200 ಕ್ಕೂ ಕೇಸ್‌ಗಳನ್ನು ಸರ್ಕಾರ ಏಕೆ ಇನ್ನೂ ರೀ ಓಪನ್ ಮಾಡಿಲ್ಲ. ರಾಜಕಾರಣಿಗಳು ಚುನಾವಣೆ ಬೆನ್ನೆತ್ತಿ ರಾಜ್ಯದ ಸುರಕ್ಷತೆ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆ. ಶಾರೀಕ್ ಲಿಂಕ್ ಈಗ ತೀರ್ಥಹಳ್ಳಿಗೆ ಬಂದಿದೆ. ಬಿಜೆಪಿಯವರ ಈ ವರ್ತನೆ ಸರಿಯಲ್ಲ," ಎಂದು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದರು.

24 ಮಂದಿ ಪ್ರಖರ ಹಿಂದುತ್ವವಾದಿಗಳು ಚುನಾವಣೆಗೆ ನಿಲ್ಲುತ್ತಾರೆ

24 ಮಂದಿ ಪ್ರಖರ ಹಿಂದುತ್ವವಾದಿಗಳು ಚುನಾವಣೆಗೆ ನಿಲ್ಲುತ್ತಾರೆ

"ಮುಂದಿನ ಬಾರಿ ಚುನಾವಣೆಗೆ ನಿಲ್ಲುವೆ. ಹಿಂದುತ್ವಕ್ಕಾಗಿ, ಹಿಂದೂಗಳ ಕಷ್ಟ ಆಲಿಸಲು, ಹಿಂದೂವಿನ ಧ್ವನಿಯನ್ನು ವಿಧಾನಸಭೆಯಲ್ಲಿ ಮೊಳಗಿಸಲು ಈ ಬಾರಿ ಚುನಾವಣೆಗೆ ನಿಲ್ಲುತ್ತೇನೆ. ನನ್ನ ಈ ನಿರ್ಧಾರ ಅಚಲವಾಗಿದೆ. 2023ರ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 24 ಮಂದಿ ಪ್ರಖರ ಹಿಂದುತ್ವವಾದಿಗಳು ಚುನಾವಣೆಗೆ ನಿಲ್ಲಲ್ಲಿದ್ದು ಸ್ವತಂತ್ರವಾಗಿ ಸ್ಪರ್ಧಿಸುತ್ತೇವೆ. ಡಿಸೆಂಬರ್ 2 ಇಲ್ಲವೇ 3ನೇ ವಾರ ಕ್ಷೇತ್ರ ಘೋಷಿಸುತ್ತೇನೆ," ಎಂದು ತಿಳಿಸಿದರು

ಹಿಂದೂಗಳು ಯಾವತ್ತೂ ಭಯೋತ್ಪಾದನಾ ಚಟುವಟಿಕೆ ಮಾಡುವುದಿಲ್ಲ

ಹಿಂದೂಗಳು ಯಾವತ್ತೂ ಭಯೋತ್ಪಾದನಾ ಚಟುವಟಿಕೆ ಮಾಡುವುದಿಲ್ಲ

ಇನ್ನು ಬುಧವಾರ ಕೂಡ ಮೈಸೂರಿನಲ್ಲಿ ಮಂಗಳೂರು ಬಾಂಬ್ ಬ್ಲಾಸ್ಟ್ ಮಾಡಿದ ಶಾರಿಕ್ ಹಿಂದೂ ವೇಷ ಧರಿಸಿದ್ದ ಎಂಬ ವಿಚಾರದ ಬಗ್ಗೆ ಮಾತನಾಡಿದ್ದ ಅವರು, "ಉಗ್ರಗಾಮಿಗಳು ತಾವು ಮಾಡುವ ಕೃತ್ಯಗಳನ್ನು ಹಿಂದೂಗಳ ಮೇಲೆ ಹಾಕಲು ಈ ರೀತಿಯ ಕುತಂತ್ರ ಮಾಡುತ್ತಿದ್ದಾರೆ. ಹಿಂದೂಗಳು ಯಾವತ್ತೂ ಭಯೋತ್ಪಾದನಾ ಚಟುವಟಿಕೆ ಮಾಡುವುದಿಲ್ಲ. ಭಾರತದಲ್ಲಿ ಮಾತ್ರ ಅಲ್ಲ,‌ ಇಡೀ ವಿಶ್ವದಲ್ಲೇ ಜಗಜ್ಜಾಹೀರಾಗಿರುವುದು ಇಸ್ಲಾಂ ಭಯೋತ್ಪಾದನೆ ಮಾತ್ರ. ಹಾಗಾಗಿ ಇಸ್ಲಾಮಿಕ್ ಭಯೋತ್ಪಾದನೆಯನ್ನು ಮಟ್ಟ ಹಾಕಬೇಕು. ಹಿಂದೂಗಳು ಇರುವ ಪ್ರದೇಶಗಳಲ್ಲಿ ಯಾವ ಗೊಂದಲ, ಸಮಸ್ಯೆಗಳು ಇರುವುದಿಲ್ಲ. ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಅಂದರೆ ಅಲ್ಲಿ ಎಲ್ಲಾ ರೀತಿಯ ಅಕ್ರಮ ಚಟುವಟಿಕೆಗಳಿವೆ ಎಂದರ್ಥ. ಅದೇ ಕಾರಣಕ್ಕೆ ಮುಸ್ಲಿಮರು ಅತೀ ಹೆಚ್ಚಿರುವ ಪ್ರದೇಶನವನ್ನು ಸೂಕ್ಷ್ಮ ಪ್ರದೇಶ ಅಂತಾರೆ," ಎಂದು ಕಿಡಿಕಾರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+