ವೀರಪ್ಪನ್ ಗುಂಡೇಟು ತಿಂದಿದ್ದ ಸಬ್ ಇನ್ಸ್‌ಪೆಕ್ಟರ್ ವಿಧಿವಶ
ಚಾಮರಾಜನರ, ಮೇ 25; ಕಾಡುಗಳ್ಳ ವೀರಪ್ಪನ್ ಹಾರಿಸಿದ್ದ ಗುಂಡುಗಳನ್ನು ತಲೆಯಲ್ಲಿ ಇಟ್ಟುಕೊಂಡೇ ಕರ್ತವ್ಯ ನಿರ್ವಹಿಸಿದ್ದ ಸಬ್ ಇನ್ಸ್‌ಪೆಕ್ಟರ್ ಇಂದು ಮೃತಪಟ್ಟಿದ್ದಾರೆ. 1992 ಆಗಸ್ಟ್ 14ರಂದು ಗುಂಡೇಟು ತಿಂದಿದ್ದರು.
ಚಾಮರಾಜನಗರದ ಪಟ್ಟಣ ಪೊಲೀಸ್ ಠಾಣೆಯ ಅಪರಾಧ ವಿಭಾಗದಲ್ಲಿ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿದ್ದರಾಜ ನಾಯಕ್ ಮಂಗಳವಾರ ಮೃತಪಟ್ಟಿದ್ದಾರೆ. ವೀರಪ್ಪನ್ ಹಿಡಿಯುವ ಕಾರ್ಯಾಚರಣೆ ವೇಳೆ ಮೀಣ್ಯಂನಲ್ಲಿ ನಡೆದಿದ್ದ ಗುಂಡಿನ ಕಾಳಗದಲ್ಲಿ ಸಿದ್ದರಾಜ ನಾಯಕ್‌ಗೆ ಗುಂಡು ತಗುಲಿತ್ತು.
1992ರಲ್ಲಿ ಎಸ್ಪಿ ಹರಿಕೃಷ್ಣ ಹಾಗೂ ಎಸ್ಐ ಶಕೀಲ್ ಅಹಮದ್ ಜೊತೆ ಕಾರ್ಯಾಚರಣೆಯಲ್ಲಿ ಸಿದ್ದರಾಜ ನಾಯಕ್ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ನಡೆದ ಚಕಮಕಿಯಲ್ಲಿ 7 ಗುಂಡುಗಳು ದೇಹ ಹೊಕ್ಕಿದ್ದವು. ಸಾವು ಬದುಕಿನ ನಡುವೆ ಹೋರಾಟ ಮಾಡಿ ಬದುಕುಳಿದಿದ್ದರು.

ಶಸ್ತ್ರ ಚಿಕಿತ್ಸೆ ನಡೆಸಿ 4 ಗುಂಡುಗಳನ್ನು ತೆಗೆಯಾಗಿತ್ತು. ಇನ್ನೂ ಮೂರು ಗುಂಡುಗಳು ತಲೆಯಲ್ಲಿಯೇ ಉಳಿದುಕೊಂಡಿದ್ದವು. ಕಳೆದ ವರ್ಷ ಕರೊನಾ ಸಮಯದಲ್ಲಿ 75 ದಿನಗಳ ಕಾಲ ರಜಾ ತೆಗೆದುಕೊಳ್ಳದೇ ಕೋವಿಡ್ ವಾರಿಯರ್ ಆಗಿ ಸಿದ್ದರಾಜು ನಾಯಕ್ ಕಾರ್ಯ ನಿರ್ವಹಣೆ ಮಾಡಿದ್ದರು.
ಸಿದ್ದರಾಜು ನಾಯಕ್ ಸೇವೆಯಿಂದ ನಿವೃತ್ತರಾಗಲು ಕೇವಲ 5 ದಿನ ಬಾಕಿ ಇತ್ತು. ಮಂಗಳವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಚಾಮರಾಜನಗರ ಜಿಲ್ಲಾ ಪೊಲೀಸ್ ಸಿಬ್ಭಂದಿ ಸಾವಿಗೆ ಸಂತಾಪ ಸೂಚಿಸಿದ್ದಾರೆ.












Click it and Unblock the Notifications