ಡಿಜಿಪಿ ನೀಲಮಣಿ ರಾಜು ಅವರೇ ನಿಮಗಿದು ಗೊತ್ತೇ!?

ಚಾಮರಾಜನಗರ, ಜುಲೈ 8: ಇದೀಗ ಕೆಲವು ಪೊಲೀಸ್ ಠಾಣೆಗಳು ಬೇಬಿ ಸಿಟ್ಟಿಂಗ್ ಕೇಂದ್ರಗಳೂ ಆದಂತಿವೆ. ಇದಕ್ಕೆ ಚಾಮರಾಜನಗರದಲ್ಲಿ ಉದಾಹರಣೆ ಸಿಗುತ್ತದೆ.

ಚಾಮರಾಜನಗರದಲ್ಲಿ ಕೆಲವು ಠಾಣೆ ಮುಂದೆ ಪೊಲೀಸ್ ಜೀಪ್ ನಲ್ಲಿ ಮಕ್ಕಳನ್ನು ಕೂರಿಸುವುದು, ಕೂರಿಸಿ ಫೋಟೊ ತೆಗೆಯುವುದು, ಜೀಪ್ ನೊಂದಿಗೆ ಸೆಲ್ಫೀ ತೆಗೆದುಕೊಳ್ಳುವುದೂ ಸಾಮಾನ್ಯವಾಗಿಬಿಟ್ಟಿದೆ. ಇದನ್ನು ಯಾರೂ ಗಮನಿಸದಿರುವುದೇ ವಿಪರ್ಯಾಸ.

police stations rules breaking in chamarajanagar

ಜೀಪ್ ಚಾಲಕನ ಅರಿವಿಗೂ ಬಾರದಂತೆ ಇವೆಲ್ಲ ನಡೆಯುವುದು ಆಶ್ಚರ್ಯವೇ. ಮತ್ತೊಂದೆಡೆ ಠಾಣೆಗಳು ಹುಟ್ಟುಹಬ್ಬ ಆಚರಿಸುವ ಕೇಂದ್ರಗಳೂ ಆಗುತ್ತಿವೆ. ಜೊತೆಗೆ ಖಾಸಗಿ ವಾಹನಗಳಿಗೆ ಪೊಲೀಸ್ ಎಂಬ ಸ್ಟಿಕ್ಕರ್ ಬಳಸಬಾರದೆಂದು ಸೂಕ್ತ ಮಾರ್ಗದರ್ಶನ ಇದ್ದರೂ ಪಟ್ಟಣ ಕೇಂದ್ರದಲ್ಲೇ 35ಕ್ಕೂ ಹೆಚ್ಚು ಖಾಸಗಿ ವಾಹನಗಳು ಸ್ಟಿಕ್ಕರ್ ನೊಂದಿಗೆ ರಾರಾಜಿಸುತ್ತಿವೆ.

ಈ ಅಶಿಸ್ತು ನಡವಳಿಕೆಗಳ ಬಗ್ಗೆ ನಿಗಾ ವಹಿಸಬೇಕಾದ ಪೊಲೀಸ್ ವರಿಷ್ಠಾಧಿಕಾರಿಗಳು ಮೌನ ವಹಿಸಿದ್ದಾರೆ. ಅವರೇ ಇದಕ್ಕೆ ಉತ್ತರ ನೀಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+