ಚಾಮರಾಜನಗರ: ನಮ್ಮುಡುಗ್ರು ಒಳ್ಳೆಯವ್ರು, ಕೈ ತುಂಬಾ ಸಂಪಾದನೆ ಮಾಡ್ತಾರೆ, ಅವ್ರಿಗೆ ಹೆಣ್ಣು ಕೊಡ್ರಪ್ಪೋ- ಮನವಿ ವಿಡಿಯೋ ವೈರಲ್
ಚಾಮರಾಜನಗರ, ಮಾರ್ಚ್, 05: ಇತ್ತೀಚಿನ ದಿನಗಳಲ್ಲಿ ಹುಡುಗರು ವಿವಾಹ ಆಗಲು ಹೆಣ್ಣಿಗಾಗಿ ಅಲೆದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ವಧು ಸಿಗಲೆಂದು ಯುವಕರು ದೇವರ ಮೊರೆ ಸೇರಿದಂತೆ ಇನ್ನಿತರ ಹರಕೆಗಳನ್ನು ಕಟ್ಟಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ ಬ್ಯಾನರ್‌ಗಳ ಮೂಲಕವೂ ಹುಡುಗಿ ಸಿಗಲೆಂದು ಬರೆಸಿ ಗಮನ ಸೆಳೆಯುತ್ತಿದ್ದಾರೆ. ಅದೇ ರೀತಿ ಇಂತಹದ್ದೇ ಒಂದು ವಿಚಿತ್ರ ಪ್ರಚಾರದ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.
ದಯವಿಟ್ಟು ಹೆಣ್ಣು ಕೊಡಿ: ನಮ್ಮುಡುಗರು ಒಳ್ಳೆಯವರು, ಕಷ್ಟ ಪಟ್ಟು ದುಡಿದು ಕೈ ತುಂಬಾ ಸಂಪಾದನೆ ಮಾಡುತ್ತಾರೆ. ದಯವಿಟ್ಟು ಅವರಿಗೆ ಹೆಣ್ಣು ಕೊಡಿ ಎಂದು ವ್ಯಕ್ತಿಯೊಬ್ಬ ಯುವಕರನ್ನು ನಿಲ್ಲಿಸಿಕೊಂಡು ಹೆಣ್ಣು ಮಕ್ಕಳ ಪೋಷಕರಿಗೆ ಮನವಿ ಮಾಡಿದ ಘಟನೆ ಚಾಮರಾಜನಗರ ತಾಲೂಕಿನ ಅಟ್ಟಗುಳಿಪುರ ಗ್ರಾಮದಲ್ಲಿ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಭಾರೀ ವೈರಲ್ ಆಗುತ್ತಿದೆ.

ವಿಡಿಯೋ ಭಾರೀ ವೈರಲ್: ಗ್ರಾಮಸ್ಥರೊಬ್ಬರು ಅವಿವಾಹಿತ ಹುಡುಗರನ್ನು ಒಂದು ಕಡೆ ನಿಲ್ಲಿಸಿ ವೀಡಿಯೋ ಮಾಡಿ ಹುಡುಗಿಯರ ಪೋಷಕರಿಗೆ ಮನವಿ ಮಾಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಸಖತ್ ಸದ್ದು ಮಾಡುತ್ತಿದೆ.












Click it and Unblock the Notifications