ಪೋಷಕರ ಮಡಿಲು ಸೇರಿದ ಕೊಳ್ಳೇಗಾಲದ ಬಾಲಕ

By: ಓನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಚಾಮರಾಜನಗರ ನವೆಂಬರ್ 24: ಕಾರ್ತಿಕ ಸೋಮವಾರದ ಪೂಜೆ ಪೋಷಕರೊಂದಿಗೆ ಬಂದ ಬಾಲಕ
ಆಕಸ್ಮಿಕವಾಗಿ ತಪ್ಪಿಸಿಕೊಂಡು ಮಹಿಳೆಯೊಬ್ಬರ ಆಶ್ರಯ ಪಡೆದಿದ್ದ ಬಾಲಕ ಕೊನೆಗೂ ಪೋಷಕರ ಮಡಿಲು ಸೇರಿದ್ದಾನೆ.

ಮಲೆಮಹದೇಶ್ವರ ಬೆಟ್ಟಕ್ಕೆ ತನ್ನ ಮಾವನ ಜೊತೆ ಬಂದ ಬಾಲಕ ಯೋಗೇಶ್ ಆಕಸ್ಮಿಕವಾಗಿ
ಕೊಳ್ಳೇಗಾಲದ ಬಸ್ ನಿಲ್ದಾಣದಲ್ಲಿ ತಪ್ಪಿಸಿಕೊಂಡಿದ್ದನು. ಪೋಷಕರು ಕಾಣದೆ ಕಂಗಲಾಗಿದ್ದ
ಬಾಲಕನನ್ನು ಯಳಂದೂರು ತಾಲೂಕಿನ ಹೊನ್ನೂರು ಗ್ರಾಮದ ಸಿದ್ದರಾಜಮ್ಮ ಕರೆದೊಯ್ದು ಆಶ್ರಯ ನೀಡಿದ್ದರು.[ಈ ಬಾಲಕನ ಪೋಷಕರಿಗೆ ಯಾರಾದರೂ ವಿಷಯ ತಿಳಿಸಬಹುದಾ!]

missing boy found in yalanduru taluk

ಬಾಲಕ ತಾನು ಯೋಗೇಶ್ ಅಂತಲೂ, ತನ್ನ ತಂದೆ ಚನ್ನಬಸಪ್ಪ, ಊರು ಬಾಣಂತಹಳ್ಳಿ ಎಂದಷ್ಟೆ
ಹೇಳಿದನು ವಿನಃ ಬೇರೇನೇ ಮಾಹಿತಿ ನೀಡಿರಲಿಲ್ಲ.

ಈ ನಡುವೆ ಪೋಷಕರಿಗೆ ಮಾಹಿತಿ ಲಭ್ಯವಾಗಿ ಅವರು ಕೊಳ್ಳೇಗಾಲ ಪೊಲೀಸ್ ಠಾಣೆಗೆ
ತೆರಳಿದ್ದರು. ಸರ್ಕಲ್ ಇನ್ಸ್‍ಪೆಕ್ಟರ್ ವೈ ಅಮರನಾರಾಯಣ್ ರವರು ಬಾಲಕ ಆಶ್ರಯ ಪಡೆದಿದ್ದ
ಯಳಂದೂರು ತಾಲೂಕಿನ ಹೊನ್ನೂರಿಗೆ ಪೊಲೀಸ್ ಸಿಬ್ಬಂದಿ ಕಳುಹಿಸಿ ಬಾಲಕ ಯೋಗೇಶ್ ಮತ್ತು
ಆರೈಕೆ ಮಾಡಿದ್ದ ಸಿದ್ದರಾಜಮ್ಮರವರನ್ನು ಕರೆತಂದು, ಯೋಗೇಶ್ ತಂದೆ ಚನ್ನಬಸಪ್ಪ ಅವರಿಗೆ
ಬುದ್ದಿವಾದ ಹೇಳಿ, ಬಾಲಕನನ್ನು ಹೆತ್ತವರ ಮಡಿಲಿಗೆ ಒಪ್ಪಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A boy went his Guardian in male mandeshwara hill that time he missing. Afterword police found in yalndur taluk honnur
Please Wait while comments are loading...