ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯ ಮಹಾಕುಂಭಮೇಳ: ಮಹದೇಶ್ವರನ ಬೆಟ್ಟದಲ್ಲಿ ಜ್ಯೋತಿ ಯಾತ್ರೆ ಆರಂಭ

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ, ಅ. 06: ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಅಂಬಿಗರಹಳ್ಳಿಯ ತ್ರಿವೇಣಿ ಸಂಗಮದಲ್ಲಿ ಇದೇ 13 ರಿಂದ 16 ರವರೆಗೆ ಮಹಾಕುಂಭಮೇಳ ಪುಣ್ಯಸ್ನಾನ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಗುರುವಾರ ಜ್ಯೋತಿ ಯಾತ್ರೆ ಆರಂಭಗೊಂಡಿದೆ.

ಹನೂರು ತಾಲೂಕಿನ ಮಹದೇಶ್ವರ ಬೆಟ್ಟದಲ್ಲಿ ಸಾಲೂರುಶ್ರೀ, ಸಚಿವರಾದ ನಾರಾಯಣಗೌಡ, ಕೆ.ಎನ್.ಗೋಪಾಲಯ್ಯ, ಹನೂರು ಶಾಸಕ ಆರ್‌.ನರೇಂದ್ರ ಅವರು ಮಲೆ ಮಹದೇಶ್ವರನಿಗೆ ಪೂಜೆ ಸಲ್ಲಿಸಿ ಜ್ಯೋತಿ ಯಾತ್ರೆಗೆ ಚಾಲನೆ ನೀಡಿದ್ದಾರೆ.‌

ಮೈಸೂರು ದಸರಾ; ಜಂಬೂ ಸವಾರಿಯಲ್ಲಿ ಚಾಮರಾಜನಗರದಿಂದ ಅಪ್ಪು ಸ್ತಬ್ಧಚಿತ್ರಮೈಸೂರು ದಸರಾ; ಜಂಬೂ ಸವಾರಿಯಲ್ಲಿ ಚಾಮರಾಜನಗರದಿಂದ ಅಪ್ಪು ಸ್ತಬ್ಧಚಿತ್ರ

ಅ.6 ರಂದು ಹೊರಟಿದೆ ಜ್ಯೋತಿ ಯಾತ್ರೆಯ ಮೊದಲನೇ ವಾಹನ

ಅ.6 ರಂದು ಹೊರಟಿದೆ ಜ್ಯೋತಿ ಯಾತ್ರೆಯ ಮೊದಲನೇ ವಾಹನ

ಮಹದೇಶ್ವರ ಜ್ಯೋತಿ ಯಾತ್ರೆಯ ಮೊದಲನೇ ವಾಹನ ಸಂಚರಿಸುವ ಮಾರ್ಗವು ಅ.6 ರಂದು ಶ್ರೀ ಮಲೆ ಮಹದೇಶ್ವರ ಬೆಟ್ಟದಿಂದ ಸಾಲೂರು ಮಠ- ಹನೂರು- ಕುಂತೂರು- ಕೊಳ್ಳೇಗಾಲದ ಮಾರ್ಗವಾಗಿ ಸಂಚರಿಸಿ ಟಿ ನರಸೀಪುರ ಜಗದ್ಗುರು ಶ್ರೀ ಶಿವರಾತ್ರೀಶ್ವರ ಮಂಗಳ ಮಂಟಪದಲ್ಲಿ ವಾಸ್ತವ್ಯ ಹೂಡಲಿದೆ.

ಅಕ್ಟೋಬರ್ 07 ರಂದು ಬೆಳಗ್ಗೆ ಟಿ ನರಸೀಪುರದಿಂದ ಕರೊಹಟ್ಟಿ, ವಾಟಾಳು,ಮೂಗೂರು - ಸಂತೇಮರಳ್ಳಿ -ಯಳಂದೂರು ಇರಸುವಾಡಿ- ಮಸಣಾಪುರ- ಹೊಂಗನೂರು- ರೇಚಂಬಳ್ಳಿ- ಕಾಗಲವಾಡಿ, ಹುರಳಿಬಂಜನಪುರ,ಸರಗೂರು,ಚಂದಕವಾಡಿ, ಕೋಡಿಮೋಳೆ, ರಾಮಸಮುದ್ರ ಮಾರ್ಗವಾಗಿ ಸಂಚರಿಸಿ ಚಾಮರಾಜನಗರ ಸಿದ್ದಮಲ್ಲೇಶ್ವರ ಮಠದಲ್ಲಿ ವಾಸ್ತವ್ಯ ಹೂಡಲಿದೆ.

ಅಕ್ಟೋಬರ್ 0 8 ರಂದು ಬೆಳಗ್ಗೆ ಚಾಮರಾಜನಗರದಿಂದ ಗುಂಡ್ಲುಪೇಟೆ- ನಂಜನಗೂಡು -ಸುತ್ತೂರು ಮಠ- ಮಾರ್ಗವಾಗಿ ಸಂಚರಿಸಿ ಸುತ್ತೂರು ಮಠದಲ್ಲಿ ವಾಸ್ತವ್ಯ ಹೂಡಲಿದೆ.

ಅಕ್ಟೋಬರ್ 12ಕ್ಕೆ ಕೆ ಆರ್ ಪೇಟೆ ತಲುಪಲಿರುವ ಯಾತ್ರೆ

ಅಕ್ಟೋಬರ್ 12ಕ್ಕೆ ಕೆ ಆರ್ ಪೇಟೆ ತಲುಪಲಿರುವ ಯಾತ್ರೆ

ಅಕ್ಟೋಬರ್ 9 ರಂದು ಬೆಳಗ್ಗೆ ಸುತ್ತೂರು ಮಠದಿಂದ ಅಲತ್ತೂರುಹುಂಡಿ, ಮಾದಯ್ಯನಹುಂಡಿ, ಮಲ್ಲರಾಜಯ್ಯನಹುಂಡಿ, ಮೂಡಳ್ಳಿ, ಹದಿನಾರು, ಮರಿಗೌಡನಹುಂಡಿ, ದೇವಲಾಪುರ, ಚಿಕ್ಕೇಗೌಡನಹುಂಡಿ, ಹೊಸಹುಂಡಿ, ತ್ರಿನೇಶ್ವರ ದೇವಸ್ಥಾನದ ಅರಮನೆ- ಮೈಸೂರು- ಚಾಮುಂಡಿ ಬೆಟ್ಟ- ಲಕ್ಷ್ಮಿಕಾಂತ ದೇವಸ್ಥಾನ-ಒಂಟಿಕೊಪ್ಪಲ್ - ವೆಂಕಟೇಶ್ವರ ದೇವಸ್ಥಾನ- ಚಂದ್ರಮೌಳೇಶ್ವರ ದೇವಸ್ಥಾನ- ಹೆಗ್ಗಡ ದೇವನಕೋಟೆ- ಸರಗೂರು ಹ್ಯಾಂಡ್ ಪೋಸ್ಟ್ ಮಾರ್ಗವಾಗಿ ಸಂಚರಿಸಿ ಶ್ರೀ ಮಹದೇಶ್ವರ ದೇವಾಲಯ ಭೀಮ ಕೊಲ್ಲಿಯಲ್ಲಿ ವಾಸ್ತವ್ಯ ಹೂಡಲಿದೆ.

ಅಕ್ಟೋಬರ್ 10 ರಂದು ಬೆಳಿಗ್ಗೆ ಶ್ರೀ ಮಹದೇಶ್ವರ ದೇವಾಲಯ ಭೀಮ ಕೊಲ್ಲಿಯಿಂದ ಹೆಗ್ಗಡ ದೇವನಕೋಟೆ- ಅಂತರಸಂತೆ - ಬೇಲದ ಕುಪ್ಪೆ ಮಾರ್ಗವಾಗಿ ಸಂಚರಿಸಿ ಗದ್ದಿಗೆ ಶ್ರೀ ಕೆಂಡಗಣೇಶ್ವರ ದೇವಾಲಯದಲ್ಲಿ ವಾಸ್ತವ್ಯ ಹೂಡಿ, ಅಕ್ಟೋಬರ್ 11ರಂದು ಬೆಳಿಗ್ಗೆ ಹುಣಸೂರು- ಬೆಟ್ಟದಪುರ- ಮಾರ್ಗವಾಗಿ ಸಂಚರಿಸಿ ಶ್ರೀಮಹಾದೇಶ್ವರ ದೇವಾಲಯ ಪಿರಿಯಾಪಟ್ಟಣದಲ್ಲಿ ವಾಸ್ತವ್ಯ ಹೂಡಲಿದೆ.

ಅಕ್ಟೋಬರ್ 12ರಂದು ಬೆಳಿಗ್ಗೆ ಪಿರಿಯಾಪಟ್ಟಣದಿಂದ ಶಿವ ದೇವಸ್ಥಾನ- ಪಿರಿಯಾಪಟ್ಟಣ -ಹುಣಸೂರು- ತಿಪ್ಪೂರು -ಸಾಲಿಗ್ರಾಮ -ಕೆ ಆರ್ ನಗರ- ಎಡತೊರೆ- ಅರ್ಕೇಶ್ವರ ದೇವಸ್ಥಾನ- ಆಲಂಬಾಡಿ ಕಾವಲು- ಅಕ್ಕಿ ಹೆಬ್ಬಾಳು ಮಾರ್ಗವಾಗಿ ಸಂಚರಿಸಿ ಕೆ ಆರ್ ಪೇಟೆಯಲ್ಲಿ ವಾಸ್ತವ್ಯ ಹೂಡಲಿದೆ. ಅಕ್ಟೋಬರ್ 13 ರಂದು ಬೆಳಗ್ಗೆ ಮತ್ತಿಘಟ್ಟ -ವಿಠಲಾಪುರ -ಸೋಮನಹಳ್ಳಿ -ಪುರ- ಅಂಬಿಗರಹಳ್ಳಿ ಮಾರ್ಗವಾಗಿ ಸಂಚರಿಸಿ ತ್ರಿವೇಣಿ ಸಂಗಮದಲ್ಲಿ ವಾಸ್ತವ್ಯ ಹೂಡಲಿದೆ.

ಆತ್ಮಲಿಂಗೇಶ್ವರ ದೇವಾಲಯದಲ್ಲಿ ಜ್ಯೋತಿ ವಾಸ್ತವ್ಯ

ಆತ್ಮಲಿಂಗೇಶ್ವರ ದೇವಾಲಯದಲ್ಲಿ ಜ್ಯೋತಿ ವಾಸ್ತವ್ಯ

ಮಹದೇಶ್ವರ ಜ್ಯೋತಿ ಯಾತ್ರೆಯ ಎರಡನೇ ವಾಹನವು ಅಕ್ಟೋಬರ್ 06 ರಂದು ಶ್ರೀ ಮಲೆ ಮಹದೇಶ್ವರ ಬೆಟ್ಟದಿಂದ ಕೊಳ್ಳೇಗಾಲ -ಹನೂರು -ಬಿ.ಜಿ ಪುರ- ಮಾರ್ಗವಾಗಿ ಸಂಚರಿಸಿ ಬಿ.ಜಿ ಪುರ ಮಂಟೇಸ್ವಾಮಿ ಪುಣ್ಯ ಕ್ಷೇತ್ರದಲ್ಲಿ ದೇವಾಲಯದಲ್ಲಿ ವಾಸ್ತವ್ಯ ಹೂಡಲಿದೆ.

ಅಕ್ಟೋಬರ್ 07 ರಂದು ಬೆಳಿಗ್ಗೆ ಬಿ.ಜಿ ಪುರ ಮಂಟೇಸ್ವಾಮಿ ಪುಣ್ಯ ಕ್ಷೇತ್ರದಿಂದ ಹಲಗೂರು ಮಳವಳ್ಳಿ- ಕಸಬಾ 1,2 ಮತ್ತು 3 - ಕಿರಗಾವಲು 1 ,2 ಮತ್ತು 3 ಕೆಎಂ ದೊಡ್ಡಿ ಮಾರ್ಗವಾಗಿ ಸಂಚರಿಸಿ ಕೆ ಎಂ ದೊಡ್ಡಿ ಹನುಮಂತನಗರ ಆತ್ಮಲಿಂಗೇಶ್ವರ ದೇವಾಲಯದಲ್ಲಿ ವಾಸ್ತವ್ಯ ಹೂಡಲಿದೆ. ಅಕ್ಟೋಬರ್ 8ರಂದು ಬೆಳಿಗ್ಗೆ ಆತಗೂರು -ಕೆಸ್ತೂರು -ಬೆಸಗರಹಳ್ಳಿ -ಕೊಪ್ಪ- ಬಿದರಕೋಟೆ - ಮಾರಗೌಡನಹಳ್ಳಿ ಮಾರ್ಗವಾಗಿ ಸಂಚರಿಸಿ ಕೆರಗೋಡು ಶ್ರೀ ಪಂಚಲಿಂಗೇಶ್ವರ ದೇವಾಲಯದಲ್ಲಿ ನಿಲ್ಲಲಿದೆ.

ಅಕ್ಟೋಬರ್ 9ರಂದು ಬೆಳಗ್ಗೆ ಕೆರಗೋಡು ಪಂಚಲಿಂಗೇಶ್ವರ ದೇವಾಲಯದಿಂದ ಕೀಲಾರ- ಹನಕೆರೆ- ಮಂಡ್ಯ ಹುಲಿವಾನ -ಜೀಗುಂಡಿ ಪಟ್ಟಣ -ದುದ್ದ -ಶಿವಳ್ಳಿ ಚಂದಗಾವಲು -ಹೊಳಲು -ಯಲಿಯೂರು -ತೂಬಿನಕೆರೆ ಮಾರ್ಗವಾಗಿ ಸಂಚರಿಸಿ ಕೊತ್ತತ್ತಿಯಲ್ಲಿ ವಿಶ್ರಾಂತಿ ಪಡೆಯಲಿದೆ.

ಅಕ್ಟೋಬರ್ 10 ರಂದು ಬೆಳಿಗ್ಗೆ ಅರಕೆರೆ 1 ಮತ್ತು 2 ಮಹದೇವಪುರ -ಮಂಡ್ಯ ಕೊಪ್ಪಲು- ಶ್ರೀರಂಗಪಟ್ಟಣ ಶೆಟ್ಟಳ್ಳಿ 1 ಮತ್ತು 2 ದರಸಗುಪ್ಪೆ- ಉಕ್ಕುಡ- ಕ್ಯಾತನಹಳ್ಳಿ- ಅರಳಕುಪ್ಪೆ -ಹರವು- ಕಟ್ಟೆರಿ -ಗಾಮನಹಳ್ಳಿ -ಚಿನಕುರಳಿ ಬೆಟ್ಟಹಳ್ಳಿ -ಪಾಂಡವಪುರ- ಬೆಳ್ಳಾಳೆ- ಇಂಗಳಗುಪ್ಪೆ ಕೆರೆತೊನ್ನೂರು -ಪಿ ಎಸ್ ಛತ್ರ -ಜಕ್ಕನಹಳ್ಳಿ ಮಾರ್ಗವಾಗಿ ಸಂಚರಿಸಿ ಮೇಲುಕೋಟೆಯಲ್ಲಿ ವಾಸ್ತವ್ಯ ಹೂಡಲಿದೆ.

ಅಕ್ಟೋಬರ್ 11ರಂದು ಬೆಳಿಗ್ಗೆ ಮೇಲುಕೋಟೆಯಿಂದ ಹೊಣಕೆರೆ- ದೇವಲಾಪುರ -ನಾಗಮಂಗಲ -ಬೆಳ್ಳೂರು ಮಾರ್ಗವಾಗಿ ಸಂಚರಿಸಿ ಚುಂಚನಗಿರಿಯಲ್ಲಿ ವಾಸ್ತವ್ಯ ಹೂಡಲಿದೆ. ಅಕ್ಟೋಬರ್ 12ರಂದು ಬೆಳಿಗ್ಗೆ ಚುಂಚನಗಿರಿಯಿಂದ ಬಿಂಡಿಗನವಿಲೆ- ಕಂಬದ ಹಳ್ಳಿ -ಸಂತೆ ಬಾಚನಹಳ್ಳಿ ಮಾರ್ಗವಾಗಿ ಸಂಚರಿಸಿ ಕೆ ಆರ್ ಪೇಟೆಯಲ್ಲಿ ವಾಸ್ತವ್ಯ ಹೂಡಲಿದ್ದು, ಅಕ್ಟೋಬರ್ 13ರಂದು ಬೆಳಿಗ್ಗೆ ಕೆಆರ್ ಪೇಟೆಯಿಂದ ಮತ್ತಿಘಟ್ಟ -ವಿಠಲಾಪುರ -ಸೋಮನಹಳ್ಳಿ- ಪುರ ಅಂಬಿಗರ ಹಳ್ಳಿ ಮಾರ್ಗವಾಗಿ ಸಂಚರಿಸಿ ತ್ರಿವೇಣಿ ಸಂಗಮಕ್ಕೆ ಬರಲಿದೆ.

ಕುಂಭ ಮೇಳದಲ್ಲಿ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಗಿ

ಕುಂಭ ಮೇಳದಲ್ಲಿ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಗಿ

ಮಹದೇಶ್ವರ ಜ್ಯೋತಿ ಯಾತ್ರೆಯ ಮೂರನೇ ವಾಹನವು ಅಕ್ಟೋಬರ್ 06 ರಂದು ಬೆಳಗ್ಗೆ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿ ಜ್ಯೋತಿ ಯಾತ್ರೆ ಹನೂರು- ಕೊಳ್ಳೇಗಾಲ -ಮರಡಿಗುಡ್ಡ (ವಿಶೇಷ ಪೂಜೆ) ಬನ್ನೂರು- ಬೆಳವಾಡಿ -ಪಾಲಳ್ಳಿ ಬೆಳಗೋಳ- ಕೆ ಆರ್ ಎಸ್ ಕನ್ನಂಬಾಡಿ- ವೇಣುಗೋಪಾಲಸ್ವಾಮಿ ಡಿಂಕಾ ಬಲ್ಲೇನಹಳ್ಳಿ ಮಾರ್ಗವಾಗಿ ಸಂಚರಿಸಿ ಕಲ್ಲಹಳ್ಳಿ ಭೂ ವರಾಹನಾಥ ಸ್ವಾಮಿ ದೇವಸ್ಥಾನದಲ್ಲಿ ವಾಸ್ತವ್ಯ ಹೂಡಲಿದೆ. ಅಕ್ಟೋಬರ್ 07 ರಂದು ಬೆಳಿಗ್ಗೆ ಕಲ್ಲಹಳ್ಳಿ ಭೂ ವರಾಹನಾಥ ಸ್ವಾಮಿ ದೇವಸ್ಥಾನದಿಂದ ಬಲ್ಲೇನಹಳ್ಳಿ ಗ್ರಾಮ ಪಂಚಾಯಿತಿ ಗ್ರಾಮಗಳು- ಭೂಕನಕೆರೆ ಗ್ರಾಮ ಪಂಚಾಯಿತಿ ಗ್ರಾಮಗಳು- ತೆಂಡೆಕೆರೆ -ಶೀಳನೆರೆ ಮಾರ್ಗವಾಗಿ ಸಂಚರಿಸಿ ಶೀಳನೆರೆಯಲ್ಲಿ ವಾಸ್ತವ್ಯ ಹೂಡಲಿದೆ.

ಅಕ್ಟೋಬರ್ 08 ರಂದು ಬೆಳಿಗ್ಗೆ ಶೀಳನೆರೆಯಿಂದ ಸಿಂಧಘಟ್ಟ- ಹರಳಹಳ್ಳಿ -ಚೌಡೇನಹಳ್ಳಿ -ಮಾಕಾವಳ್ಳಿ ಬಂಡಿಹೊಳೆ ಮಾರ್ಗವಾಗಿ ಸಂಚರಿಸಿ ಬಂಡಿ ಹೊಳೆಯಲ್ಲಿ ವಾಸ್ತವ್ಯ ಹೂಡಲಿದೆ. ಅಕ್ಟೋಬರ್ 0 9 ರಂದು ಬಂಡಿಹೊಳೆಯಿಂದ ಹರಿಹರಪುರ- ಮಡುವಿನ ಕೋಡಿ -ಬಳ್ಳೇಕೆರೆ- ಐಚನಹಳ್ಳಿ ಮಾರ್ಗವಾಗಿ ಸಂಚರಿಸಿ ಗಂಜಿಗೆರೆಯಲ್ಲಿ ವಾಸ್ತವ್ಯ ಹೂಡಲಿದೆ. ಅಕ್ಟೋಬರ್ 10 ರಂದು ಬೆಳಗ್ಗೆ ಗಂಜಿಗೆರೆ ಭಾರತಿಪುರ ಕ್ರಾಸ್ - ಅಘಲಯ- ಸಂತೆ ಬಾಚನಹಳ್ಳಿ -ರಂಗನಾಥಪುರ ಕ್ರಾಸ್ -ಸಾರಂಗಿ ಮಾರ್ಗವಾಗಿ ಸಂಚರಿಸಿ ಆಗ್ರಹಾರ ಬಾಚಹಳ್ಳಿಯಲ್ಲಿ ವಾಸ್ತವ್ಯ ಹೂಡಲಿದೆ.

ಅಕ್ಟೋಬರ್ 11ರಂದು ಬೆಳಿಗ್ಗೆ ಆಗ್ರಹಾರ ಬಾಚಹಳ್ಳಿಯಿಂದ ಕಿಕ್ಕೇರಿ -ಲಕ್ಷ್ಮಿಪುರ- ಆನೆಗೋಳ- ಮಾದಾಪುರ -ದಬ್ಬೆಘಟ್ಟ ಮಾರ್ಗವಾಗಿ ಸಂಚರಿಸಿ ಐಕನಹಳ್ಳಿಯಲ್ಲಿ ವಾಸ್ತವ್ಯ ಹೂಡಲಿದೆ. ಅಕ್ಟೋಬರ್ 12ರಂದು ಬೆಳಿಗ್ಗೆ ಹೈಕನಹಳ್ಳಿಯಿಂದ ಬೀರುವಳ್ಳಿ- ಹಿರಿಕಳಲೆ -ಮಂದಗೆರೆ ಮಾರ್ಗವಾಗಿ ಸಂಚರಿಸಿ ಕೆ ಆರ್ ಪೇಟೆಯಲ್ಲಿ ವಾಸ್ತವ್ಯ ಹೂಡಲಿದೆ. ಅಕ್ಟೋಬರ್ 13ರಂದು ಬೆಳಿಗ್ಗೆ ಕೆ ಆರ್ ಪೇಟೆ ಟೌನ್ ಮಾರ್ಗವಾಗಿ ಸಂಚರಿಸಿ ತ್ರಿವೇಣಿ ಸಂಗಮಕ್ಕೆ ತಲುಪಲಿದೆ.

ಆರ್.ಪೇಟೆ ತಾಲ್ಲೂಕಿನ ಅಂಬಿಗರಹಳ್ಳಿಯ ತ್ರಿವೇಣಿ ಸಂಗಮದಲ್ಲಿ ಅಕ್ಟೋಬರ್ 13 ರಿಂದ 16 ರವರೆಗೆ ನಡೆಯಲಿರುವ ಕುಂಭ ಮೇಳ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗವಹಿಸಲಿದ್ದಾರೆ.

English summary
Mandya Mahakumbha Mela; Jyoti Yatra begins at Mahadeshwar Hill today. Salurushri, Ministers Narayana Gowda, KN Gopaliah, Hanur MLA R Narendra offered pooja to Male Mahadeshwar and started the Jyoti Yatra. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X