Male Mahadeshwara Temple: ಮಾದಪ್ಪನ ಭಕ್ತರಿಗೆ ಮುಖ್ಯ ಮಾಹಿತಿ... ಈ ಪುಣ್ಯಸ್ಥಳಕ್ಕೆ ಹೋಗೋಕೆ ಟೈಂ ಫಿಕ್ಸ್
ಚಾಮರಾಜನಗರ, ಮಾರ್ಚ್ 03: ಮಲೆ ಮಹದೇಶ್ವರ ಬೆಟ್ಟದ ನಾಗಮಲೆಗೆ ತೆರಳುವ ಭಕ್ತಾದಿಗಳಿಗೆ ಮಾರ್ಚ್ 3 ರಿಂದ ಮಾರ್ಚ್ 10 ರವರೆಗೆ ಬೆಳಗ್ಗೆ 06.30 ರಿಂದ ಬೆಳಗ್ಗೆ 10.30 ಗಂಟೆಯೊಳಗೆ ನಾಗಮಲೆಗೆ ಕಾಲ್ನಡಿಗೆಯಲ್ಲಿ ಹೋಗಲು ಅರಣ್ಯ ಇಲಾಖೆ ಅವಕಾಶ ಕಲ್ಪಿಸಿದೆ.
ಅರಣ್ಯ ಸಚಿವಾಲಯ ರಾಜ್ಯಾದ್ಯಂತ ಅರಣ್ಯ ಪ್ರದೇಶದಲ್ಲಿ ಅನುಮತಿ ಇಲ್ಲದೆ ಟ್ರಕ್ಕಿಂಗ್ (ಚಾರಣ) ಮಾಡುವುದನ್ನು ನಿಷೇಧಿಸಿ ಈ ಹಿಂದೆ ಆದೇಶ ಹೊರಡಿಸಿದೆ. ಸಚಿವರ ಆದೇಶದಂತೆ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದಲ್ಲಿಯೂ ಸಹ ಅರಣ್ಯ ಪ್ರದೇಶದಲ್ಲಿ ಟ್ರಕ್ಕಿಂಗ್ ಮಾಡುವುದನ್ನು ನಿಷೇಧಿಸಲಾಗಿದೆ.

ಈ ವಿಭಾಗ ವ್ಯಾಪ್ತಿಯ ಮಲೈ ಮಹದೇಶ್ವರಬೆಟ್ಟ ವನ್ಯಜೀವಿ ವಲಯದಿಂದ ನಾಗಮಲೆಗೆ ತೆರಳಲು ಆನ್‌ಲೈನ್ ಮೂಲಕ ನೋಂದಾಯಿಸಿ ನಂತರ ನಾಗಮಲೆಗೆ ತೆರಳಬೇಕಾಗಿತ್ತು. ಆದರೆ, ಮಾರ್ಚ್ 8ರಂದು ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಇರುವುದರಿಂದ ಸಾರ್ವಜನಿಕರಿಗೆ, ಭಕ್ತಾದಿಗಳಿಗೆ ತೊಂದರೆಯಾಗುವ ಸಾಧ್ಯತೆ ಪರಿಗಣಿಸಿ ಮಾರ್ಚ್ 3 ರಿಂದ ಮಾರ್ಚ್ 10 ರ ರವರೆಗೆ ಕಾಲ್ನಡಿಗೆಯಲ್ಲಿ ತೆರಳಲು ಅವಕಾಶ ಕಲ್ಪಿಸಲಾಗಿದೆ.
ಬೆಳಗ್ಗೆ 06.30 ರಿಂದ ಬೆಳಗ್ಗೆ 10.30 ಗಂಟೆಯೊಳಗೆ ನಾಗಮಲೆಗೆ ಕಾಲ್ನಡಿಗೆಯಲ್ಲಿ ಹೋಗಲು ಅವಕಾಶ ಕಲ್ಪಿಸಲಾಗಿದ್ದು ನಾಗಮಲೆನಿಂದ ಬರುವ ಭಕ್ತಾದಿಗಳು ಸಂಜೆ 05.30 ಗಂಟೆಯೊಳಗೆ ಕಡ್ಡಾಯವಾಗಿ ಮರಳಿ ಮಹದೇಶ್ವರಬೆಟ್ಟಕ್ಕೆ ಹಿಂತಿರಗಬೇಕು. ಯಾವುದೇ ರೀತಿಯ ವಾಹನಗಳಲ್ಲಿ ತೆರಳವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಯಾವುದೇ ಪ್ಲಾಸ್ಟಿಕ್ ವಸ್ತುಗಳನ್ನು ಅರಣ್ಯದೊಳಗೆ ಹಾಕುವುದನ್ನು ನಿಷೇಧಿಸಲಾಗಿದೆ. ತಪ್ಪಿದ್ದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಮಲೆ ಮಹದೇಶ್ವರ ವನ್ಯಜೀವಿಧಾಮದ ಡಿಸಿಎಫ್ ಡಾ. ಸಂತೋಷ್ ಕುಮಾರ್ ಆದೇಶದಲ್ಲಿ ತಿಳಿಸಿದ್ದಾರೆ.

ಆದೇಶದಲ್ಲಿ ಇರುವುದೇನು?
"ಈ ಮೂಲಕ ಸಾರ್ವಜನಿಕರಿಗೆ ತಿಳಿಯಪಡಿಸುವುದೇನೆಂದರೆ, ಈಗಾಗಲೇ ಮಾನ್ಯ ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಸಚಿವರು, ಕರ್ನಾಟಕ ಸರ್ಕಾರ ರಾಜ್ಯಾದ್ಯಂತ ಅರಣ್ಯ ಪ್ರದೇಶದಲ್ಲಿ ಅನುಮತಿ ಇಲ್ಲದೆ ಟ್ರಕ್ಕಿಂಗ್ (ಚಾರಣ) ಮಾಡುವುದನ್ನು ನಿಷೇಧಿಸಿ ಆದೇಶ ಹೊರಡಿಸಿರುತ್ತಾರೆ. ಸಚಿವರ ಆದೇಶದಂತೆ ಮಲೈ ಮಹದೇಶ್ವರ ವನ್ಯಜೀವಿ ವಿಭಾಗದಲ್ಲಿಯೂ ಸಹ ಅರಣ್ಯ ಪ್ರದೇಶದಲ್ಲಿ ಟ್ರಕ್ಕಿಂಗ್ ಮಾಡುವುದನ್ನು ನಿಷೇಧಿಸಲಾಗಿದೆ. ಈ ವಿಭಾಗ ವ್ಯಾಪ್ತಿಯ ಮಲೈ ಮಹದೇಶ್ವರಬೆಟ್ಟ ವನ್ಯಜೀವಿ ವಲಯದಿಂದ ನಾಗಮಲೆಗೆ ತೆರಳಲು ಆನ್‌ಲೈನ್ ಮೂಲಕ ನೋಂದಾಯಿಸಿ ನಂತರ ನಾಗಮಲೆಗೆ ತೆರಳಬೇಕಾಗಿರುತ್ತದೆ. ಈ ಸಂಬಂಧ ಆನ್‌ಲೈನ್ ಮೂಲಕ ನೋಂದಾಯಿಸಲು ಆನ್‌ಲೈನ್ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗಿದೆ".
"ಆದರೆ ದಿನಾಂಕ: 08.03.2024 ರಂದು ಮಲೈ ಮಹದೇಶ್ವರಬೆಟ್ಟದಲ್ಲಿ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಇರುವುದರಿಂದ ಸಾರ್ವಜನಿಕರಿಗೆ/ಭಕ್ತಾದಿಗಳಿಗೆ ತೊಂದರೆಯಾಗುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಮೇಲಾಧಿಕಾರಿಗಳ ಜೊತೆ ಚರ್ಚೆ ಮಾಡಿ ಅವರು ನೀಡಿರುವ ನಿರ್ದೇಶನದಂತೆ ನಾಗಮಲೈಗೆ ತೆರಳುವ ಭಕ್ತಾದಿಗಳಿಗೆ ದಿನಾಂಕ 03.03.2024 ರಿಂದ 10.03.2024 ಬೆಳಗ್ಗೆ 06.30 ರಿಂದ 10.30 ಗಂಟೆಯೊಳಗೆ ನಾಗಮಲೆಗೆ ಕಾಲ್ನಡಿಗೆಯಲ್ಲಿ ಹೋಗಲು ಅವಕಾಶ ಕಲ್ಪಿಸಲಾಗಿರುತ್ತದೆ. ನಾಗಮಲೆನಿಂದ ಬರುವ ಭಕ್ತಾದಿಗಳು ಸಂಜೆ 05.30 ಗಂಟೆಯೊಳಗೆ ಖಡ್ಡಾಯವಾಗಿ ಮರಳಿ ಮಹದೇಶ್ವರಬೆಟ್ಟಕ್ಕೆ ಹಿಂತಿರುಗಬೇಕು".
"ಯಾವುದೇ ರೀತಿಯ ವಾಹನಗಳಲ್ಲಿ ತೆರಳವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಮಹದೇಶ್ವರಬೆಟ್ಟ ಮತ್ತು ಸುತ್ತಮುತ್ತಲಿನ ಪ್ರದೇಶವು ಪ್ಲಾಸ್ಟಿಕ್ ಮುಕ್ತ ಪ್ರದೇಶವಾಗಿರುವುದರಿಂದ ನಾಗಮಲೆಗೆ ಹೋಗುವ ಸಂದರ್ಭದಲ್ಲಿ ಯಾವುದೇ ಪ್ಲಾಸ್ಟಿಕ್ ವಸ್ತುಗಳನ್ನು ಅರಣ್ಯದೊಳಗೆ ಹಾಕುವುದನ್ನು ನಿಷೇಧಿಸಲಾಗಿದೆ. ತಪ್ಪಿದ್ದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು. ಸಾರ್ವಜನಿಕರು/ಭಕ್ತಾದಿಗಳು ಸಹಕರಿಸಲು ಕೋರಿದೆ- ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಲೈ ಮಹದೇಶ್ವರ ವನ್ಯಜೀವಿ ವಿಭಾಗ, ಕೊಳ್ಳೇಗಾಲ".












Click it and Unblock the Notifications