ಗೋಪಿನಾಥಮ್ ಬಳಿ ಕಾದಾಟದಲ್ಲಿ ಗಂಡಾನೆ ಸಾವು

By: ಚಾಮರಾಜನಗರ ಪ್ರತಿನಿಧಿ
Subscribe to Oneindia Kannada

ಹನೂರು, ಸೆಪ್ಟೆಂಬರ್ 21: ಕಾದಾಟದಲ್ಲಿ ಗಂಡಾನೆಯೊಂದು ಗಾಯಗೊಂಡು, ಸಾವನ್ನಪ್ಪಿದ ಘಟನೆ ಮಾದೇಶ್ವರ ವನ್ಯಜೀವಿ ವಿಭಾಗದ ವ್ಯಾಪ್ತಿಯಲ್ಲಿ ನಡೆದಿದೆ.

ಮಹದೇಶ್ವರ ವನ್ಯಜೀವಿ ವಲಯದ ಗೋಪಿನಾಥಮ್ ಬಳಿಯ ಎರೆಕೆಹಳ್ಳ ಅರಣ್ಯ ಪ್ರದೇಶದಲ್ಲಿ ಗಂಡಾನೆ ಕಳೇಬರ ದೊರೆತಿದ್ದು, ಪರಿಶೀಲನೆ ನಡೆಸಿದ ಅರಣ್ಯಾಧಿಕಾರಿಗಳು ಎರಡು ಸಲಗಗಳ ನಡುವೆ ನಡೆದ ಕಾದಾಟದಲ್ಲಿ ಸಾವನ್ನಪ್ಪಿದೆ ಎಂದು ದೃಢಪಡಿಸಿದ್ದಾರೆ. ಭೀಕರ ಕಾದಾಟದಲ್ಲಿ ಇನ್ನೊಂದು ಬಲಿಷ್ಠ ಗಂಡಾನೆ ಇದನ್ನು ಕೊಂದಿರಬಹುದು ಎಂದು ಸಂಶಯಪಡಲಾಗಿದೆ.[ಬಂಡೀಪುರದಲ್ಲಿ ಅರಣ್ಯಾಧಿಕಾರಿಗಳಿಗೆ ಜಿಂಕೆ ಮಾಂಸ, ಮದ್ಯ ಪೂರೈಸಿದರೆ?]

elephant

ಮಿಣ್ಯಂನ ಪಶ್ಯುವೈದ್ಯಾಧಿಕಾರಿ ಡಾ.ಚೇತನ್ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಅಂತ್ಯಕ್ರಿಯೆ ನಡೆಸಲಾಯಿತು. ಘಟನಾ ಸ್ಥಳಕ್ಕೆ ಎಸಿಎಫ್ ಲಿಂಗರಾಜು, ಆರ್‍ಎಫ್‍ಓ ಹನುಮಂತಯ್ಯ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Male elephant died while clash with other elephant in Madeshwara wild life division near Gopinatham. After medical examiniation elephant buried by forest department staff.
Please Wait while comments are loading...