'ರಾಜಕುಮಾರ'ನಿಲ್ಲದ ಬಂಡೀಪುರಕ್ಕೀಗ ಮಾದೇಶನೇ ದೊರೆ!

By: ಬಿಎಂ ಲವಕುಮಾರ್
Subscribe to Oneindia Kannada

ಚಾಮರಾಜನಗರ, ಮೇ 14: ಮೊದಲೆಲ್ಲ ಬಂಡೀಪುರ ಅಭಯಾರಣ್ಯಕ್ಕೆ ಸಫಾರಿಗೆ ಬರುವವರಿಗೆಲ್ಲ ರಾಯಭಾರಿ ಪ್ರಿನ್ಸ್ ಅಲ್ಲಲ್ಲಿ ದರ್ಶನ ನೀಡಿ ಗಮನ ಸೆಳೆಯುತ್ತಿದ್ದ. ಆತನನ್ನೇ ನೋಡಲೆಂದು ಹಲವರು ಬರುತ್ತಿದ್ದರು. ತನ್ನದೇ ಆದ ಗಾಂಭೀರ್ಯದ ನಡಿಗೆಯಿಂದ ಎಲ್ಲರ ಗಮನ ಸೆಳೆಯುತ್ತಿದ್ದ ಆತನ ಸಾವು ಎಲ್ಲರಿಗೂ ನಿರಾಸೆ ತಂದಿತ್ತು. ಅಷ್ಟೇ ಅಲ್ಲ ಆತನಿಲ್ಲದೆ, ಒಂದಷ್ಟು ನಷ್ಟವೂ ಅರಣ್ಯ ಇಲಾಖೆಗೆ ಆಗಿತ್ತು.

ಇದೀಗ ಪ್ರಿನ್ಸ್ ಇಲ್ಲದ ಖಾಲಿ ಜಾಗವನ್ನು ತುಂಬಲು ಆತನ ಮಗ ಮಾದೇಶ ರೆಡಿಯಾಗಿದ್ದಾನೆ. ಈ ಹಿಂದೆ ಅಧಿಪತ್ಯಕ್ಕಾಗಿ ಅಪ್ಪ ಮಗ ಜಗಳವಾಡಿ ಪ್ರಿನ್ಸ್ ಗೆ ಗಾಯವೂ ಆಗಿತ್ತು. ತದನಂತರ ಪ್ರಿನ್ಸ್ ತೆಪ್ಪಗಾಗಿದ್ದ. ಪ್ರಿನ್ಸ್ ಇರೋ ತನಕ ಕಾಣಿಸದೆ ಸಾವಿನ ಬಳಿಕ ಮಾದೇಶ ಅರಣ್ಯದಲ್ಲಿ ಕಾಣಿಸಿಕೊಳ್ಳುತ್ತಿದ್ದಾನೆ. ಇದು ಎಲ್ಲರಿಗೂ ಖುಷಿ ತಂದಿದೆ.[ವಿಧಿ ವಿಜ್ಞಾನ ಪರೀಕ್ಷೆಗೆ 'ಪ್ರಿನ್ಸ್' ಹುಲಿಯ ಅವಶೇಷ]

ಸಫಾರಿ ವಾಹನದ ಬಳಿಯೇ ತನ್ನ ಪಾಡಿಗೆ ತಾನು ಎಂಬಂತೆ ಹಾದು ಹೋಗುತ್ತಿರುವ ಮಾದೇಶ ತನ್ನದೇ ಆದ ನಡಿಗೆ, ಗಾಂಭೀರ್ಯದಿಂದ ಎಲ್ಲರ ಗಮನವನ್ನು ತನ್ನತ್ತ ಸೆಳೆಯುತ್ತಿದ್ದಾನೆ. ಅಷ್ಟೇ ಅಲ್ಲದೆ, ಪ್ರವಾಸಿಗರಿಗೆ ಫೋಸ್ ಕೊಡುತ್ತಿದ್ದಾನೆ.

 ಪೋಸು ನೀಡುತ್ತಿರುವ ಮಾದೇಶ

ಪೋಸು ನೀಡುತ್ತಿರುವ ಮಾದೇಶ

ಪೊದೆಗಳ ನಡುವೆ ಮಲಗಿ ಸಫಾರಿ ವಲಯಗಳಲ್ಲಿ ದರ್ಶನ ನೀಡುತ್ತಿದ್ದಾನೆ. ಜನರ ಸದ್ದು ಗದ್ದಲಗಳಿಗೂ ಬೆದರುತ್ತಿಲ್ಲ. ಹೀಗಾಗಿ ಪ್ರಿನ್ಸ್ ಹುಲಿಯ ನಂತರ ಅದರ ಸ್ಥಾನವನ್ನು ಮಾದೇಶ ಉಳಿಸಿಕೊಳ್ಳಲು ತಯಾರಾಗಿದ್ದಾನೆ ಎಂದು ಪ್ರವಾಸಿಗರು ಮಾತನಾಡಿಕೊಳ್ಳುತ್ತಿದ್ದಾರೆ.

 ಪ್ರಿನ್ಸ್ ನೆನಪು ಮಾತ್ರ

ಪ್ರಿನ್ಸ್ ನೆನಪು ಮಾತ್ರ

ಇನ್ನು ಪ್ರಿನ್ಸ್ ಹುಲಿಯ ಬಗ್ಗೆ ಹೇಳುವುದಾದರೆ ಇದು ಸುಮಾರು 5 ಅಡಿ ಉದ್ದ ಭಾರೀ ಗಾತ್ರದ ಹೊಂದಿತ್ತು. ಇತರೆ ಬಲಿಷ್ಠ ಹುಲಿಗಳೊಂದಿಗೆ ಕಾದಾಡಿ ಅವುಗಳನ್ನು ಸೋಲಿಸಿ ತನ್ನ ಅಧಿಪತ್ಯವನ್ನು ಸಾಧಿಸಿತ್ತು. ಹೀಗಾಗಿ ಅದು ಇದ್ದಷ್ಟು ದಿನ ಬೇರೆ ಗಂಡು ಹುಲಿಗಳು ಅಲ್ಲಿ ಕಂಡು ಬಂದಿರಲಿಲ್ಲ.['ಪ್ರಿನ್ಸ್' ಮುಖ ಪತ್ತೆ, ಮುಗಿಯದ ಹುಲಿ ಸಾವಿನ ಗೊಂದಲ]

 ನಾಲ್ಕು ಹುಲಿಗಳನ್ನು ಕೊಂದಿದ್ದ ಪ್ರಿನ್ಸ್

ನಾಲ್ಕು ಹುಲಿಗಳನ್ನು ಕೊಂದಿದ್ದ ಪ್ರಿನ್ಸ್

ತನ್ನ ಗಡಿರಕ್ಷಣೆಗಾಗಿ ಪ್ರಿನ್ಸ್ ತನ್ನ ಜೀವಿತಾವಧಿಯ ಒಂದು ದಶಕದಲ್ಲಿ ಸುಮಾರು ನಾಲ್ಕು ಹುಲಿಗಳನ್ನು ಸಾಯಿಸಿದೆ ಎಂದು ಹೇಳಲಾಗುತ್ತಿದೆ. ಹೀಗೆ ಬಂಡೀಪುರ ಉದ್ಯಾನದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಅನಭಿಸಕ್ತದೊರೆ ಪ್ರಿನ್ಸ್.

 ಪ್ರಿನ್ಸ್ ಮಗನೇ ಮಾದೇಶ

ಪ್ರಿನ್ಸ್ ಮಗನೇ ಮಾದೇಶ

ಗೌರಿ ಎಂಬ ಹೆಣ್ಣು ಹುಲಿಗೆ ಗರ್ಭ ಧರಿಸಲು ಕಾರಣನಾಗಿದ್ದ ಪ್ರಿನ್ಸ್. ಈತನಿಗೆ ಹುಟ್ಟಿದ ಮಾದೇಶನಿಗೀಗ ಆರು ವರ್ಷ. ಪ್ರಿನ್ಸ್ ನಂತೆಯೇ ಬಲಿಷ್ಠನಾಗಿದ್ದಾನೆ. ಆತನ ನಡಿಗೆಯನ್ನೇ ಅನುಕರಣೆ ಮಾಡುತ್ತಿದ್ದಾನೆ.[ರಾಜಕುಮಾರನ ಅಸಹಜ ಸಾವಿನ ತನಿಖೆ ಅಪೂರ್ಣ]

ಚಿತ್ರ ಕೃಪೆ: ದರ್ಶನ್ ಕುಮಾರ್ (ಫೇಸ್ಬುಕ್)

 ಹವಾ ಸೃಷ್ಟಿಸುತ್ತಿರುವ ಮಾದೇಶ

ಹವಾ ಸೃಷ್ಟಿಸುತ್ತಿರುವ ಮಾದೇಶ

ಪ್ರಿನ್ಸ್ ಸಾವಿಗೂ ಮೊದಲು ಮಾದೇಶ ಬಂಡೀಪುರದ ಸಫಾರಿ ವಲಯಗಳಾದ ಮಿನಿಷ್ಟ್ರಿಗುತ್ತಿ, ಮೂರ್‍ಕೆರೆ, ನಂಜನಾಪುರ, ಆನೆಕಟ್ಟೆ, ಅಟನಿಕಟ್ಟೆ, ಹುಲಿಕಟ್ಟೆ ಅರಣ್ಯ ಪ್ರದೇಶದಲ್ಲಿ ಪ್ರವಾಸಿಗರಿಗೆ ಕಾಣಿಸಿಕೊಳ್ಳುತ್ತಿದ್ದನಾದರೂ ತನ್ನ ಹವಾ ಸೃಷ್ಟಿಸಿರಲಿಲ್ಲ. ಪ್ರಿನ್ಸ್ ಸಾವಿನ ನಂತರ ಈಗ ಮಾದೇಶ ಕಾಣಿಸಿಕೊಳ್ಳುತ್ತಿದ್ದು, ಸಫಾರಿಗೆ ತೆರಳುವವರ ಗಮನ ಸೆಳೆಯುತ್ತಿದ್ದಾನೆ.

ಚಿತ್ರ ಕೃಪೆ: ರೆವಿ ಉನ್ನಿ (ಫೇಸ್ಬುಕ್)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
After the death of 'Prince' the legendary tiger of Bandipur and a darling of tourists, Madesh occupied his place. In relation Madesh was the son of ‘Prince’.
Please Wait while comments are loading...