ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಧಿ ವಿಜ್ಞಾನ ಪರೀಕ್ಷೆಗೆ 'ಪ್ರಿನ್ಸ್' ಹುಲಿಯ ಅವಶೇಷ

ಬಂಡೀಪುರದ ಷಫರ್ಡ್ ಡಾಗ್ ರಾಣಾ, ಪ್ರಿನ್ಸ್ ಸತ್ತಿದ್ದ ಸ್ಥಳದ ಸುತ್ತ ಹುಡುಕಾಟ ನಡೆಸಿದಾಗ ಅದರ ಕೆಳ ದವಡೆಯ ಪತ್ತೆಯಾಗಿತ್ತು. ಈ ಕುರಿತಂತೆ ಹೆಚ್ಚಿನ ತನಿಖೆಗಾಗಿ ದವಡೆಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಚಾಮರಾಜನಗ, ಏಪ್ರಿಲ್ 20: ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ರಾಯಭಾರಿಯಾಗಿ ಪ್ರವಾಸಿಗರನ್ನು ಸೆಳೆಯುತ್ತಿದ್ದ ಪ್ರಿನ್ಸ್ ಹುಲಿಯ ನಿಗೂಢ ಸಾವಿನ ಕುರಿತಂತೆ ತನಿಖೆ ಮುಂದುವರೆದಿದೆ. ಸಾವಿಗೆ ಕಾರಣ ಹುಡುಕುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಸಾವಿಗೀಡಾಗಿದ್ದ ಪ್ರಿನ್ಸ್ ಹುಲಿಯ ದವಡೆ ಎಂದು ಹೇಳಲಾಗಿರುವ ಭಾಗವನ್ನು ಹೆಚ್ಚಿನ ಪರೀಕ್ಷೆಗಾಗಿ ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದೆ.

ಬಂಡೀಪುರದ ಷಫರ್ಡ್ ಡಾಗ್ ರಾಣಾ ನೆರವಿನಿಂದ ಘಟನಾ ಸ್ಥಳದ ಸುತ್ತಲೂ ಹುಡುಕಾಟ ನಡೆಸಿದಾಗ ಏ.17ರಂದು ಅದರ ಕೆಳ ದವಡೆಯು ಪತ್ತೆಯಾಗಿದೆ. ಈ ಕುರಿತಂತೆ ಹೆಚ್ಚಿನ ತನಿಖೆ ನಡೆಸಲು ಹಾಗೂ ಸಿಕ್ಕಿರುವ ದವಡೆ ಭಾಗ ಪ್ರಿನ್ಸ್ ಹುಲಿಯದ್ದೇ ಎಂಬುದನ್ನು ಖಚಿತ ಪಡಿಸಲು ಬೆಂಗಳೂರಿನ ಮಡಿವಾಳದ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಕುಂದಕೆರೆ ವಲಯಾರಣ್ಯಾಧಿಕಾರಿ ಶಿವಾನಂದ ವಿ.ಮಗದುಂ ತಿಳಿಸಿದ್ದಾರೆ.['ಪ್ರಿನ್ಸ್' ಮುಖ ಪತ್ತೆ, ಮುಗಿಯದ ಹುಲಿ ಸಾವಿನ ಗೊಂದಲ]

 Bandipur tiger Prince's snout sends to forensic lab

ಎಪಿಸಿಸಿಎಫ್ ಭೇಟಿ:
ಈ ನಡುವೆ ಪ್ರಿನ್ಸ್ ಹುಲಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವಿಗೀಡಾಗಿದ್ದ ಬಂಡೀಪುರದ ಕುಂದಕೆರೆ ವಲಯಕ್ಕೆ ಎಪಿಸಿಸಿಎಫ್ ರಂಗರಾವ್ ಭೇಟಿ ನೀಡಿದ್ದಾರೆ. ವನ್ಯಜೀವಿಗಳಿಗೆ ಸೌರವಿದ್ಯುತ್ ಮೋಟಾರು ಅಳವಡಿಸುವ ಮೂಲಕ ಕುಡಿಯುವ ನೀರು ಪೂರೈಕೆ ಹಾಗೂ ಕಂದಕಗಳನ್ನು ಪರಿಶೀಲಿಸಿದ್ದಾರೆ.[ರಾಜಕುಮಾರನ ಅಸಹಜ ಸಾವಿನ ತನಿಖೆ ಅಪೂರ್ಣ]

 Bandipur tiger Prince's snout sends to forensic lab

ಈ ಸಂದರ್ಭದಲ್ಲಿ ಬಂಡೀಪುರ ಹುಲಿ ಯೋಜನೆಯ ನಿರ್ದೇಶಕ ಟಿ.ಹೀರಲಾಲ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಎ.ಟಿ.ಪೂವಯ್ಯ, ಡಿ.ಎ.ಮರಡಿಮನಿ, ಬಂಡೀಪುರ ವಲಯಾರಣ್ಯಾಧಿಕಾರಿ ಜೆ.ಗೋವಿಂದರಾಜು ಹಾಜರಿದ್ದು ಮಾಹಿತಿ ನೀಡಿದ್ದಾರೆ.

ಪ್ರಿನ್ಸ್ ಸಾವಿನ ಕುರಿತಂತೆ ಗೊಂದಲಗಳು ಸಾರ್ವಜನಿಕ ವಲಯದಲ್ಲಿ ದಟ್ಟವಾಗಿರುವ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಈ ಸಂಬಂಧ ತನಿಖೆ ನಡೆಸಿ ಸಾವಿಗೆ ನೈಜ ಕಾರಣಗಳನ್ನು ಹೊರಗೆಡವುದು ಅನಿವಾರ್ಯವಾಗಿದೆ.

English summary
The most photographed tiger in Bandipur, Prince's snouts sends to forensic lab to deal the mystery behind its controversial death.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X