ಚಾಮರಾಜನಗರ: ಆನೆಗೆ ಕಬ್ಬು ನೀಡಿದ್ಧಕ್ಕೆ ಲಾರಿ ಚಾಲಕನಿಗೆ 75 ಸಾವಿರ ದಂಡ
ಚಾಮರಾಜನಗರ, ಡಿಸೆಂಬರ್, 05: ಚಾಮರಾಜನಗರ ಗಡಿಭಾಗದ ತಮಿಳುನಾಡಿನ ಆಸನೂರು ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಆನೆಯೊಂದು ಲಾರಿಗೆ ಅಡ್ಡಲಾಗಿ ನಿಂತಿತ್ತು. ಎದುರು ಬಂದ ಗಜರಾಜನಿಗೆ ಲಾರಿ ಚಾಲಕ ಕಬ್ಬು ಕೊಟ್ಟಿದ್ದಾನೆ. ಆದ್ದರಿಂದ ತಮಿಳುನಾಡು ಪೊಲೀಸರು ಲಾರಿ ಚಾಲಕನಿಗೆ 75 ಸಾವಿರ ರೂಪಾಯಿ ದಂಡ ಹಾಕಿದ್ದಾರೆ.
ಮೈಸೂರು ಜಿಲ್ಲೆಯ ನಂಜನಗೂಡು ಮೂಲದ ಸಿದ್ದರಾಜು ಎಂಬ ಲಾರಿ ಚಾಲಕನಿಗೆ ಪೊಲೀಸರು ದಂಡ ಹಾಕಿದ್ದಾರೆ. ಚಾಮರಾಜನಗರ ಗಡಿಭಾಗವಾದ ತಮಿಳುನಾಡಿನ ಆಸನೂರು ಸಮೀಪ ರಸ್ತೆ ಬದಿ ನಿಂತಿದ್ದ ಆನೆಗೆ ಕಬ್ಬಿನ ಕಂತೆಗಳನ್ನು ಎಸೆದಿದ್ದಾರೆ. ಇದನ್ನು ಕಂಡ ಗಸ್ತು ತಿರುಗುತ್ತಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಚಾಲಕನನ್ನು ವಿಚಾರಿಸಿ ಆತನಿಗೆ ದಂಡ ಹಾಕಿದ್ದಾರೆ.
ಮುಖ್ಯಮಂತ್ರಿಗಳು ಬರೀ ಬುರುಡೆ ಬಿಡುತ್ತಾರೆ: ಚಾಮರಾನಗರದಲ್ಲಿ ವಾಟಾಳ್ ನಾಗರಾಜ್ ಆಕ್ರೋಶ
ಆನೆಗೆ ಕಬ್ಬು ಕೊಟ್ಟಿದ್ದಕ್ಕೆ ದಂಡ
ದಂಡ ಕಟ್ಟುವವೆರೆಗೂ ಲಾರಿ ಬಿಡುವುದಿಲ್ಲ ಎಂದು ಪೊಲೀಸರು ವಾರ್ನ್ ಮಾಡಿದ್ದರು. ನಂತರ ಲಾರಿ ಚಾಲಕ ಯಾವುದೇ ಪರ್ಯಾಯ ದಾರಿಯಿಲ್ಲದೇ ದಂಡ ಕಟ್ಟಿದ್ದಾನೆ ಎಂದು ತಿಳಿದುಬಂದಿದೆ. ಕಬ್ಬಿನ ರುಚಿಗಾಗಿ ಆನೆಗಳು ಆಗಾಗ್ಗೆ ಲಾರಿಗಳಿಗೆ ಅಡ್ಡ ಹಾಕುತ್ತವೆ. ಬೆಂಗಳೂರು ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಆಸನೂರು ಭಾಗದಲ್ಲಿ ಇದು ಸಾಮಾನ್ಯವಾಗಿದೆ. ನಂತರ ಲಾರಿ ಚಾಲಕ ಈ ರೀತಿಯಾಗಿ ದಂಡ ವಿಧಿಸಿರುವುದು ಆಕ್ರೋಶಕ್ಕೂ ಕಾರಣವಾಗಿದೆ ಎನ್ನುವ ಮಾಹಿತಿ ಹೊರಬಿದ್ದಿದೆ.
ಸಿಎಂ ಬೊಮ್ಮಾಯಿ ವಿರುದ್ಧ ವಾಟಾಳ್ ಆಕ್ರೋಶ
ಬಜೆಟ್‌ನಲ್ಲಿ ಜಿಲ್ಲೆಯ ಅಭಿವೃದ್ದಿಗೆ ಮೂರುಕಾಸು ಮೀಸಲಿಡದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚುನಾವಣೆ ಹತ್ತಿರ ಇರುವುದರಿಂದ ಚಾಮರಾಜನಗರಕ್ಕೆ ಬರುತ್ತಾರೆ. ಹಾಗೆಯೇ 6 ಸಾವಿರ ಕೋಟಿ, 3 ಸಾವಿರ ಕೋಟಿ ಬಿಡುಗಡೆ ಮಾಡಿದ್ದೇನೆ ಎಂದು ಬುರುಡೆ ಬಿಡುತ್ತಾರೆ. ಇದನ್ನು ನಂಬಬೇಡಿ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಜಿಲ್ಲೆಯ ಜನರಿಗೆ ಹೇಳಿದರು.
ಬಂಡೀಪುರ ಟೂ ಸಾತ್ಪುರ: ಹೊರರಾಜ್ಯಕ್ಕೆ ತೆರಳಿದ ನಾಲ್ಕು ಗಜಗಳು
ಬಸವರಾಜ ಬೊಮ್ಮಯಿ ಬರೀ ಬರುಡೆ ಬಿಡ್ತಾರೆ
ನಗರದ ಪ್ರವಾಸಿಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಚಾಮರಾಜನಗರದ ಜನತೆ ನೋವಿನಲ್ಲಿ ಇದ್ದು, ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಮುಖ್ಯಮಂತ್ರಿಗಳಿಗೆ ಚಾಮರಾಜನಗರದ ಮೇಲೆ ಇಷ್ಟು ದಿನಗಳಿಂದ ಇಲ್ಲದ ಪ್ರೀತಿ ಚುನಾವಣೆ ಸಂದರ್ಭದಲ್ಲಿ ಏಕೆ? ನೀವು ಇಲ್ಲಿ ಬಂದು ಸಾವಿರಾರು ಕೋಟಿ ಬಿಡುಗಡೆ ಘೋಷಣೆ ಮಾಡಿದರೆ, ಅದು ಆದೇಶ ಆಗಲು ಅನೇಕ ದಿನಗಳ ಕಾಲಾವಕಾಶ ಬೇಕಾಗುತ್ತದೆ. ಇನ್ನು 5 ತಿಂಗಳೊಳಗೆ ಚುನಾವಣೆ ಬಂದು ನಿಮ್ಮ ಸರ್ಕಾರ ಬಿದ್ದುಹೋಗುತ್ತದೆ. ಅಮೇಲೆ ಅನುದಾನ ಬಿಡುಗಡೆ ಮಾಡುತ್ತೀರಾ? ಇದು ಬರೀ ನಾಟಕ. ಚಂದ್ರ ಲೋಕವನ್ನೇ ಮೇಲಕ್ಕೆ ತರುತ್ತೇನೆ ಎಂದು ಬರೀ ಬುರುಡೆ ಬಿಡುತ್ತಾರೆ," ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಚಾಮರಾಜನಗರಕ್ಕೆ ನಿಮ್ಮ ಕೊಡುಗೆ ಏನು? ಪಿಡಬ್ಲ್ಯೂ ಯೋಜನೆಯಡಿಯಲ್ಲಿ ಎಷ್ಟು ರಸ್ತೆ ಮಾಡಿಸಿದ್ದೀರಿ. ನೀರಾವರಿ ಎಷ್ಟು ಅಭಿವೃದ್ಧಿ ಮಾಡಿಸಿದ್ದೀರಿ? ಎಷ್ಟು ಜನರಿಗೆ ಮನೆಗಳನ್ನು ಕೊಟ್ಟಿದ್ದೀರಿ? ಎಷ್ಟು ವಿದ್ಯುತ್‌ಶಕ್ತಿ ಮಾಡಿದ್ದೀರಿ? ಎಂದು ಸರಣಿ ಪ್ರಶ್ನೆಗಳನ್ನು ಕೇಳುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ನೀವು ಗಣಿಗಾರಿಕೆ ಲೂಟಿ ಮಾಡುವವರಿಗೆ ಬೆಂಬಲ ಕೊಟ್ಟಿದ್ದೀರಿ ಹೊರತು ಬೇರೆ ಯಾರಿಗೂ ಅಲ್ಲ. ಇದರಿಂದ ಜನರಿಗೆ ದೊಡ್ಡ ಅನ್ಯಾಯವಾಗಿದೆ ಎಂದು ಆರೋಪಿಸಿದರು.