ರೋಹಿಣಿ ಸಿಂಧೂರಿಗೆ ಅಧಿಕ ಪ್ರಸಂಗಿ ಎಂದ ಶಾಸಕ ಎನ್.ಮಹೇಶ್
ಚಾಮರಾಜನಗರ, ಜೂನ್ 4: ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಗೆ ಅಧಿಕ ಪ್ರಸಂಗಿ ಎಂದು ಕೊಳ್ಳೇಗಾಲ ಶಾಸಕ ಎನ್.ಮಹೇಶ್ ವಾಗ್ದಾಳಿ ನಡೆಸಿದರು.
Recommended Video
ಯಾಕೊ Rohini sindhuri ಟೈಮ್ ಸರಿ ಇಲ್ಲ ಅನ್ಸುತ್ತೆ | N Mahesh | Oneindia Kannada
ಚಾಮರಾಜನಗರದಲ್ಲಿ ಮಾತನಾಡಿದ ಶಾಸಕ ಎನ್.ಮಹೇಶ್, ಕೊರೊನಾ ಸಂಕಷ್ಟದಲ್ಲಿ ಇಬ್ಬರು ಅಧಿಕಾರಿಗಳ ಕೆಸರೆರಚಾಟ ಸರಿಯಲ್ಲ. ಮಾಧ್ಯಮದ ಮೂಲಕ ಕಚ್ಚಾಟದಲ್ಲಿ ತೊಡಗಿರುವುದು ದುರಾದೃಷ್ಟಕರ ಎಂದು ಕಿಡಿಕಾರಿದರು.
ಮೈಸೂರು ಜಿಲ್ಲಾಧಿಕಾರಿಗೆ ಹೆದರಿ ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ರಾಜೀನಾಮೆ ಯಾಕೆ ಕೊಡಬೇಕು? ಆಕ್ಸಿಜನ್ ದುರಂತದ ಸಮಯದಲ್ಲಿ ಚಾಮರಾಜನಗರದ ಜನತೆ ಕ್ಷಮೆ ಕೇಳಬೇಕು ಎಂದು ಅಸಂಬದ್ಧ ಹೇಳಿಕೆ ನೀಡಿದ್ದ ರೋಹಿಣಿ ಸಿಂಧೂರಿ ಹೇಳಿದ್ದರು. ಕ್ಷಮೆ ಕೇಳಲು ಇವರೇನು ಮೈಸೂರು ಮಹಾರಾಜರಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೇ, ಸರ್ಕಾರ ಈ ಇಬ್ಬರು ಅಧಿಕಾರಿಗಳನ್ನ ನಿಯಂತ್ರಣದಲ್ಲಿಡಬೇಕು. ಇಬ್ಬರು ಅಧಿಕಾರಿಗಳಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಬುದ್ಧಿವಾದ ಹೇಳಬೇಕು ಎಂದು ಶಾಸಕ ಎನ್.ಮಹೇಶ್ ಹೇಳಿದರು.












Click it and Unblock the Notifications