ಕಾವೇರಿಯಲ್ಲಿ ಮುಳುಗಿ ಬೆಂಗ್ಳೂರಿನ ವಿದ್ಯಾರ್ಥಿಗಳು ಸಾವು

ಚಾಮರಾಜನಗರ, ಜನವರಿ 13: ಶಿವನಸಮುದ್ರಕ್ಕೆ ಪ್ರವಾಸಕ್ಕೆಂದು ತೆರಳಿದ್ದ ಬೆಂಗಳೂರಿನ ಯಲಹಂಕದ ಬಿಎಸ್ಎಸ್ ಕಾಲೇಜಿನ ಮೂವರು ವಿದ್ಯಾರ್ಥಿಗಳಲ್ಲಿ ಇಬ್ಬರು ಕಾವೇರಿ ನೀರಿನಲ್ಲಿ ಮುಳುಗಿ ಮೃತರಾಗಿದ್ದಾರೆ. ಒಬ್ಬರು ಜೀವನ್ಮರಣ ಹೋರಟ ನಡೆಸುತ್ತಿದ್ದಾರೆ.

ಚಾಮರಾಜಗರದ ಕೊಳ್ಳೆಗಾಲ ಠಾಣಾ ವ್ಯಾಪ್ತಿಯ ಶಿಂಷಾ ಎಂಬಲ್ಲಿ ಈ ಘಟನೆ ನಡೆದಿದ್ದು, ಶ್ರೀನಿವಾಸ್ ಮತ್ತು ದೇವರಾಜು ಕಾವೇರಿ ನೀರಿನಲ್ಲಿ ಮುಳುಗಿ ಮೃತಪಟ್ಟವರು. ಇನ್ನು ಜೊತೆಯಲ್ಲಿ ಹೋಗಿದ್ದ ವಿಜಯಪುರದ ಮಹದೇವ್ ಅವರು ಚಿಂತಾಜನಕ ಸ್ಥಿತಿಯನ್ನು ತಲುಪಿದ್ದು ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.[ಉಡುಪಿ : ಈಜಲು ಹೋಗಿ ಇಬ್ಬರು ಯುವಕರು ನದಿ ಪಾಲು]

shivana samudra

ಶ್ರೀನಿವಾಸ್, ದೇವರಾಜು ಮತ್ತು ಮಹದೇವ್ ಮೂವರು ಬೆಂಗಳೂರಿನ ಯಲಹಂಕದಲ್ಲಿರುವ ಬಿ.ಎಸ್.ಎಸ್ ಕಾಲೇಜಿನ ವಿದ್ಯಾರ್ಥಿಗಳು ಇವರು ಶಿವನಸಮುದ್ರಕ್ಕೆ ಪ್ರವಾಸಕ್ಕೆಂದು ತೆರಳಿದ್ದರು. ಈ ವೇಳೆ ಕಾವೇರಿ ನದಿಯಲ್ಲಿ ಈಜಲು ಇಳಿದಿದ್ದಾರೆ.ಆದರೆ ನೀರಿನಲ್ಲಿ ಸೆಳೆತವಿದ್ದು, ನೀರಿನಲ್ಲಿ ಕೊಚ್ಚಿಹೋಗಿದ್ದಾರೆ. ನೀರಿನಲ್ಲಿ ಶ್ರೀನಿವಾಸ್ ಹಾಗೂ ದೇವರಾಜು ನೀರಿನಲ್ಲಿ ಮುಳುಗಿ ಮೃತರಾಗಿದ್ದು, ಮಹದೇವ್ ಅವರು ಚಿಂತಾಜನಕ ಸ್ಥಿತಿಯನ್ನು ತಲುಪಿದ್ದು, ಕೊಳ್ಳೇಗಾಲದ ಜನನಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಇನ್ನು ಈ ಸಂಬಂಧ ಕೊಳ್ಳೇಗಾಲ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+