V Somanna Challenge: ಉಪಯೋಗಕ್ಕೆ ಬಾರದ ಮಾತುಗಳು ಬೇಡ, ತಾಕತ್‌ ಇದ್ರೆ ಕಾಂಗ್ರೆಸ್ ಲಿಂಗಾಯತ ಸಿಎಂ ಘೋಷಿಸಲಿ: ಸೋಮಣ್ಣ ಸವಾಲ್

ಚಾಮರಾಜನಗರ, ಏಪ್ರಿಲ್‌, 20: ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಆಡಳಿತ ಮತ್ತು ವಿರೋಧ ಪಕ್ಷಗಳ ನಾಯಕರ ಕಚ್ಚಾಟವಂತೂ ಜಾಸ್ತಿ ಆಗುತ್ತಲೇ ಇದೆ. ಹಾಗೆಯೆ ವರುಣ ಮತ್ತು ಚಾಮರಾಜನಗರದಲ್ಲಿ ಕಣಕ್ಕಿಳಿದಿರುವ ವಿ.ಸೋಮಣ್ಣನ ಅವರು ಕೂಡ ಇಷ್ಟೆಲ್ಲಾ ಮಾತನಾಡುವ ಕಾಂಗ್ರೆಸ್ ವೀರಶೈವ ಲಿಂಗಾಯತರೇ ಸಿಎಂ ಎಂದು ಘೋಷಿಸಲಿ ಎಂದು ಸವಾಲ್ ಹಾಕಿದರು.

ಚಾಮರಾಜನಗರದ ವಿವಿಧ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸುವ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಲಿಂಗಾಯತ ವಿರೋಧಿಗಳು ಎಂದು ಕಾಂಗ್ರೆಸ್ ಹೇಳುತ್ತಿದೆ. ಆದರೆ, ವೀರೇಂದ್ರ ಪಾಟೀಲರನ್ನು ತೆಗೆದಿದ್ದು ಯಾರು? ರಾಜಶೇಖರ್‌ ಮೂರ್ತಿ ಅವರನ್ನು ಓಡಿಸಿದ್ದು ಯಾರು? ನಿಜಲಿಂಗಪ್ಪ ಅವರನ್ನು ದೇಶಬಿಟ್ಟು ಕಳುಹಿಸಿದ್ದು ಯಾರು? ಎಂದು ಪ್ರಶ್ನಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

V Somanna

ಇನ್ನು ಜಗದೀಶ್ ಶೆಟ್ಟರ್, ಸವದಿ ಏನು ಹೇಳುತ್ತಾ ಇದಾರೆ, ಲಿಂಗಾಯತ ಸಿಎಂ ಮಾಡಲಿ, ಇವೆಲ್ಲಾ ಕಣ್ಣೊರೆಸುವ ತಂತ್ರ ಆಗಿವೆ. ಲಿಂಗಾಯತರು ದಡ್ಡರಲ್ಲ, ಅವರನ್ನು ಮತ ಬ್ಯಾಂಕ್‌ ಆಗಿ ಇಟ್ಟುಕೊಂಡಿದೆ. ಆದರೆ ಅವರಿಗೆ ಕಾಂಗ್ರೆಸ್ ಏನು ಮಾಡಿಲ್ಲ. ಜನರು ಬದಲಾವಣೆ ಬಯಸುತ್ತಿದ್ದಾರೆ ಎಂದರು.

ಲಿಂಗಾಯತರನ್ನು ಬ್ಲಾಕ್ ಮೇಲ್ ಮಾಡಿ ಏನೋ ಮಾಡುತ್ತೇವೆ ಎಂದು ಆಸೆ ಇಟ್ಟುಕೊಂಡಿದ್ದರೇ ಅವರಿಗೇ ನಿರಾಸೆ ಆಗಲಿದೆ. ಅವರಲ್ಲಿ ಅಷ್ಟು ದೊಡ್ಡ ವಿಷನ್ ಇದ್ದರೇ ಲಿಂಗಾಯತರನ್ನು ಸಿಎಂ ಮಾಡುತ್ತೇವೆ ಎಂದು ಹೇಳಲಿ. ಯೂಸ್ ಅಂಡ್ ಥ್ರೋ ಮಾತುಗಳು ಬೇಡ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಘಳಿಗೆಗೊಂದು ದಾಳ ಹಾಕುತ್ತಿದ್ದಾರೆ

ಮೋದಿ, ಯಡಿಯೂರಪ್ಪ, ಬೊಮ್ಮಾಯಿ ಉತ್ತಮ ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ. ಅದಕ್ಕೆ ಕಾಂಗ್ರೆಸ್‌ನವರು ಒಂದೊಂದು ಗಂಟೆಗೆ ಒಂದು, ಘಳಿಗೆಗೊಂದು ದಾಳ ಹಾಕುತ್ತಿದ್ದಾರೆ. ಆದರೆ ಅವೆಲ್ಲಾ ಏನು ಆಗಲ್ಲ ಎಂದರು. ಇನ್ನು ವೀರಶೈವ ಲಿಂಗಾಯತ ಸಮುದಾಯವನ್ನು ಮೂಲೆಗುಂಪು ಮಾಡುವ ವಿಚಾರ ಇಲ. ಆ ರೀತಿ ಮಾಡುವುದು ಕಾಂಗ್ರೆಸ್ ಮಾತ್ರ. ಈ ಬಗ್ಗೆ ಎಲ್ಲವನ್ನೂ ನಿನ್ನೆ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಲಾಗಿದೆ ಎಂದು ತಿಳಿಸಿದರು.

ಬಿ.ಎಲ್. ಸಂತೋಷ್ ಓರ್ವ ಸಕ್ರಿಯ ಕಾರ್ಯಕರ್ತ, 24*7 ಕೆಲಸಗಾರ, ಅವರಿಗೆ ನಾಯಕರನ್ನು ತುಳಿಯುವ ಹುಚ್ಚಿಲ್ಲ. ಕಾಂಗ್ರೆಸ್‌ನವರಿಗೆ ಮಾತನಾಡಲು ಏನು ಇಲ್ಲ. ಅದಕ್ಕೆ ಮೊಸಳೆ ಕಣ್ಣೀರು ಸುರಿಸುತ್ತಿದೆ. ಮೋದಿ, ಅಮಿತ್ ಶಾ ವಿರುದ್ಧ ಏನು ಹೇಳಲಾಗದಿದ್ದರಿಂದ ಕಾಂಗ್ರೆಸ್ ಮೊಸಳೆ ಕಣ್ಣೀರು ಸುರಿಸುತ್ತಿದೆ. ಲಿಂಗಾಯತರಿಗೆ ಕಾಂಗ್ರೆಸ್ ಎಷ್ಟು ಚುರುಮುರಿ ಕೊಟ್ಟಿದೆ ಎಂದು ಸ್ವಾಭಿಮಾನಿ ಲಿಂಗಾಯತರಿಗೆ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಜಗದೀಶ್ ಶೆಟ್ಟರ್ ಇಷ್ಟೊಂದು ವೀಕ್ ಅಂತಾ ಗೊತ್ತಿರಲಿಲ್ಲ. ಅವರು ನನಗೆ ಬೇಕಾದ ಆತ್ಮೀಯರು. ಕರೆದು ಅವರಿಗೆ ವರಿಷ್ಠರು ವಿನಂತಿಸಿಕೊಂಡರು. ಪತ್ನಿಗೆ ಟಿಕೆಟ್‌, ರಾಜ್ಯಸಭಾಗೆ ಕಳುಹಿಸುತ್ತೇವೆ ಎಂದಿದ್ದರು. ಅವರನ್ನು ಮಂತ್ರಿ, ಸ್ಪೀಕರ್, ಸಿಎಂ ಮಾಡಿದ್ದೆವು. ಆದರೆ, ಯಾರದ್ದೋ ಮಾತಿಗೆ ಈ ನಿಲುವು ತೆಗೆದುಕೊಂಡಿದ್ದಾರೆ ಎಂದರು.

ಬಹಳ ಬುದ್ಧಿವಂತ ಶೆಟ್ಟರ್ ವೀಕ್ ಮೈಂಡ್ ಆಗಿದ್ದಾರೆ. 6 ತಿಂಗಳು ಅವರೂ ಕಾಂಗ್ರೆಸ್‌ನಲ್ಲಿ ಇರಲು ಸಾಧ್ಯವಿಲ್ಲ. ಅಲ್ಲಿ ಅಷ್ಟು ಉಸಿರು ಕಟ್ಟುವ ವಾತಾವರಣ ಇದೆ‌. ಒಂದು ಕಡೆ ಸಿದ್ದರಾಮಯ್ಯ, ಇನ್ನೊಂದು ಕಡೆ ಡಿ.ಕೆ.ಶಿವಕುಮಾರ್‌, ಮತ್ತೊಂದು ಕಡೆ ಖರ್ಗೆ ಎಂದು ಹೇಳುವ ಮೂಲಕ ಲೇವಡಿ ಮಾಡಿದರು.

ರಾಜಕಾರಣ ಶಾಶ್ವತವಲ್ಲ, ಆದ್ದರಿಂದ ಜಗದೀಶ್ ಶೆಟ್ಟರ್ ಅವರು ಬಿಜೆಪಿ ವಿರುದ್ಧ ಮಾತನಾಡುವುದನ್ನು ನಿಲ್ಲಿಸಬೇಕು. ದಯವಿಟ್ಟು ವಿನಂತಿ ಮಾಡುವುದೇನೆಂದರೆ ಬಿಜೆಪಿ ಬಗ್ಗೆ, ಬಿಜೆಪಿ ನಡವಳಿಕೆ ಬಗ್ಗೆ ಅವರು ಚಿಂತಿಸಬೇಕು ಮನವಿ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+