Get Updates
Get notified of breaking news, exclusive insights, and must-see stories!

ಕೆಲವೇ ದಿನಗಳಲ್ಲಿ ಉಪಸಭಾಪತಿ ಹುದ್ದೆ ಅಲಂಕರಿಸಲಿರುವ ಸಿ.ಪುಟ್ಟರಂಗಶೆಟ್ಟಿ ಅವರ ರಾಜಕೀಯ ಹಾದಿ, ಇಲ್ಲಿದೆ ವಿವರ

ಚಾಮರಾಜನಗರ, ಜೂನ್‌, 14: ಕರ್ನಾಟಕ ರಾಜ್ಯದ ಉಪ್ಪಾರ ಸಮಾಜದ ಏಕೈಕ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಉಪಸಭಾಪತಿ ಆಗಲು ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಹಾಗೆಯೇ ಅವರು ನಡೆದು ಬಂದ ರಾಜಕೀಯ ಹಾದಿಯ ಹೇಗಿದೆ ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ.

ಉಪ್ಪಾರ ಸಮುದಾಯದಲ್ಲಿ ಈಗಲೂ ಗ್ರಾಮದ ಯಜಮಾನ, ಗಡಿ ಯಜಮಾನ ಎಂಬ ಪದ್ಧತಿ ಇದ್ದು, ಪುಟ್ಟರಂಗಶೆಟ್ಟಿ ದಶಕಗಳಿಂದ ಗಡಿ ಯಜಮಾನರಾಗಿದ್ದಾರೆ. 8 -10 ಊರುಗಳ ಸಮುದಾಯಕ್ಕೆ ಯಜಮಾನ ಆಗುವುದನ್ನು ಗಡಿ ಯಜಮಾನರು ಎಂದು ಕರೆಯಲಾಗುತ್ತದೆ.
ಹಾಗೆಯೇ ಚಾಮರಾನಗರ ಜಿಲ್ಲೆಯ ಯಳಂದೂರು ತಾಲೂಕಿನ ಉಪ್ಪಿನಮೋಳೆ ಗ್ರಾಮದ ಚಾಮಶೆಟ್ಟಿ ಮತ್ತು ನಂಜಮ್ಮ ದಂಪತಿಗಳ 10 ಜನ ಮಕ್ಕಳಲ್ಲಿ ಸಿ.ಪುಟ್ಟರಂಗಶೆಟ್ಟಿ ಆರನೇಯವರಾಗಿ 1954 ನವೆಂಬರ್ 30ರಂದು ಜನಿಸಿದರು.

Inspiring Journey of C.Puttarangashetty Who Is Nominated as the deputy speaker of Vidhana Soudha

ಇನ್ನು ಇವರು 1ರಿಂದ 5ನೇ ತರಗತಿವರಗೆ ಸ್ವಗ್ರಾಮದಲ್ಲಿ ಶಿಕ್ಷಣ ಪಡೆದರು. 6 ರಿಂದ 7 ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಯಳಂದೂರಿನ ಜಾಗೀರದಾರ್ ಮುನಿಸಿಪಲ್ ಶಾಲೆಯಲ್ಲಿ 1973ರಲ್ಲಿ ಪೂರ್ಣಗೊಳಿಸಿದರು. ನಂತರ 1975ರಲ್ಲಿ ಕೋಳೆಗಾಲದ ಮಹದೇಶ್ವರ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪೂರ್ಣಗೊಳಿಸಿ, ನಂತರ 1979ರಲ್ಲಿ ಇದೇ ಕಾಲೇಜಿನಲ್ಲಿ ಬಿ.ಎ.ಪದವಿಯನ್ನು ಪೂರ್ಣಗೊಳಿಸಿದ್ದರು.

ಸಿ.ಪುಟ್ಟರಂಗಶೆಟ್ಟರು ತಮ್ಮ ಮನೆಯಲ್ಲಿ ದೂಡ್ಡ ಕುಟುಂಬದಲ್ಲಿ ಶಿಕ್ಷಣ ಪಡೆದ ಏಕೈಕ ಸದ್ಯಸರಾಗಿದ್ದಾರೆ. ಅಲ್ಲದೆ ಬಳಿಕ ದಾವಣಗೆರೆಯಲ್ಲಿ ಸರ್ಕಾರದ ಕೆಎಸ್‌ಸಿಸಿ ನಿಗಮದಲ್ಲಿ ಗುಮಾಸ್ತರಾಗಿ ಒಂದೂವರೆ ವರ್ಷ ಕೆಲಸ ಮಾಡಿದ ಅವರು ಕಾರಣಾಂತರಗಳಿಂದ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ ತಮ್ಮ ಸ್ವಂತ ಊರಿಗೆ ಬಂದು ಕೃಷಿಯನ್ನು ಅವಲಂಬಿಸಿದ್ದರು.

ರಾಜಕೀಯಕ್ಕೆ ಪಾದಾರ್ಪಣೆ

ನಂತರ ಅವರು 1982ರಲ್ಲಿ ನ್ಯಾಯಬೆಲೆ ಅಂಗಡಿಯನ್ನು 7ವರ್ಷಗಳ ಕಾಲ ನಡೆಸಿಕೊಂಡು ಬಂದರು. ಈನಡುವೆಯೇ ರಾಜಕೀಯ ಪ್ರವೇಶ ಮಾಡಿ ಪ್ರಥಮ ಬಾರಿಗೆ ಗೌಡಳ್ಳಿ ಮಂಡಲ ಪಂಚಾಯಿತಿ ಸದಸ್ಯರಾಗಿ ಹಾಗೂ ಪ್ರದಾನರಾಗಿ ಆಯ್ಕೆಯಾಗಿ ಸೇವೆ ಸಲ್ಲಿಸಿದರು.
ಇದೆ ವೇಳೆ ಯಳಂದೂರು ಕ್ಷೇತ್ರದಿಂದ ಜಿಲ್ಲಾ ಪಂಚಾಯತಿ ಸದಸ್ಯರಾಗಿ, ಟಿಎಪಿಸಿಎಂಎಸ್ ನಿರ್ದೆಶಕರಾಗಿ ಹಾಗೂ ಎರಡು ಬಾರಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಹುದ್ದೆಗಳ ವಿವರ

ಬಳಿಕ ಚಾಮರಾಜನಗರ ಜಿಲ್ಲಾ ಕೇಂದ್ರದತ್ತ ಗಮನಹರಿಸಿ, ಎಪಿಎಂಸಿ ಸದಸ್ಯರಾಗಿ 5 ವರ್ಷ ಸೇವೆ ಸಲ್ಲಿಸಿದ್ದಾರೆ. ಎರಡು ಬಾರಿ ಜಿಲ್ಲಾ ಪಂಚಾಯತಿ ಸದಸ್ಯರಾಗಿ, ಚಾಮರಾಜನಗರದ ಜಿ.ಪಂ.ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 2008 ಮತ್ತು 2013, 2018, 2023ರಲ್ಲಿ ಸತತ ನಾಲ್ಕನೇ ಬಾರಿ ಚಾಮರಾಜನಗರ ವಿಧಾನ ಸಭಾ ಕ್ಷೇತ್ರದಿಂದ ಶಾಸಕರಾಗಿ ಚುನಾಯಿತರಾಗಿದ್ದಾರೆ.

1973 ರಲ್ಲಿ ಕಾಂಗ್ರೆಸ್‍ಗೆ ಸೇರಿದ ಸಿ.ಪುಟ್ಟರಂಗಶೆಟ್ಟಿ ಅವರು ಕೊಳ್ಳೇಗಾಲ ಮಾಜಿ ಶಾಸಕ ದಿವಂಗತ ಸಿದ್ದಮಾದಯ್ಯನವರ ಶಿಷ್ಯರಾಗಿ ಅವರ ಸಹಕಾರದಿಂದ ಮೊದಲಿಗೆ ಮೈಸೂರು ಜಿಲ್ಲೆಯ ಯಳಂದೂರಿನ ತಾಲೂಕು ಮಟ್ಟದ ಆಶ್ರಯ ಸಮಿತಿ ಸದಸ್ಯರಾಗಿ ನೇಮಕ ಆದರು. ನಂತರ ಜಿಲ್ಲಾ ಕಾಂಗ್ರೆಸ್ ಸೇವಾದಳದ ಕಾರ್ಯದರ್ಶಿಯಾಗಿ ನೇಮಕಕೊಂಡರು.

ಅಲ್ಲದೆ ಮೈಸೂರು ಜಿಲ್ಲಾ ಕಾಂಗ್ರೆಸ್‍ನ ಹಿಂದುಳಿದ ವರ್ಗದ ಅಧ್ಯಕ್ಷರಾಗಿ, ಚಾಮರಾಜನಗರ ಜಿಲ್ಲಾ ಕಾಂಗ್ರೆಸ್‍ನ ಪ್ರಧಾನ ಕಾರ್ಯದರ್ಶಿಯಾಗಿ, ಯಳಂದೂರು ಬ್ಲಾಕ್ ಕಾಂಗ್ರೆಸ್‍ನ ಅಧ್ಯಕ್ಷರಾಗಿ, ಕೆಪಿಸಿಸಿ ಸದಸ್ಯರಾಗಿ ಹಾಗೂ ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

ಅಷ್ಟೇ ಅಲ್ಲದೆ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಮುಖ್ಯಮಂತ್ರಿ ಸಂಸದೀಯ ಕಾರ್ಯದರ್ಶಿ ಹಾಗೂ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಮತ್ತು ಕರ್ನಾಟಕ ರಾಜ್ಯ ಉಪ್ಪಾರ ಸಂಘದ ಅಧ್ಯಕ್ಷರಾಗಿ, ಚಾಮರಾಜನಗರ ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷರಾಗಿ, ಮೈಸೂರು, ಚಾಮರಾಜನಗರದ ಉಪ್ಪಾರ ವಿದ್ಯಾರ್ಥಿನಿಲಯಗಳ ಹೋರಾಟ ಸಮಿತಿಯ ಅಧ್ಯಕ್ಷರಾಗಿ, ಯಳಂದೂರು ತಾಲೂಕಿನ ಉಪ್ಪಾರ ಸಮಾಜದ ಗಡಿ ಯಜಮಾನರಾಗಿ ಈಗಲೂ ಸೇವೆ ಸಲ್ಲಿಸಿದ್ದಾರೆ.

ಇನ್ನು ಇವರ ಪತ್ನಿ ವೆಂಕಟಮ್ಮ ಆಗಿದ್ದು, ಇಬ್ಬರು ಗಂಡು, ಇಬ್ಬರು ಹೆಣ್ಣು ಹೆಣ್ಣು ಮಕ್ಕಳನ್ನು ಹೊಂದಿದ್ದಾರೆ. ಹಾಗೆಯೇ ಇವರು 13 ಹೆಕ್ಟೇರ್‌ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡಿದ್ದಾರೆ. ಜೊತೆಗೆ ಕರಿಕಲ್ಲು ಉದ್ಯಮಿಯೂ ಆಗಿದ್ದರು. ಕೃಷಿ ಅವಲಂಬಿತ ಜೊತೆಗೆ ತೋಟಗಾರಿಕೆಯಲ್ಲೂ ತೊಡಗಿಸಿಕೊಂಡು ಕೂಲಿ ಕಾರ್ಮಿಕರನ್ನು ನಂಬಿಕೊಳ್ಳದೆ ಸ್ವತ: ಇಂದಿಗೂ ಕೃಷಿ ಮಾಡುತ್ತಿದ್ದಾರೆ. ಕೃಷಿ ಮತ್ತು ತೋಟಗಾರಿಕೆಗೆ ಸೀಮಿತವಾಗದೆ ಹೈನುಗಾರಿಕೆಯಲ್ಲೂ ತೊಡಗಿಸಿಕೊಂಡಿದ್ದಾರೆ.

ಪ್ರಸ್ತುತ ಹಸುಗಳನ್ನು ಹೊಂದಿದ ಇವರು ಡೈರಿಗೆ ಹಾಲು ಹಾಕುವ ವೃತ್ತಿಯನ್ನು ಮಾಡುತ್ತಿದ್ದಾರೆ. ಇದೀಗ ಚಾಮರಾಜನಗರ ವಿಧಾನಸಭಾ ಸದಸ್ಯರಾಗಿ ಜನಗಳ ಕಷ್ಟಸುಖಗಳಿಗೆ ಸ್ಪಂದಿಸುತ್ತಾ ಬಂದಿದ್ದಾರೆ. ಅಲ್ಲದೆ ಸಂಪುಟ ದರ್ಜೆಯ ಸಂಸದೀಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ಬಳಿಕ 2018ರ ಮೈತ್ರಿ ಸರ್ಕಾರದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾಗಿ, ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಇನ್ನು 2023 ರಲ್ಲಿ ಸತತ ನಾಲ್ಕನೇ ಬಾರಿಗೆ ಗೆದ್ದಿದ್ದು, ಕೆಲವೇ ದಿನಗಳಲ್ಲಿ ಉಪ ಸಭಾಪತಿ ಹುದ್ದೆಯನ್ನು ಸ್ವೀಕಾರ ಮಾಡಲಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+