ಈಶು ಅಂಕಲ್, ಇಬ್ರಾಹಿಂ ಅಂಕಲ್ ಅವರ ಈ ಹೇಳಿಕೆ ಮರೆಯೋ ಹಾಗಿಲ್ಲ!

Posted By:
Subscribe to Oneindia Kannada

ಚಾಮರಾಜ ನಗರ, ಏಪ್ರಿಲ್ 13: ಯಾವಾಗಲೂ ತಮಾಷೆ ಧಾಟಿಯ ಟೀಕೆಗಳಿಗೆ ಹಿರಿಯ ರಾಜಕಾರಣಿಗಳಾದ ಈಶ್ವರಪ್ಪ ಹಾಗೂ ಸಿ.ಎಂ. ಇಬ್ರಾಹಿಂ ಹೆಸರುವಾಸಿ. ಗುಂಡ್ಲು ಪೇಟೆ ಹಾಗೂ ನಂಜನಗೂಡು ಉಪ ಚುನಾವಣೆಗಳಲ್ಲೂ ಇದೇ ರೀತಿಯ ಹೇಳಿಕೆಗಳನ್ನು ನೀಡುವ ಮೂಲಕ ಮತದಾರರಿಗೆ ಮನರಂಜನೆ ಒದಗಿಸಿದ್ದು ಸುಳ್ಳಲ್ಲ.

ಒಮ್ಮೆ ಅವರ ಹೇಳಿಕೆಗಳನ್ನು ರಾಜಕೀಯದಿಂದ ಬೇರ್ಪಡಿಸಿ ನೋಡಿದರೆ, ಈಶ್ವರಪ್ಪ ಹಾಗೂ ಇಬ್ರಾಹಿಂ ಅವರ ಹಾಸ್ಯ ಪ್ರಜ್ಞೆ ಅರ್ಥವಾಗುತ್ತದೆ.[ಕಾಮಿಡಿ ಕಣ್ರಿ; ರಾಹುಲ್ ಬಂದಿಲ್ವಂತೆ, ಅದ್ಕೆ ಕೈಗೆ ಜೈ ಅಂದ್ರಂತೆ]

ಹಾಗೆಂದ ಮಾತ್ರಕ್ಕೇ ಅವರ ಆಕ್ಷೇಪಾರ್ಹ ನುಡಿಗಳಿಗೆ ನಮ್ಮ ಒಪ್ಪಿಗೆಯಿದೆ ಎಂದರ್ಥವಲ್ಲ. ಅವರ ಮಾತುಗಳು ಬೇಸಿಗೆಯ ಬಿಸಿಲನ್ನೂ ಲೆಕ್ಕಿಸದೇ ಬಹಿರಂಗ ಸಭೆಗಳಿಗೆ ಬರುತ್ತಿದ್ದ ಅಪಾರ ಜನಸ್ತೋಮಕ್ಕೆ ಖುಷಿ ಕೊಟ್ಟಿದ್ದಂತೂ ಸುಳ್ಳಲ್ಲ.

Humourous statement by Eeshwarappa, Ibrahim during Gundlupete, Nanjanagudu byelections

ಹೇಳಿಕೆ 1: ಉಪ ಚುನಾವಣೆ ವೇಳೆ ಬಿಜೆಪಿಯ ಕಾರ್ಯತಂತ್ರಗಳ ಬಗ್ಗೆ ಟೀಕೆ ಮಾಡಿದ್ದ ಸಿಎಂ ಸಿದ್ದರಾಮಯ್ಯ, ಯಡಿಯೂರಪ್ಪ, ಈಶ್ವರಪ್ಪ ಮಧ್ಯೆ ಸರಿಯಿಲ್ಲ. ಅವರ ಸಾರಥ್ಯದಲ್ಲಿ ಬಿಜೆಪಿ ಮತ ಯಾಚನೆಗೆ ತೊಡಗಿದೆ. ಅವರ ನಡುವೆ ಸಮನ್ವಯತೆ ಇಲ್ಲದ ಕಾರಣ ಬಿಜೆಪಿಗೆ ಯಶಸ್ಸು ಸಿಗಲ್ಲ ಎಂದಿದ್ದರು.

ಇದಕ್ಕೆ ಉತ್ತರ ನೀಡಿದ್ದ ಈಶ್ವರಪ್ಪ ಅವರು, ಸಿದ್ದು ಒಬ್ಬ ತಲಾಖ್ ರಾಜಕಾರಣಿ ಎಂದು ಲೇವಡಿ ಮಾಡಿದರು. ತಲಾಖ್ ರಾಜಕಾರಣಿ ಎಂಬ ಪದವನ್ನು ಬಳಸಿದ್ದು ಇದೇ ಮೊದಲು ಇರಬೇಕು. ಸಿದ್ದರಾಮಯ್ಯ ಅವರನ್ನು ಹೀಗೆ ಸಂಬೋಧಿಸಿದ್ದ ಅವರು, ''ಅಧಿಕಾರಕ್ಕಾಗಿ ಜೆಡಿಎಸ್ ತೊರೆದು ಕಾಂಗ್ರೆಸ್ ಬಂದ ಸಿದ್ದರಾಮಯ್ಯ ನಾನು ಬಿಜೆಪಿ ಬಗ್ಗೆ ಹೊಂದಿರುವ ನಿಷ್ಠೆಯ ಬಗ್ಗೆ ಸರ್ಟಿಫಿಕೇಟ್ ಕೊಡಬೇಕಿಲ್ಲ'' ಎಂದು ಗುಡುಗಿದ್ದರು.[ಪ್ರತಾಪ್ ಹಾಗೂ ಇತರ ಬಿಜೆಪಿ ನಾಯಕರ ಹೇಳಿಕೆ ಪಕ್ಷಕ್ಕೆ ಮುಳುವಾಯ್ತೆ?]

ಹೇಳಿಕೆ 2: ಚುನಾವಣಾ ಪ್ರಚಾರ ಮುಗಿದು ನೀತಿ ಸಂಹಿತೆ ಜಾರಿಯಲ್ಲಿದ್ದಾಗ, ಯಡಿಯೂರಪ್ಪ ವಿವಾದಕ್ಕೆ ಸಿಲುಕಿಕೊಂಡರು. ಆತ್ಮಹತ್ಯೆ ಮಾಡಿಕೊಂಡಿದ್ದ ಮೃತ ರೈತನ ಮನೆಗೆ ತೆರಳಿದ್ದ ಅವರು, ಅಲ್ಲಿ ಆ ಕುಟುಂಬಕ್ಕೆ ಹಣ ಹಂಚಿದ್ದಾರೆಂಬ ಆರೋಪ ಅವರ ಮೇಲೆ ಬಂತು.

ಈ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಈಶ್ವರಪ್ಪ ಹೇಳಿದ್ದೇನು ಗೊತ್ತೆ? ''ಅರೆ, ಚುನಾವಣೆ ನಡೆಯೋ ಟೈಮಲ್ಲೇ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅದಕ್ಕೆ ಹಣ ಕೊಟ್ಟಿದಾರೆ. ಚುನಾವಣೆ ನಂತರ ಆತ್ಮಹತ್ಯೆ ಮಾಡ್ಕೊಂಡಿದ್ರೆ ಅವಾಗ್ಲೇ ಕೊಡ್ತಿದ್ವಿ'' ಎಂದಿದ್ದರು. ಇವರ ಈ ಹೇಳಿಕೆ ಕೇಳಿ ಬಿಜೆಪಿಯವರಿಗೆ ಅಣ್ಣಾವ್ರ ಅಭಿನಯದ ಸಂಪತ್ತಿಗೆ ಸವಾಲ್ ಚಿತ್ರದ ''ನಗುವುದೋ ಅಳುವುದೋ ನೀವೇ ಹೇಳಿ'' ಹಾಡು ನೆನಪಾಗಿರಬಹುದು!

ಇನ್ನು, ಇಬ್ರಾಹಿಂ ಅವರದ್ದು ಮತ್ತೊಂದು ಧಾಟಿಯ ಹಾಸ್ಯ. ಇತ್ತೀಚೆಗೆ ಬಿಜೆಪಿ ಸೇರಿದ ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರ ಬಗ್ಗೆ ಟೀಕಾಸ್ತ್ರ ಪ್ರಯೋಗಿಸಿದ್ದ ಅವರು, ''84ರ ವಯಸ್ಸಿನಲ್ಲಿ ಕೃಷ್ಣ ಮದುವೆ ಆಗಲು ಹೊರಟಿದ್ದಾರೆ'' ಎಂದು ವ್ಯಂಗ್ಯವಾಡಿದ್ದರು. ''ಮನೆ ಯಜಮಾನ ಎನಿಸಿಕೊಂಡಾತ ಚಿಕ್ಕವರಿಗೆ ಮದುವೆ ಮಾಡಬೇಕು. ಅಂಥಾದ್ದರಲ್ಲಿ ತನಗೇ ಮದುವೆ ಮಾಡಿ ಎಂದರೆ ಹೇಗೆ'' ಎಂದೂ ಟೀಕಿಸಿದ್ದರು.
ಅವರ ಮಾತುಗಳು ಆಕ್ಷೇಪಾರ್ಹವಾಗಿದ್ದರೂ, ಬಹಿರಂಗ ಸಭೆಯಲ್ಲಿ ಅವರು ಹೀಗೆ ಹೇಳಿದ್ದು ಅಲ್ಲಿ ಜಮಾಯಿಸಿದ್ದ ಮತದಾರರಲ್ಲಿ ನಗೆ ಅಲೆ ಉಕ್ಕಿಸಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Some of the statements of BJP leader Eshwarappa and Congress leader C.M. Ibrahim broght the smiles on the faces of people during Gundlupere and Nanjangudu election campaigns. Here we listed some among them.
Please Wait while comments are loading...