Get Updates
Get notified of breaking news, exclusive insights, and must-see stories!

ಹನೂರು: ಹೃದಯಾಘಾತದಿಂದ ಪಂಜಾಬ್ ಗಡಿಯಲ್ಲಿದ್ದ ಯೋಧ ಸಾವು

ಚಾಮರಾಜನಗರ, ಆಗಸ್ಟ್‌, 23: ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಯೋಧರ ಗ್ರಾಮ ಎಂದೇ ಪ್ರಸಿದ್ಧ ಆಗಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಳ್ವಾಡಿ ಗ್ರಾಮದ ಯೋಧ ಹೃದಯಘಾತದಿಂದ ಕರ್ತವ್ಯದಲ್ಲಿರುವಾಗಲೇ ಮೃತಪಟ್ಟಿರುವ ಘಟನೆ ಇಂದು (ಆಗಸ್ಟ್‌ 22) ನಡೆದಿದೆ. ಹಾಗಾದರೆ ಇವರ ಪಾರ್ಥೀವ ಶರೀರವನ್ನು ಸ್ವಗ್ರಾಮಕ್ಕೆ ಯಾವಗ ತರಲಾಗುತ್ತದೆ ಎಂದು ಇಲ್ಲಿದೆ ಗಮನಿಸಿ.

ಸುಳ್ವಾಡಿ ಗ್ರಾಮದ ಅಂತೋನಿ ಸ್ವಾಮಿ ಮತ್ತು ಅಂತೋನಿ ಆಮ್ಮಾಳ ಅವರ ದ್ವಿತೀಯ ಪುತ್ರ ಜ್ಞಾನ ಪ್ರಕಾಶ್ (34) ಮೃತ ಯೋಧ‌. ಇವರು ಕಳೆದ 13 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪ್ರಸ್ತುತ ಪಂಜಾಬ್ ಗಡಿಯಲ್ಲಿ ಕರ್ತವ್ಯದಲ್ಲಿರುವಾಗಲೇ ಗುರುವಾರ (ಆಗಸ್ಟ್‌ 22) ಹೃದಯಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

Hanur Soldier passed away due to heart attack on duty at punjab border

ಇನ್ನು ಪಾರ್ಥಿವ ಶರೀರವನ್ನು ಪಂಜಾಬ್ ರಾಜ್ಯದಿಂದ ಸ್ವಗ್ರಾಮಕ್ಕೆ ಶನಿವಾರ ತರಲಿದ್ದಾರೆ ಎಂದು ತಿಳಿದುಬಂದಿದೆ. ಮೃತ ಯೋಧ ಜ್ಞಾನ ಪ್ರಕಾಶ್ ಅವರು ತಂದೆ, ತಾಯಿ, ಅಣ್ಣ, ತಂಗಿ ಹೆಂಡತಿ, 7 ವರ್ಷದ ಮಗನನ್ನು ಸೇರಿ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ನಟ ನಿರ್ಮಲ್ ಬೆನ್ನಿ ನಿಧನ: ಮಲಯಾಳಂ ಖ್ಯಾತ ನಟ ನಿರ್ಮಲ್ ಬೆನ್ನಿ ಅವರು ಇಂದು (ಆಗಸ್ಟ್ 23) ಹೃದಯಾಘಾತದಿಂದ ನಿಧನರಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮುಂಜಾನೆ ಅವರಿಗೆ ಹೃದಯಾಘಾತ ಉಂಟಾಗಿದೆ ಎನ್ನಲಾಗಿದ್ದು, ಇದೀಗ ಅವರ ನಿಧನಕ್ಕೆ ಸಿನಿತಾರೆಯರು, ರಾಜಕೀಯ ನಾಯಕರು ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

2012ರಲ್ಲಿ ನಿರ್ಮಲ್ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು, ಅವರು ಮಲಯಾಳಂನಲ್ಲಿ 12 ವರ್ಷಗಳಲ್ಲಿ 5 ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಅವರ ನಟನೆಯ ಮೊದಲ ಸಿನಿಮಾ 'ನವಗತರ್ಕ್ ಸ್ವಾಗತಂ' ಆಗಿದೆ. ಲಿಜೋ ಜೋಸ್ ಪೆಲ್ಲಿಸೆರಿ ನಿರ್ದೇಶನದ 'ಅಮೆನ್' ಸಿನಿಮಾದಲ್ಲಿ ಕೊಚ್ಚನ್ ಹೆಸರಿನ ಪಾತ್ರ ಮಾಡಿದ್ದು, ಇದರಲ್ಲಿ ಅವರು ಮಾಡಿದ ಪಾತ್ರಕ್ಕೆ ಅಭಿಮಾನಿಗಳು ಫಿಧಾ ಆಗಿದ್ದರು.

ನಿರ್ಮಲ್ ಅವರು ಕಲಾವಿದನಾಗಿ ನಟನೆ ಮಾಡಿದ್ದಕ್ಕಿಂತ ಹೆಚ್ಚು ಯೂಟ್ಯೂಬ್ ವಿಡಿಯೋಗಳ ಮೂಲಕ ಹೆಚ್ಚು ಗಮನ ಸೆಳೆದಿದ್ದರು. ವೇದಿಕೆ ಕಾರ್ಯಕ್ರಮಗಳನ್ನು ಕೂಡ ನೀಡಿದ್ದರು. ಅವರಿಗೆ ಕೇವಲ 37 ವರ್ಷ ವಯಸ್ಸಾಗಿತ್ತು. ನಿರ್ಮಾಪಕ ಸಂಜಯ್ ಪಡಿಯೂರ್ ಅವರು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ. ಅಲ್ಲದೆ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೋರಿಕೊಂಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+