ಕ್ಯಾನ್ಸರ್ ಪೀಡಿತರಿಗೆ ರಾಮಬಾಣ ಹನುಮಫಲ!

By: ಚಾಮರಾಜನಗರ ಪ್ರತಿನಿಧಿ
Subscribe to Oneindia Kannada

ರಾಮಫಲ, ಸೀತಾಫಲಗಳ ಹೆಸರು ಕೇಳಿದವರಿಗೆ ಹನುಮಫಲ ಹೆಸರು ಕೇಳುತ್ತಿದ್ದಂತೆಯೇ ಅಚ್ಚರಿಯಾಗಬಹುದು. ಇದ್ಯಾವುದಪ್ಪಾ ಎಂಬ ಕುತೂಹಲವೂ ಕಾಡಬಹುದು.

ಹನುಮಫಲ ಕೇವಲ ತಿನ್ನಲಷ್ಟೆ ಅಲ್ಲ, ಇದರ ಹಣ್ಣು ಎಲೆ ಎಲ್ಲವೂ ಔಷಧಿಗಳ ಆಗರ ಎಂದರೆ ನಂಬಲೇ ಬೇಕು. ಅಷ್ಟೇ ಅಲ್ಲ ಕ್ಯಾನ್ಸರ್ ರೋಗಕ್ಕೂ ರಾಮಬಾಣವಂತೆ. ಇಂತಹವೊಂದು ಗಿಡವನ್ನು ನೋಡಬೇಕಾದರೆ ಚಾಮರಾಜನಗರ ಜಿಲ್ಲೆಯ ಸಂತೇಮರಹಳ್ಳಿ ಬಳಿ ಹೆಗ್ಗವಾಡಿಪುರ ಗ್ರಾಮದಲ್ಲಿ ವಾಸವಾಗಿರುವ ಪ್ರಗತಿ ಪರ ರೈತ ಮಹೇಶ್‌ಕುಮಾರ್ ಅವರ ಜಮೀನಿಗೆ ತೆರಳಬೇಕು. [ಮಾರಣಾಂತಿಕ ಕ್ಯಾನ್ಸರ್ ಮೆಟ್ಟಿನಿಂತ ಹಿರಿಯಜ್ಜನ ಯಶೋಗಾಥೆ]

Hanuman phala kills cancer cells

ಹನುಮಫಲ ಕ್ಯಾನ್ಸರ್‌ಗೆ ರಾಮಬಾಣ ಎಂದು ತಿಳಿಯುತ್ತಿದ್ದಂತೆಯೇ ಜನ ಇವರ ಬಳಿಗೆ ಮುಗಿಬೀಳುತ್ತಿದ್ದಾರೆ. ಈಗಾಗಲೇ ಇವರ ಜಮೀನಿಗೆ ನಮ್ಮ ರಾಜ್ಯದವರಲ್ಲದೆ, ತಮಿಳುನಾಡು, ಆಂಧ್ರ, ಕೇರಳದಿಂದಲೂ ಬಂದು ಎಲೆ ಮತ್ತು ಹಣ್ಣನ್ನು ತೆಗೆದುಕೊಂಡು ಹೋಗುತ್ತಿದ್ದಾರೆ.

ಇನ್ನು ಮಹೇಶ್‌ಕುಮಾರ್ ಅವರು ಮನೆಯ ಮುಂದೆ ಬೆಳೆಸಿರುವ ಹನುಮ ಫಲ ಹಣ್ಣು ಸರಿ ಸುಮಾರು 3 ಕೆ.ಜಿ.ಯಷ್ಟು ತೂಕವಿದ್ದು, ಗಾತ್ರವೂ ದೊಡ್ಡದಾಗಿದೆ. ಇದನ್ನು ಅವರು ಬೆಳೆಸಿದ್ದು ಕೂಡ ಆಕಸ್ಮಿಕವೇ. [ಕ್ಯಾನ್ಸರ್ ಕಥೆ ಹೇಳಿಸಿದ ಲಾಲ್ ಬಾಗ್ ಹಣ್ಣಿನ ಮೇಳ]

Hanuman phala kills cancer cells

ಕೆಲವು ವರ್ಷಗಳ ಹಿಂದೆ ಮಹೇಶ್‌ಕುಮಾರ್ ಅಮೆರಿಕಾದಲ್ಲಿ ನಡೆದ ಅಂತಾರಾಷ್ಟ್ರೀಯ ಬೀಜ ವಿನಿಮಯ ಕಾರ್ಯಕ್ರಮಕ್ಕೆ ಹೋಗಿದ್ದರು. ಅಲ್ಲಿ ಸಿಕ್ಕ ಬೀಜವನ್ನು ತಂದು ಜತನದಿಂದ ಬಿತ್ತಿ ಮೊಳಕೆಯೊಡೆದು ಗಿಡವಾದ ಬಳಿಕ ಅದನ್ನು ನೆಟ್ಟು ಬೆಳೆಸಿದರು. ಗಿಡವಾಗಿ ಬೆಳೆದು ಹಣ್ಣು ಆದರೂ ಅದು ಯಾವುದು ಎನ್ನುವುದೇ ಗೊತ್ತಿರಲಿಲ್ಲ. ಕೆಲವರು ಅದನ್ನು ನೋಡಿ ಹನುಮಫಲ ಎಂದು ತಿಳಿಸಿದರಂತೆ. ಆಯುರ್ವೇದದಲ್ಲಿ ಹನುಮಫಲದ ಬಗ್ಗೆ ಮಾಹಿತಿ ಹುಡುಕಿದಾಗ ಇದು ಕ್ಯಾನ್ಸರ್‌ಗೆ ರಾಮಬಾಣ ಎಂಬುದು ತಿಳಿದುಬಂತು.
Hanuman phala kills cancer cells

ಯಾವಾಗ ಹನುಮಫಲದ ಮಹತ್ವ ತಿಳಿಯಿತೋ ಎಲೆ ಹಣ್ಣನ್ನು ಹುಡುಕಿಕೊಂಡು ಜನ ಬರತೊಡಗಿದರು. ಹಾಗೆ ಬರುವ ಜನರಿಗೆ ಮಹೇಶ್‌ಕುಮಾರ್ ಎಲೆಗಳನ್ನು ಉಚಿತವಾಗಿ ನೀಡಿ ಕಳುಹಿಸುತ್ತಾರೆ. ಕ್ಯಾನ್ಸರ್ ಪೀಡಿತರು ಇದರ ಎಲೆಗಳನ್ನು ಸೇವಿಸಿದರೆ ನಿಯಂತ್ರಣಕ್ಕೆ ಬರುತ್ತದೆಯಂತೆ. ಅದೇನೆ ಇರಲಿ ಹನುಮ ಫಲ ಮಹತ್ವ ಅರಿತವರಿಗಷ್ಟೇ ಎಂಬುವುದಂತು ಸತ್ಯ. [ನೀವು ಸಿಗರೇಟು ಯಾಕೆ ಬಿಡಬೇಕು, ಇಲ್ಲಿವೆ 10 ಕಾರಣಗಳು]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Hanuman phal or Hamuma fruit health benefits are huge. It is believed that cancer can be cured by eating this rare fruit and also the leaves. Mahesh Kumar in Chamarajanagar has grown the tree in his field.
Please Wait while comments are loading...