ಗುಂಡ್ಲುಪೇಟೆಯಲ್ಲಿ ಗೆದ್ದ ಗೀತಾ ಮಹದೇವಪ್ರಸಾದ್ ಕಿರುಪರಿಚಯ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಚಾಮರಾಜನಗರ, ಏಪ್ರಿಲ್ 13: ಪತಿ ಎಚ್.ಎಸ್.ಮಹದೇವ ಪ್ರಸಾದ್ ಅವರ ನಿಧನದ ನಂತರ ಕಾಂಗ್ರೆಸ್ ನ ಹಿರಿಯರ ಒತ್ತಾಯದ ಮೇರೆಗೆ ಗುಂಡ್ಲುಪೇಟೆಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಡಾ.ಗೀತಾ ಮಹದೇವಪ್ರಸಾದ್ (ಎಂ.ಸಿ.ಮೋಹನ ಕುಮಾರಿ) ಯಾವುದೇ ರಾಜಕೀಯ ಅನುಭವವಿಲ್ಲದಿದ್ದರೂ ಗುಂಡ್ಲೆಪೇಟೆ ಉಪಚುನಾವಣೆಯಲ್ಲಿ ಜಯಗಳಿಸಿದ್ದಾರೆ.

ತಮ್ಮ ಸಮೀಪದ ಪ್ರತಿಸ್ಪರ್ಧಿ ನಿರಂಜನ್ ಕುಮಾರ್ ಅವರನ್ನು12077 ಮತಗಳ ಅಂತರದಿಂದ ಪರಾಜಯಗೊಳಿಸಿರುವ ಗೀತಾ ಮಹದೇವಪ್ರಸಾದ್ ಅವರ ಗೆಲುವಿನಲ್ಲಿ ಸಹಕಾರ ಸಚಿವರಾಗಿದ್ದ ಪತಿ ಮಹದೇವಪ್ರಸಾದ್ ಅವರ ಅಕಾಲಿಕ ಮರಣದ ಅನುಕಂಪದ ಮತಗಳು ಮಹತ್ವದ ಪಾತ್ರ ವಹಿಸಿವೆ.

Gundlupet by election winner Geeta mahadevaprasad's brief profile

ಪ್ರಚಾರದ ಸಮಯದಲ್ಲಿ ನೂರಾರು ಟೀಕೆಗಳಿಗೆ ಗುರಿಯಾದರೂ, ಗುಂಡ್ಲುಪೇಟೆ ಜನರ ವಿಶ್ವಾಸವನ್ನು ಗೆಲ್ಲುವಲ್ಲಿ ಸಫಲರಾದ ಗೀತಾ ಮಹದೇವಪ್ರಸಾದ್ ಅವರ ಕಿರುಪರಿಚಯ ಇಲ್ಲಿದೆ.
* ಫೆಬ್ರವರಿ 4, 1961 ರಲ್ಲಿ ಮೈಸೂರಿನಲ್ಲಿ ಜನನ
* ಮನಶ್ಶಾಸ್ತ್ರದಲ್ಲಿ ಅತೀವ ಆಸಕ್ತಿ ಹೊಂದಿದ್ದ ಗೀತಾ, ಅದೇ ವಿಷಯದಲ್ಲಿ ಎಂ.ಎ.ಪದವಿ ಪಡೆದಿದ್ದಾರೆ.
* ಅಷ್ಟೇ ಅಲ್ಲ, ಪಿಎಚ್ ಡಿ ಪದವಿಗೂ ಗೀತಾ ಭಾಜನರಾಗಿದ್ದಾರೆ.
* ಸಾಹಿತ್ಯ ಕ್ಷೇತ್ರದಲ್ಲೂ ಆಸಕ್ತಿ ಹೊಂದಿರುವ ಗೀತಾ ಹಲವು ಪುಸ್ತಕಗಳನ್ನೂ ಬರೆದಿದ್ದಾರೆ.
* ಗೀತಾ ಮಹಾದೇವಪ್ರಸಾದ್ ಹೊಂದಿರುವ ಚರಾಸ್ತಿಯ ಒಟ್ಟೂ ಮೌಲ್ಯ 1,53,46,980
* ಇದರೊಂದಿಗೆ 25 ಲಕ್ಷ ಮೌಲ್ಯದ ಕೃಷಿ ಭೂಮಿಯನ್ನೂ ಇವರು ಹೊಂದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Most awaited Gundlupet by election result has announced today. Congress candidate minister late Mahadeva Prasad's wife Geeta mahadevaprasad has won the battle. Here is winner's brief profile.
Please Wait while comments are loading...