ಗೋ.ಮಧುಸೂದನ್ ಬಂಡೀಪುರ ರೆಸಾರ್ಟ್ ತೆರವು

By: ಚಾಮರಾಜನಗರ ಪ್ರತಿನಿಧಿ
Subscribe to Oneindia Kannada

ಚಾಮರಾಜನಗರ, ಮಾರ್ಚ್ 17: ಬಿಜೆಪಿಯ ನಾಯಕ, ವಿಧಾನಪರಿಷತ್ ಮಾಜಿ ಸದಸ್ಯ ಗೋ.ಮಧುಸೂದನ್ ಅವರು ಬಂಡೀಪುರದ ಅಭಯಾರಣ್ಯ ವ್ಯಾಪ್ತಿಯಲ್ಲಿ ಭೂಸುಧಾರಣಾ ಕಾಯ್ದೆಯನ್ನು ಉಲ್ಲಂಘಿಸಿ 40 ಎಕರೆ ಜಮೀನನ್ನು ಖರೀದಿಸಿ, ಅದರಲ್ಲಿ ನಿರ್ಮಿಸಿದ್ದ ರೆಸಾರ್ಟ್ ತೆರವು ಕಾರ್ಯ ಆರಂಭವಾಗಿದೆ.

ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ಆದೇಶ ನೀಡಿದ್ದ ಹಿನ್ನೆಲೆಯಲ್ಲಿ ಮುಟ್ಟುಗೋಲು ಹಾಕಿಕೊಂಡ ಕಂದಾಯ ಇಲಾಖೆ ಅಧಿಕಾರಿಗಳು ಟೈಗರ್ ರಾಂಚ್ ರೆಸಾರ್ಟ್ ತೆರವು ಕಾರ್ಯಾಚರಣೆಗೆ ಮುಂದಾಗಿದ್ದಾರೆ.[ಗೋ ಮಧುಸೂದನ್ ಬಂಡೀಪುರದ ರೆಸಾರ್ಟ್ ಮುಟ್ಟುಗೋಲು?]

Go Madhusudan Bandipur resort vacated

ಕಂದಾಯ ಇಲಾಖೆಯ ಹಂಗಳ ನಾಡ ಕಚೇರಿಯ ಉಪತಹಸೀಲ್ದಾರ್ ದೀಪಕ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ಪ್ರಭಾರ ರಾಜಸ್ವ ನಿರೀಕ್ಷಕ ನದೀಂಹುಸೇನ್, ಗ್ರಾಮ ಲೆಕ್ಕಾಧಿಕಾರಿಗಳಾದ ನಾಗೇಂದ್ರಪ್ಪ, ಬಸವರಾಜು, ಗ್ರಾಮಸಹಾಯಕರು ಮತ್ತು ಕಂದಾಯ ಇಲಾಖೆಯ ಸಿಬ್ಬಂದಿ ಕಾಟೇಜ್ ಗಳಲ್ಲಿದ್ದ ಪೀಠೋಪಕರಣಗಳು, ಬೆಡ್ ಶೀಟುಗಳು, ಹಾಸಿಗೆ- ದಿಂಬು, ಮಂಚ ಮುಂತಾದ ವಸ್ತುಗಳನ್ನು ತೆರವುಗೊಳಿಸಿದ್ದಾರೆ.[ಅಗ್ನಿ ಅನಾಹುತ ಮತ್ತು ಬರ: ಕಂಗಾಲಾದ ಬಂಡೀಪುರದ ಪ್ರಾಣಿಗಳು]

Go Madhusudan Bandipur resort vacated

ಬಹಳಷ್ಟು ವರ್ಷಗಳಿಂದ ಬಿಜೆಪಿಯ ನಾಯಕ ವಿಧಾನಪರಿಷತ್ ಮಾಜಿ ಸದಸ್ಯ ಗೋ.ಮಧುಸೂಧನ್ ವಿರುದ್ಧ ಅಕ್ರಮ ರೆಸಾರ್ಟ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಆರೋಪಗಳು ಕೇಳಿ ಬಂದಿದ್ದವು. ಆದರೆ ಇದನ್ನು ಅವರು ಅಲ್ಲಗಳೆಯುತ್ತಲೇ ಬಂದಿದ್ದರು. ಆದರೆ ಇದೀಗ ಸರಕಾರದ ಆದೇಶಕ್ಕೆ ತಲೆಬಾಗಲೇ ಬೇಕಾಗಿದೆ.[ಬಂಡೀಪುರದಲ್ಲಿ ಕಾಳ್ಗಿಚ್ಚು ತಡೆಗೆ ಡ್ರೋಣ್ ಬಳಕೆ?]

ತಮ್ಮ ಹಾಗೂ ಸಂಬಂಧಿ ಟಿ.ಎಲ್.ಜಯಲಕ್ಷ್ಮಿ ಹೆಸರಿನಲ್ಲಿ ಹಂಗಳ ಹೋಬಳಿಯ ಮಂಗಲ ಗ್ರಾಮದ ಬಳಿ ಕೃಷಿ ಉದ್ದೇಶಕ್ಕಾಗಿ 40 ಎಕರೆ ಭೂಮಿಯನ್ನು ಖರೀದಿಸಿದ್ದರು. ಇದಕ್ಕಾಗಿ ವ್ಯವಸಾಯಗಾರರೆಂದು ಸುಳ್ಳು ಪ್ರಮಾಣಪತ್ರ ಮಾಡಿಸಿ, ಅದನ್ನು ಸಲ್ಲಿಸುವಲ್ಲಿಯೂ ಯಶಸ್ವಿಯಾಗಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
BJP leader Go Madhusudan illegal resort vacated in Bandipur, Chamarajanagar district.
Please Wait while comments are loading...