ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಳಿಗಿರಿರಂಗನ‌ ಬೆಟ್ಟದಲ್ಲಿ ವರ್ಣರಂಜಿತ ಕಣಜ ಪತ್ತೆ: ಕೀಟದ ವಿಶೇಷತೆ ಬಗ್ಗೆ ಇಲ್ಲಿದೆ ಮಾಹಿತಿ

ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ‌ ಬಿಳಿಗಿರಿರಂಗನ‌ ಬೆಟ್ಟದಲ್ಲಿ ಹೊಸ ಬಗೆಯ ವರ್ಣ ರಂಜಿತ ಕಣಜ ಪತ್ತೆಯಾಗಿದೆ.

By ಚಾಮರಾಜ ನಗರ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ, ಫೆಬ್ರವರಿ 2: ದಕ್ಷಿಣ ಭಾರತದಲ್ಲಿ ಇದೇ ಮೊದಲ ಬಾರಿಗೆ ಹೊಸ ಬಗೆಯ 'ಕಣಜ'(ಕಡಜ)ವು ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ‌ ಬಿಳಿಗಿರಿರಂಗನ‌ ಬೆಟ್ಟದಲ್ಲಿ ಪತ್ತೆಯಾಗಿದೆ.

ಏಟ್ರಿಯ ಕೀಟಶಾಸ್ತ್ರಜ್ಞರಾದ ಡಾ.ಎ.ಪಿ.ರಂಜನ್ ಹಾಗೂ ಡಾ.ಪ್ರಿಯದರ್ಶನ್ ಧರ್ಮರಾಜನ್ ಎಂಬವರು ಹೊಸ ಬಗೆಯ ಪರವಾಲಂಬಿ ಕಣಜ( Parasitoid Wasp) ಪತ್ತೆ ಹಚ್ಚಿ ಯೂರೋಪಿಯನ್ ಜರ್ನಲ್ ಆಫ್ ಟ್ಯಾಕ್ಸನಮಿಯಲ್ಲಿ ಪ್ರಕಟಿಸಿದ್ದಾರೆ. ಪತ್ತೆಯಾಗಿರುವ ಕೀಟ ಆಕರ್ಷಕವಾಗಿ , ವರ್ಣರಂಜಿತವಾಗಿದ್ದು, ಉಳಿದ ಸಂಬಂಧಿತ ಕೀಟಗಳಿಂದ ಭಿನ್ನವಾಗಿದೆ. ಹೊಸ ಪರಾವಲಂಬಿ ಕಣಜವು ಡಾರ್ವಿನ್‌ನ ಪರವಾಲಂಬಿ ಕಣಜಗಳ‌ ಉಪಕುಟುಂಬ ಮೆಟೊಪಿನೆಗೆ ಸೇರಿದೆ. ಈ ಉಪಕುಟುಂಬದ ಕೇವಲ ಎರಡು ಜಿನಸ್ ಭಾರತದಲ್ಲಿ ಪತ್ತೆಯಾಗಿದ್ದು, ಹೊಸ ಪರಾವಲಂಬಿಯು ದಕ್ಷಿಣ ಭಾರತದಲ್ಲೇ ಪತ್ತೆಯಾದ ಮೊದಲ ಕೀಟವಾಗಿದೆ ಎಂದು ಕೀಟಶಾಸ್ತ್ಞರು ತಿಳಿಸಿದ್ದಾರೆ.

ಪತ್ತೆಯಾದ ಹೊಸ ಕಣಜದ ತಳಿಗೆ ಜೀವ ವೈವಿಧ್ಯತೆಗೆ ಸೋಲಿಗ ಸಮುದಾಯ ಸಾಕ್ಷಿಯಾಗಿದ್ದು ಮತ್ತು ಅವರ ಜವಾಬ್ದಾರಿಗೆ ಉಡುಗೊರೆ ಎಂಬಂತೆ ಸೋಲಿಗ ಎಂತಲೇ ಹೆಸರಿಡಲಾಗಿದೆ. ಹೊಸ ಬಗೆಯ ಕೀಟಕ್ಕೆ ಗೆ "ಸೋಲಿಗ" ಹಾಗೂ ಸ್ಪೀಸಸ್ ಗೆ "ಎಕಾರಿನಾಟಾ" (ಸೋಲಿಗ ಎಕಾರಿನಾಟ- (SOLIGA ekrinata) ಎಂದು ಕರೆಯಲಾಗಿದೆ.

First New Genus Of Wasps Found In Biligiri Rangana Hills

ಬಿಳಿಗಿರಿರಂಗನ ಬೆಟ್ಟವು ಪೂರ್ವ ಮತ್ತು ಪಶ್ಚಿಮ ಘಟ್ಟಗಳ ಸಂಗಮದಲ್ಲಿರುವ ಕಾರಣ ತಪ್ಪಲಿನಲ್ಲಿ ಕುರುಚಲು ಕಾಡು, ಒಣ ಎಲೆ ಉದುರುವ ಕಾಡು, ತೇವಾಂಶ ಎಲೆ ಉದುರುವ ಕಾಡು, ನಿತ್ಯ ಹರಿದ್ವರ್ಣ, ಶೋಲಾ ಕಾಡು ಹಾಗೂ ಹುಲ್ಲುಗಾವಲಿರುವ ಅನನ್ಯ ಭೌಗೋಳಿಕ ಪರಿಸರ ಹೊಂದಿರುವ ಕಾರಣ ಜೈವಿಕ ವೈವಿಧ್ಯತೆ ಈ ಅರಣ್ಯದಲ್ಲಿದೆ.

ಬಿಳಿಗಿರಿರಂಗನ ಬೆಟ್ಟದಲ್ಲಿ ನೂರಾರು ಜಾತಿಯ ಸಸ್ಯವರ್ಗ ಇದ್ದು, 120 ಜಾತಿಯ ಇರುವೆಗಳು, 120 ಜಾತಿಯ ಚಿಟ್ಟೆಗಳು, 105 ಜಾತಿಯ ಸಗಣಿ ಜೀರುಂಡೆಗಳು ಬಿಳಿಗಿರಿ ಬನದಿಂದಲೇ ಜಗತ್ತಿಗೆ ಪರಿಚಿತಗೊಂಡಿದೆ.‌ ಕಳೆದ 1 ವರ್ಷದಲ್ಲಿ 10 ಜಾತಿಯ ಕೀಟಗಳು ಬಿಳಿಗಿರಿರಂಗನ ಬೆಟ್ಟದಿಂದಲೇ ಪತ್ತೆಯಾಗಿದೆ.

First New Genus Of Wasps Found In Biligiri Rangana Hills

ಕೆಲವು ತಿಂಗಳುಗಳ ಹಿಂದೆಯಷ್ಟೇ ಹೊಸ ಜಾತಿಯ ಹಲ್ಲಿಯೂ ಕೂಡ ಪತ್ತೆಯಾಗಿತ್ತು. 11 ವರ್ಷಗಳ ಬಳಿಕ ನಡೆದ ಹಕ್ಕಿ ಗಣತಿಯಲ್ಲಿ 274 ಜಾತಿಯ ಪಕ್ಷಿಗಳನ್ನು ಗುರುತು ಮಾಡಲಾಗಿದ್ದು ವೈವಿಧ್ಯಮಯ ಪರಿಸರದ ಕಾಡು ಕರ್ನಾಟಕಕ್ಕೆ ಕಳಸಪ್ರಾಯವಾಗಿದೆ.

English summary
Researchers have unearthed a strikingly colourful new genus of wasp from the forests of Biligiri Rangana Hills in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X