ವಕೀಲರ ಮೇಲೆ ಸುಳ್ಳು ಪ್ರಕರಣ, ಇನ್ಸ್‌ಪೆಕ್ಟರ್ ಅಮಾನತಿಗಾಗಿ ಧರಣಿ

ಚಾಮರಾಜನಗರ, ಫೆಬ್ರವರಿ 9: ವಕೀಲರ ಮೇಲೆ ಸುಳ್ಳು ಕೇಸು ದಾಖಲಿಸಿರುವ ಪೊಲೀಸ್ ಇನ್‌ಸ್ಪೆಕ್ಟರ್ ಅಮಾನತುಗೊಳಿಸುವಂತೆ ಒತ್ತಾಯಿಸಿ ವಕೀಲರು ಪೊಲೀಸ್ ಠಾಣೆ ಮುಂಭಾಗ ಧರಣಿ ಆರಂಭಿಸಿದ್ದಾರೆ.

ತಪ್ಪು ಮಾಡಿದವರೆ ಶಿಕ್ಷೆ ಅನುಭವಿಸುವುದು ಕಷ್ಟವಾಗಿರುವ ಈ ಕಾಲದಲ್ಲಿ ತಪ್ಪು ಮಾಡದ ಅದೆಷ್ಟೋ ಕಕ್ಷಿದಾರರು ಕಷ್ಟ ಅನುಭವಿಸುವಂತಾಗಿದೆ.

ಚಾಮರಾಜನಗರ ಜಿಲ್ಲೆಯ ಜಿಲ್ಲಾ ನ್ಯಾಯಾಲಯಕ್ಕೆ ಬರುವ ಅದೇಷ್ಟೊ ಕಕ್ಷಿದಾರರು ಮನಸ್ಸಲ್ಲಿ ಬೇಸರ ವ್ಯಕ್ತಪಡಿಸಿ ಬಂದು ಹೋಗುತ್ತಿದ್ದಾರೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಠಾಣೆಯೊಂದರಲ್ಲಿ ವಕೀಲರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ, ಅಂತಹ ಇನ್ಸ್ ಪೆಕ್ಟರ್ ಅಮಾನತು ಮಾಡಬೇಕೆಂದು ಆರೋಪಿಸಿ ನ್ಯಾಯವಾದಿಗಳು ಪ್ರತಿಭಟಿಸಿತ್ತಿದ್ದಾರೆ.

False case against Lawyer in Chamarajanagar

ಇತ್ತ ಕರ್ತವ್ಯನಿರತ ಪೊಲೀಸರ ಮೇಲೆ ಗಲಾಟೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದು ಎಷ್ಟು ಸರಿ ಎಂದು ಪೊಲೀಸರ ವಲಯದಲ್ಲಿ ಕೇಳಿಬರುತ್ತಿದೆ.
ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು ಎನ್ನುವ ಹಾಗೆ ಹಾಗೇ ನ್ಯಾಯವಾದಿಗಳು ಪೊಲೀಸರೊಬ್ಬರ ತಿಕ್ಕಾಟದಿಂದ ಕಾರ್ಯ ಕಲಾಪಗಳನ್ನ ನ್ಯಾಯವಾದಿಗಳು ಬಹಿಷ್ಕರಿಸುತ್ತಿರುವ ಪರಿಣಾಮ ಕಕ್ಷಿದಾರರು ವ್ಯರ್ಥವಾಗಿ ಬಂದು ಹೋಗುತ್ತಿದ್ದಾರೆ.

False case against Lawyer in Chamarajanagar

ಕೆಲವರ ಪ್ರಕಾರ ವಕೀಲರದ್ದು ತಪ್ಪಿಲ್ಲವೆಂದಿದ್ದರೆ ಪೊಲೀಸರ ವಿರುದ್ದ ನ್ಯಾಯಾಲಯದಲ್ಲಿಯೇ ಖಾಸಗಿ ದೂರು‌ ದಾಖಲಿಸಿ ನ್ಯಾಯ ಪಡೆಯಬಹುದಲ್ಲವೇ.? ಸಾಂಕೇತಿಕವಾಗಿ ಪ್ರತಿಭಟಿಸಿ ಮನವಿ ಪತ್ರ ಸಲ್ಲಿಸುವುದು ಸರಿ. ಆದರೆ ಅದನ್ನೆ ಮುಂದುವರೆಸುವುದರಿಂದ ಮುಗ್ದ ಕಕ್ಷಿದಾರರು ನೋವು ಅನುಭವಿಸುವುದು ತಪ್ಪು ಎಂದು ವಕೀಲರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+