ಚಾಮರಾಜನಗರದಲ್ಲಿ ಆನೆ ದಾದಾಗಿರಿ; ಲಾರಿ ಅಡ್ಡಗಟ್ಟಿ ಕಬ್ಬು ವಸೂಲಿ

ಚಾಮರಾಜನಗರ, ಜೂ. 17: ಚಲಿಸುತ್ತಿದ್ದ ಲಾರಿಯನ್ನು ತಡೆಗಟ್ಟಿ ಆನೆಯೊಂದು ಕಬ್ಬು ಮೇಯ್ದಿರುವ ಘಟನೆ ಬೆಂಗಳೂರು- ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಚಾಮರಾಜನಗರ ತಾಲೂಕಿನ‌ ಪುಣಜನೂರು ಬಳಿ ನಡೆದಿದೆ.

ಕಳೆದ ಕೆಲವು ತಿಂಗಳುಗಳಿಂದ ಅಸನೂರು, ಕಾರೆಪಾಳ, ಪುಣಜನೂರು ಸುತ್ತಮುತ್ತ ಆನೆ ಕಬ್ಬು ವಸೂಲಿ ನಿಂತಿತ್ತು. ಈಗ ಮತ್ತೇ ಆರಂಭಗೊಂಡಿದ್ದು ಆನೆಯೊಂದು ರಾಷ್ಟ್ರೀಯ ಹೆದ್ದಾರಿ ಸಮೀಪವೇ ಬೀಡುಬಿಡುತ್ತಿದ್ದು ಗುರುವಾರ ಕಬ್ಬು ತುಂಬಿದ ಲಾರಿ ಅಡ್ಡಗಟ್ಟಿ ಕಬ್ಬು ತಿಂದಿದೆ, ಇದನ್ನು ಎದುರಿನ‌ ಬಸ್ ಚಾಲಕರೊಬ್ಬರು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ.‌

ಈ ಆನೆಯ ದಾದಾಗಿರಿಗೆ ಓಂಕಾರ ಹಾಕಿದವರು ಲಾರಿ ಚಾಲಕರೇ ಎಂದು ತಿಳಿದುಬಂದಿದ್ದು ಆನೆ ಕಂಡ ಕೂಡಲೇ ಲಾರಿ ನಿಲ್ಲಿಸಿ ಕಬ್ಬು ತಿನ್ನಲು ಅನವು ಮಾಡಿಕೊಟ್ಟು ಅಭ್ಯಾಸ ಮಾಡಿಸಿದ್ದರಿಂದ ಈಗ ಯಾವುದೇ ಅಳುಕಿಲ್ಲದೇ ಲಾರಿ ಅಡ್ಡಗಟ್ಟಿ ವಸೂಲಿ ಮಾಡಲು ಪ್ರಾರಂಭಿಸಿರುವುದು ಸಂಚರಿಸುವವರಿಗೆ ಮುದವನ್ನೂ ನೀಡುತಿದೆ.

Elephant Stops a Moving Truck and Graze Sugarcane

ಮಾದಪ್ಪನ ಬೆಟ್ಟದ ರಸ್ತೆ ಮಧ್ಯೆ ನಿಂತ ಆನೆ; ಭಕ್ತರ ಪರದಾಟ

ಪ್ರಸಿದ್ಧ ಯಾತ್ರಾಸ್ಥಳ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳುವ ಮಾರ್ಗದಲ್ಲಿ ಸಲಗವೊಂದು ಬಂದು ನಿಂತು ಸಂಚಾರ ಅಸ್ತವ್ಯಸ್ತ ಮಾಡಿದ ಘಟನೆ ಕೆಳದಿನಗಳಿಂದ ಹಿಂದೆ ನಡೆದಿತು.

ಮಲೆ ಮಹದೇಶ್ವರ ಬೆಟ್ಟ ದಕ್ಷಿಣ ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿರುವ ಒಂದು ಯಾತ್ರಾಸ್ಥಳವಾಗಿದೆ. ದಟ್ಟ ಕಾಡಿನ ಮಧ್ಯೆ ಈ ದೇವಾಲಯವು ಯಾತ್ರಾರ್ಥಿಗಳು ಮಾತ್ರವಲ್ಲದೆ ಪ್ರಕೃತಿ ಪ್ರಿಯರನ್ನು ಆಕರ್ಷಿಸುತ್ತದೆ.

Elephant Stops a Moving Truck and Graze Sugarcane

ಸ್ಥಳೀಯರ ಕಿರುಚಾಟಕ್ಕೆ ಗಾಬರಿಕೊಂಡ ಕಾಡಾನೆ

ಕಾಡಿನಿಂದ ಮುಖ್ಯ ರಸ್ತೆಗೆ ಇಳಿದ ಕಾಡಾನೆ, ಅರ್ಧ ಗಂಟೆಗೂ ಹೆಚ್ಚುಕಾಲ ಹಿಂದೆ ಮುಂದೆ ಓಡಾಡಿ ವಾಹನ ಸವಾರರಿಗೆ ಭೀತಿ ಹುಟ್ಟಿಸಿತ್ತು. ರಸ್ತೆಯಲ್ಲಿದ್ದ ಬೈಕ್ ಕಡೆಗೆ ತೆರಳುತ್ತಿದ್ದಂತೆ ಚಾಲಕ ಹಿಂದಕ್ಕೆ ಹೋಗಿದ್ದಾನೆ. ಅಲ್ಲಿಂದ ವಾಪಸಾಗುತ್ತಿದ್ದಂತೆ ಸ್ಥಳೀಯರ ಕಿರುಚಾಟಕ್ಕೆ ಸ್ವಲ್ಪ ಗಾಬರಿಗೊಂಡಿತ್ತು. ಈ ವೇಳೆ ಯಾವುದೇ ಅನಾಹುತ ಮಾಡಿಲ್ಲ. ಕಾಡಾನೆ ಕಾಣಿಸಿಕೊಳ್ಳುತ್ತಿದ್ದಂತೆ ಕೆಲವರು ಅಲ್ಲಿಂದ ದಿಕ್ಕಾಪಾಲಾಗಿ ಓಡಿದ್ದಾರೆ. ಎತ್ತ ಹೋಗಬೇಕೆಂಬುದು ತಿಳಿಯದೆ ಅತ್ತಿಂದಿತ್ತ, ಇತ್ತಿಂದತ್ತ ಓಡಾಡುತ್ತಿದ್ದ ಕಾಡಾನೆಯನ್ನು ಸ್ಥಳೀಯರು ಕೂಗಾಡಿ ಕಾಡಿಗೆ ಓಡಿಸುವ ಪ್ರಯತ್ನ ಮಾಡಿದರೂ ಅರ್ಧ ಗಂಟೆಯಾದರೂ ರಸ್ತೆಯಿಂದ ಕದಲದೆ ಕಾಡಾನೆ ಅಡ್ಡಾಡಿದೆ. ಸದ್ಯ ಕಾಡಾನೆಯಿಂದ ಪ್ರಯಾಣಿಕರಿಗೆ ಯಾವುದೇ ತೊಂದರೆ ನೀಡಿಲ್ಲ. ಕಾಡಾನೆ ಕಾಡಿಗೆ ತೆರಳಿದ ಬಳಿಕ ವಾಹನ ಸವಾರರು ಸಂಚಾರ ಆರಂಭಿಸಿದ್ದಾರೆ.

(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+