Get Updates
Get notified of breaking news, exclusive insights, and must-see stories!

B.R Hills: ಕತ್ತಲೆಯಲ್ಲಿದ್ದ ಬಿಳಿಗಿರಿರಂಗನ ಬೆಟ್ಟ ಹಾಡಿಗೆ ಬರಲಿದೆ ಬೆಳಕು!

ಚಾಮರಾಜನಗರ, ಫೆಬ್ರವರಿ 12: ಸ್ವಾತಂತ್ರ್ಯ ಬಂದು ಸುಮಾರು ಎಪ್ಪತ್ತೇಳು ವರ್ಷಗಳು ಕಳೆದರೂ ಇಂದಿಗೂ ಹಲವು ಗ್ರಾಮಗಳಿಗೆ, ಕಾಡಂಚಿನ ಹಾಡಿಗಳಿಗೆ ವಿದ್ಯುತ್ ಸಂಪರ್ಕವಿಲ್ಲದೆ ಅಲ್ಲಿನ ವಾಸಿಗಳು ಕತ್ತಲೆಯಲ್ಲಿ ಬದುಕುತ್ತಿರುವುದನ್ನು ನಾವು ಇಂದಿಗೂ ನೋಡುತ್ತಿದ್ದೇವೆ. ಅದರಲ್ಲೂ ಅರಣ್ಯದಲ್ಲಿಯೇ ಬದುಕು ಕಟ್ಟಿಕೊಂಡಿರುವ ಅರಣ್ಯವಾಸಿಗಳ ಪೈಕಿ ಕೆಲವರು ಸರ್ಕಾರದ ಸೌಲಭ್ಯ ಸಿಗದೆ ಪರದಾಡುವಂತಾಗಿದೆ.

ಒಂದೆಡೆ ಅರಣ್ಯ ಇಲಾಖೆ ಅವರನ್ನು ಒಕ್ಕಲೆಬ್ಬಿಸಲು ನೋಡುತ್ತಿದ್ದರೆ, ಮತ್ತೊಂದೆಡೆ ಅರಣ್ಯವಾಸಿಗಳು ತಾವು ತಲಾಂತರದಿಂದ ಜೀವನ ಮಾಡಿಕೊಂಡು ಬಂದಿದ್ದೇವೆ. ಇಲ್ಲಿಂದ ಹೋಗಿ ಎಂದರೆ ಹೋಗುವುದೆಲ್ಲಿಗೆ ಎಂಬ ಪ್ರಶ್ನೆ ಕೇಳುತ್ತಾ ಅಲ್ಲಿಯೇ ಠಿಕಾಣಿ ಹೂಡಿದ್ದರಿಂದ ಸಂಘರ್ಷಕ್ಕೂ ದಾರಿ ಮಾಡಿಕೊಡುತ್ತಿದೆ.

Electricity Connection Initiated for Remote Villages in Chamarajanagar

ಈಗಾಗಲೇ ಬಹಳಷ್ಟು ಕಡೆಗಳಲ್ಲಿ ಅರಣ್ಯದಲ್ಲಿ ಬದುಕು ಕಟ್ಟಿಕೊಂಡಿದ್ದ ಅರಣ್ಯವಾಸಿಗಳನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಲಾಗಿದೆ. ಕೆಲವರು ಅರಣ್ಯದಿಂದ ಬಂದು ನಾಡಿನಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಇನ್ನು ಕೆಲವು ಕಡೆಗಳಲ್ಲಿ ಅರಣ್ಯದಂಚಿನಲ್ಲಿ ಜೀವನ ಮಾಡುತ್ತಿದ್ದಾರೆ. ಇಂತಹ ಬಹುತೇಕ ಹಾಡಿಗಳಿಗೆ ವಿದ್ಯುತ್ ಸಂಪರ್ಕಕ್ಕೆ ಕಾನೂನು ತೊಡಕಿನ ಕಾರಣವನ್ನು ನೀಡಿ ಸೌಲಭ್ಯಗಳನ್ನೇ ನೀಡಲಾಗುತ್ತಿಲ್ಲ ಎಂಬ ಆರೋಪವೂ ಇದೆ. ಚಾಮರಾಜನಗರ ಜಿಲ್ಲೆಯ ಬಹುತೇಕ ಹಾಡಿಗಳಲ್ಲಿ ಇಂದಿಗೂ ಮೂಲಸೌಲಭ್ಯ ಮರೀಚಿಕೆಯಾಗಿದೆ. ವಾಹನಗಳು ಕೂಡ ಅಲ್ಲಿಗೆ ತೆರಳದ ಕಾರಣದಿಂದ ಹತ್ತಾರು ಕಿ.ಮೀ.ಗಳನ್ನು ನಡೆದುಕೊಂಡು ಹೋಗುವಂತಾಗಿದೆ.

ಕೆಲವು ಹಾಡಿಗಳಲ್ಲಿ ವಾಸಿಸುವವರಿಗೆ ಹಕ್ಕುಪತ್ರಗಳಿಲ್ಲ. ಹೀಗಾಗಿ ಅವರಿಗೆ ಸರ್ಕಾರದ ಸೌಲಭ್ಯವೂ ಇಲ್ಲದಾಗಿದೆ. ಕೆಲವರು ಕಾಡು ಉತ್ಪನ್ನಗಳಿಂದ ಜೀವನ ಸಾಗಿಸುತ್ತಿದ್ದರೆ, ಮತ್ತೆ ಕೆಲವರು ಕೂಲಿ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದಾರೆ. ಇವರ ಹಾಡಿಗೆ ತೆರಳಿದರೆ ಇವತ್ತಿಗೂ ಅವರೆಲ್ಲರೂ ದಯನೀಯ ಸ್ಥಿತಿಯಲ್ಲಿ ಬದುಕುತ್ತಿರುವುದು ಕಂಡು ಬರುತ್ತಿದೆ. ಅವರಿಗೆಲ್ಲ ಮೂಲಸೌಕರ್ಯ ತಲುಪಿ ಅವರು ನಮ್ಮಂತೆ ಆಗುವುದು ಯಾವಾಗ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿಯೇ ಉಳಿಯುತ್ತಿದೆ. ಈ ನಡುವೆ ಕೆಲವು ಹಾಡಿಗಳಿಗೆ ವಿದ್ಯುತ್ ಸೌಲಭ್ಯವನ್ನು ಒದಗಿಸಲು ಜಿಲ್ಲಾಡಳಿತ ಮುಂದಾಗಿರುವುದು ಖುಷಿ ಕೊಡುವ ವಿಚಾರವಾಗಿದೆ.

Electricity Connection Initiated for Remote Villages in Chamarajanagar

ವಿದ್ಯುತ್ ಸಂಪರ್ಕದ ಕಾಮಗಾರಿ ಆರಂಭ

ಬಿಳಿಗಿರಿರಂಗನಬೆಟ್ಟದ ಹುಲಿ ಸಂರಕ್ಷಣಾ ವಿಭಾಗ ವ್ಯಾಪ್ತಿಯಲ್ಲಿರುವ ಹಲವು ಹಾಡಿಗಳಿಗೆ ವಿದ್ಯುತ್ ಒದಗಿಸುವ ಯೋಜನೆ ಆರಂಭಿಸಲಾಗಿದ್ದು, ಈ ಯೋಜನೆಯಡಿ ಹಾಡಿಗಳಿಗೆ ಸಾಂಪ್ರದಾಯಿಕ ವಿದ್ಯುತ್ ಜಾಲದಿಂದ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಮಗಾರಿ ಆರಂಭವಾಗಿದೆ. ಈ ನಡುವೆ ಪುಣಜನೂರಿನಿಂದ ಸಾಂಪ್ರದಾಯಿಕ ವಿದ್ಯುತ್ ಜಾಲಕ್ಕೆ ಸಂಪರ್ಕ ವಿಸ್ತರಿಸುವ ಜಾಗದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಪರಿಶೀಲನೆ ನಡೆಸಿದರುವುದು ಹಾಡಿ ನಿವಾಸಿಗಳಿಗೆ ಬೆಳಕಿನ ಭರವಸೆ ಮೂಡಿಸಿದೆ. ಈ ಹಿಂದೆಯೇ ಈ ಕಾಮಗಾರಿಗೆ ಬೇಡುಗುಳಿಯಲ್ಲಿ ಶಾಸಕರು ಹಾಗೂ ಎಂಎಸ್ಐಜಎಲ್ ಅಧ್ಯಕ್ಷರಾದ ಸಿ. ಪುಟ್ಟರಂಗಶೆಟ್ಟಿ ಅವರು ವಿದ್ಯುಕ್ತವಾಗಿ ಚಾಲನೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಸದ್ಯ ವಿದ್ಯುತ್ ಬಂದಿದ್ದೇ ಆದರೆ ಬಿಳಿಗಿರಿರಂಗನಬೆಟ್ಟದ ಹರದನಹಳ್ಳಿ ಉಪವಿಭಾಗಕ್ಕೆ ಒಳಪಡುವ ಮೊಣಕೈಪೋಡು, ಬೇಡುಗುಳಿ, ಮಾರಿಗುಡಿ ಪೋಡು, ಕಾಡಿಗೆರೆ ಮತ್ತು ಬಂಡಿಗೆರೆ ಹಾಡಿಗಳಲ್ಲಿರುವ 365 ಮನೆಗಳು ಬೆಳಕು ಕಾಣಲಿವೆ. ಇಲ್ಲಿಗೆ ಸಾಂಪ್ರದಾಯಿಕ ವಿದ್ಯುತ್ ಜಾಲದಿಂದ ಭೂಮಿಯೊಳಗೆ ಕೇಬಲ್ ಅಳವಡಿಸಿ ವಿದ್ಯುತ್ ಸಂಪರ್ಕ ನೀಡಲಾಗುತ್ತದೆ. ಇದರಿಂದ ಹಾಡಿಗಳಲ್ಲಿ ವಾಸಿಸುವ ಬುಡಕಟ್ಟು ಜನರಿಗೆ ನಿರಂತರವಾಗಿ ವಿದ್ಯುತ್ ಸಿಗಲಿದೆ. ಆ ಮೂಲಕ ಇಲ್ಲಿವರೆಗೆ ಕತ್ತಲೆಯಲ್ಲಿಯೇ ಬದುಕು ಸವೆಸಿದ ಅವರು ಇನ್ನು ಮುಂದೆ ಬೆಳಕು ಕಾಣಬಹುದಾಗಿದೆ.

Electricity Connection Initiated for Remote Villages in Chamarajanagar

ಜಿಲ್ಲಾಧಿಕಾರಿ ಶಿಲ್ಪಾನಾಗ್ ಹೇಳುವುದೇನು?

ಈ ಕುರಿತಂತೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ 9.4 ಕೋಟಿ ರೂ. ಗಳಗೆ ಟೆಂಡರ್ ನೀಡಲಾಗಿದೆ ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಮಗಾರಿಯನ್ನು 6 ತಿಂಗಳೊಳಗಾಗಿ ಮುಕ್ತಾಯಗೊಳಿಸಲಾಗುತ್ತದೆ. ಇಲ್ಲಿಯವರೆಗೂ ಹಾಡಿಗಳಿಗೆ ಸೋಲಾರ್ ನಿಂದ ವಿದ್ಯುತ್ ಸಂಪರ್ಕ ನೀಡಲಾಗಿತ್ತು.

ರಾತ್ರಿ ವೇಳೆಯಲ್ಲಿ ಹಾಗೂ ಮಳೆ ನಿರಂತರವಾಗಿರುವ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕ ನೀಡಲು ಸಾಧ್ಯವಾಗುತ್ತಿರಲಿಲ್ಲ. ಮುಖ್ಯಮಂತ್ರಿಗಳ ಆದೇಶದನ್ವಯ ಭೂಮಿಯೊಳಗೆ ಕೇಬಲ್ ಅಳವಡಿಸಿ ಸಾಂಪ್ರದಾಯಿಕ ವಿದ್ಯುತ್ ಜಾಲದಿಂದ ವಿದ್ಯುತ್ ಸಂಪರ್ಕ ನೀಡಲು ನಿಯಮಾನುಸಾರ ಕ್ರಮವಹಿಸಿರುವುದಾಗಿ ಹೇಳಿದ್ದಾರೆ.

ಜಿಲ್ಲೆಯಲ್ಲಿ ವಿದ್ಯುತ್ ಸೇರಿದಂತೆ ಇನ್ನಿತರ ಮೂಲ ಸೌಕರ್ಯ ವಂಚಿತ ಪ್ರದೇಶಗಳಲ್ಲಿ ಬದುಕು ಕಟ್ಟಿಕೊಂಡಿರುವ ಹಾಡಿವಾಸಿಗಳಿಗೂ ಇದೇ ರೀತಿಯಲ್ಲಿ ಮೂಲಸೌಲಭ್ಯ ಕಲ್ಪಿಸಿಕೊಡುವ ಮೂಲಕ ಅವರು ಕೂಡ ಮುಖ್ಯವಾಹಿನಿಗೆ ಬರುವ ಕೆಲಸವನ್ನು ಸರ್ಕಾರ ಮಾಡಬೇಕಾಗಿದೆ. ಆಗ ಮಾತ್ರ ನಮ್ಮದು ಮುಂದುವರೆಯುತ್ತಿರುವ ದೇಶ ಎಂದು ಹೆಮ್ಮೆಯಿಂದ ಹೇಳಿಕೊಳ್ಳಲು ಸಾಧ್ಯವಾಗಲಿದೆ. ಆದಷ್ಟು ಬೇಗ ಹಾಡಿವಾಸಿಗಳು ಬೆಳಕು ಕಾಣುವಂತಾಗಲಿ ಎನ್ನುವುದು ಆಶಯವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+