ವಿಧಿಯಾಟ ನೋಡಿ! ಪ್ರಸಾದ ತಯಾರಿಸಿದ್ದು ಅಪ್ಪ, ತಿಂದು ಮೃತಳಾದ ಮಗಳು!
Recommended Video

Chamarajanagar Temple Tragedy : ವಿಧಿಯಾಟ ನೋಡಿ! ಪ್ರಸಾದ ತಯಾರಿಸಿದ್ದು ಅಪ್ಪ, ತಿಂದು ಮೃತಳಾದ ಮಗಳು!
ಚಾಮರಾಜನಗರ, ಡಿಸೆಂಬರ್ 15: ವಿಧಿಯಾಟ ನೋಡಿ! ಚಾಮರಾಜನಗರ ಜಿಲ್ಲೆಯ ಸುಳವಾಡಿ ಗ್ರಾಮದ ಕಿಚ್ಚುಗತ್ತಿ ಮಾರಮ್ಮನ ದೇವಾಲಯದಲ್ಲಿ ಪ್ರಸಾದ ತಯಾರಿಸುವ ಪುಟ್ಟಸ್ವಾಮಿ ಅವರ ಮಗಳು ತನ್ನ ತಂದೆಯೇ ಕೈಯಾರೆ ತಯಾರಿಸಿದ ಪ್ರಸಾದವನ್ನು ತಿಂದು ಮೃತಳಾಗಿದ್ದಾಳೆ.
12 ವರ್ಷ ವಯಸ್ಸಿನ ಆರನೇ ತರಗತಿ ಓದುತ್ತಿದ್ದ ನಳಿನಿ ಎಂಬ ಬಾಲಕಿ ವಿಷ ಪ್ರಸಾದ ಸೇವನೆಯಿಂದ ಮೃತಪಟ್ಟಿದ್ದಾಳೆ. ಯಾರೋ ಮಾಡಿದ ತಪ್ಪಿಗೆ ಸ್ವಂತ ತಂದೆಯೇ ತನ್ನ ಮಗಳಿಗೆ ವಿಷವುಣಿಸಿದಂತಾಗಿದೆ!

ಪ್ರಸಾದವನ್ನು ಭಕ್ತರಿಗೆ ಹಂಚುವ ಮೊದಲೇ, ಅನುಮಾನಗೊಂಡ ಅಡುಗೆಯವರಾದ ಪುಟ್ಟಸ್ವಾಮಿಯವರು ಅದನ್ನು ತಾವು ಸೇವಿಸಿದ್ದರು. ಆದರೆ ಅದೃಷ್ಟವೋ, ದುರದೃಷ್ಟವೋ ಆ ಪ್ರಸಾದ ಸೇವಿಸಿದ ಬಳಿಕವೂ ಅವರಿಗೆ ಯಾವುದೇ ಆರೋಗ್ಯ ಸಮಸ್ಯೆಯಾಗಿರಲಿಲ್ಲ. ಹಾಗಾದರೆ ವಿಷವನ್ನು ನಂತರ ಬೆರೆಸಲಾಗಿದೆಯಾ? ಎಂಬ ಅನುಮಾನ ಕಾಡುತ್ತಿದೆ.
ಹೌದು, ಚಾಮರಾಜನಗರ ಜಿಲ್ಲೆಯ ಹನೂರಿನ ಸುಳವಾಡಿಯ 'ವಿಷ ಪ್ರಸಾದ' ದುರಂತದ ಕರುಳು ಕಿವುಚುವಂಥ ಒಂದೊಂದೇ ಕತೆಗಳು ಹೊರಬರುತ್ತಿವೆ.












Click it and Unblock the Notifications