ಚಾಮರಾಜನಗರ: ಚರಂಡಿಯ ಕಲ್ಲು ಹೊತ್ತೊಯ್ದ ಜನಪ್ರತಿನಿಧಿ!

By: ಚಾಮರಾಜನಗರ ಪ್ರತಿನಿಧಿ
Subscribe to Oneindia Kannada

ಚಾಮರಾಜನಗರ, ಜನವರಿ 29: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎನ್ನುವುದಕ್ಕೆ ಇದಕ್ಕಿಂತ ಒಳ್ಳೆ ಉದಾಹರಣೆ ಇರಲಿಕ್ಕಿಲ್ಲ. ಊರು ಉದ್ಧಾರ ಮಾಡಲು ಕಳುಹಿಸಿದ ಜನಪ್ರತಿನಿಧಿ ಸಾರ್ವಜನಿಕ ರಸ್ತೆ ಬದಿಯಲ್ಲಿದ್ದ ಸೈಜ್‍ಕಲ್ಲನ್ನೇ ಹೊತ್ತೊಯ್ದಿದ್ದ ಪ್ರಕರಣ ಚಾಮರಾಜನಗರದಿಂದ ವರದಿಯಾಗಿದೆ.

ಹನೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಲೊಕ್ಕನಹಳ್ಳಿ ಮುಖ್ಯರಸ್ತೆಯಲ್ಲಿರುವ ಬಿ.ಎಂ.ಜಿ ಪ್ರೌಢಶಾಲೆಯಿಂದ ತಟ್ಟೆಹಳ್ಳದವರೆಗೆ ದಲಿತರ ಕಾಲೋನಿಯಲ್ಲಿ ಸುಸ್ಥಿತಿಯಲ್ಲಿದ್ದ ಚರಂಡಿಯನ್ನು ಜೆಸಿಬಿ ಯಂತ್ರದಿಂದ ನಾಶಗೊಳಿಸಿ ಅದರಲ್ಲಿದ್ದ ಸುಮಾರು 20 ಸಾವಿರ ಸೈಜು ಕಲ್ಲುಗಳನ್ನು ಅಕ್ರಮವಾಗಿ ದಾಸ್ತಾನಿರಿಸಿಕೊಂಡಿದ್ದಾರೆ ಎಂಬ ಆರೋಪ ಇಲ್ಲಿನ ಸ್ಥಳೀಯ ಜನಪ್ರತಿನಿಧಿಯ ಮೇಲೆ ಕೇಳಿ ಬಂದಿದೆ.[ನಂಜನಗೂಡು: ದನ ಮೇಯಿಸುತ್ತಿದ್ದ ವ್ಯಕ್ತಿ ಮೇಲೆ ಚಿರತೆ ದಾಳಿ]

 Chamarajanagar: Representative misused gutter rocks

ಕಲ್ಲುಗಳನ್ನು ಅಕ್ರಮವಾಗಿ ಸಾಗಿಸಿ ತಮ್ಮ ನಿವೇಶನದಲ್ಲಿ ಮಾತ್ರವಲ್ಲದೆ, ತೋಟದಲ್ಲಿ ಅಕ್ರಮವಾಗಿ ದಾಸ್ತಾನಿರಿಸಲಾಗಿತ್ತು. ಈ ಬಗ್ಗೆ ಪೋಟೋ ಸಮೇತ ಪ.ಪಂ. ನಾಲ್ಕನೇ ವಾರ್ಡ್ ಸದಸ್ಯ ಬಸವರಾಜು ಸಾಕ್ಷ್ಯಾಧಾರ ಸಮೇತ ಜಿಲ್ಲಾಡಳಿತಕ್ಕೆ ದೂರು ನೀಡಿದ್ದರು. ದೂರು ನೀಡಿ ಎರಡು ತಿಂಗಳುಗಳೇ ಕಳೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ತನಿಖಾಧಿಕಾರಿ ವರ್ಗ ಸ್ಥಳ ಪರಿಶೀಲನೆ ಮಾಡಿ ವರದಿ ತರಿಸಿಕೊಂಡಿದ್ದರೂ ಜಿಲ್ಲಾಡಳಿತ ಮಾತ್ರ ಯಾವುದೇ ರೀತಿಯ ಕ್ರಮ ಕೈಗೊಳ್ಳದೆ ಮೌನಕ್ಕೆ ಶರಣಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.[ಕಾಡಿನಿಂದ ಕರೆತಂದವರಿಗೆ ಕನಿಷ್ಠ ಸೌಲಭ್ಯವೂ ಇಲ್ಲ, ಇದೆಂಥ ಶಿಕ್ಷೆ?]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
People alleged that, a representative miss used his power and stored gutter rocks in Hanur, Chamarajanagar.
Please Wait while comments are loading...