ಚಾಮರಾಜನಗರದಲ್ಲಿ ತಮಿಳುನಾಡು ವಾಹನಗಳಿಗೆ ನಿರ್ಬಂಧ

By: ಚಾಮರಾಜನಗರ ಪ್ರತಿನಿಧಿ
Subscribe to Oneindia Kannada

ಚಾಮರಾಜನಗರ, ಸೆಪ್ಟೆಂಬರ್ 13 : ಕರ್ನಾಟಕ ಮತ್ತು ತಮಿಳುನಾಡು ನಡುವೆ ಕಾವೇರಿ ವಿವಾದ ವಿಕೋಪಕ್ಕೆ ತಿರುಗಿರುವ ಕಾರಣ ಚಾಮರಾಜನಗರದಲ್ಲಿಯೂ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ಎಲ್ಲೆಲ್ಲೂ ಅಘೋಷಿತ ಬಂದ್ ವಾತಾವರಣ ಕಂಡುಬರುತ್ತಿದೆ.

ತಮಿಳುನಾಡಿನ ರಾಮೇಶ್ವರಂನಲ್ಲಿ ಕನ್ನಡಿಗರ ಮೇಲೆ ತಮಿಳರು ನಡೆಸಿದ ದೌರ್ಜನ್ಯ ಹಾಗೂ ಗೂಂಡಾಗಿರಿಯನ್ನು ಖಂಡಿಸಿ ಗಡಿ ಚಾಮರಾಜನಗರ ಜಿಲ್ಲೆಯಲ್ಲಿ ತಮಿಳುನಾಡಿನ ವಾಹನವನ್ನು ತಡೆದು ಸೋಮವಾರ ಪ್ರತಿಭಟನೆ ನಡೆಸಲಾಯಿತು. [ಕಾವೇರಿದ ವಿವಾದ : ಬೆಂಗಳೂರಿನ 16 ಪ್ರದೇಶಗಳಲ್ಲಿ ಕರ್ಫ್ಯೂ]

Cauvery issue : Widespread protests in Chamarajanagar too

ಚಾಮರಾಜನಗರದ ರಾಷ್ಟ್ರೀಯ ಹೆದ್ದಾರಿ 209ರ ಭುವನೇಶ್ವರಿ ವೃತ್ತದಲ್ಲಿ ಸಮಾವೇಶಗೊಂಡ ಕನ್ನಡ ಚಳವಳಿಗಾರರು ತಮಿಳುನಾಡಿನ ಲಾರಿ ಹಾಗೂ ಕಾರನ್ನು ಸಹ ಅಡ್ಡಗಟ್ಟಿದ ಕನ್ನಡ ಚಳವಳಿಗಾರರು ಕಾರನ್ನುಹಿಂದಕ್ಕೆ ಕಳುಹಿಸಿದರು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಧರಣಿ ನಡೆಸುವ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸುವಾಗ ಹಿರಿಯ ಕನ್ನಡ ಚಳವಳಿಗಾರ ಶಾ.ಮುರಳಿ ಪೆಟ್ರೋಲ್ ಬಂಕ್‌ಗೆ ತೆರಳಿ ಆತ್ಮಹತ್ಯೆಗೆ ಯತ್ನಿಸಿದ ಘಟನೆಯೂ ನಡೆಯಿತು. [ಕಾವೇರಿ: ಬೆಂಗಳೂರು ಹೊತ್ತಿ ಉರಿಯಲು ಮೂಲ ಕಾರಣ ಇದು!]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Cauvery issue : Widespread protest reported in Chamarajanagar too on Monday. Many Tamil Nadu registration vehicles were stopped. A Kannada activist tried to immolate himself by pouring petrol on his body.
Please Wait while comments are loading...