ಚಾಮರಾಜನಗರ: ಕಟ್ಟಡ ನಿರ್ಮಾಣ ಕಾರ್ಮಿಕರ ಐಡಿ ಕಾಳಸಂತೆಯಲ್ಲಿ ಮಾರಾಟ!

ಚಾಮರಾಜನಗರ, ಏ. 30: ಲಾಕ್ ಡೌನ್ ಸಮಯದಲ್ಲಿ ಕಟ್ಟಡ ಕಾರ್ಮಿಕರ ಅಮಾಯಕತೆಯನ್ನೇ ಬಂಡವಾಳ ಮಾಡಿಕೊಂಡಿರುವ ದುಷ್ಕರ್ಮಿಗಳು ಜಿಲ್ಲೆಯಲ್ಲಿ ಕಾಳ ಸಂತೆಯಲ್ಲಿ ಕಟ್ಟಡ ಕಾರ್ಮಿಕರ ಗುರುತಿನ ಚೀಟಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಮೊದಲೇ ದುಡಿಮೆಯಿಲ್ಲದೆ ಸಂಕಷ್ಟದಲ್ಲಿರುವ ಕಟ್ಟಡ ನಿರ್ಮಾಣ ಕಾರ್ಮಿಕರು ಕೇಂದ್ರ ಸರ್ಕಾರದ ಹಣ ಪಡೆಯಲು ಕೈಯಲ್ಲಿದ್ದ ಬಿಡಿಗಾಸನ್ನು ಕಳೆದುಕೊಳ್ಳುತ್ತಿದ್ದಾರೆ.

ಈಗಾಗಲೇ ಅವಧಿ ಮೀರಿರುವ ಕಟ್ಟಡ ಕಾರ್ಮಿಕರ ಗುರುತಿನ ಚೀಟಿಯೊಂದಕ್ಕೆ 300 ರೂಪಾಯಿಗಳನ್ನು ನಿಗದಿ ಮಾಡಿ ಜಿಲ್ಲೆಯಲ್ಲಿ ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ ಬಂದಿದೆ.

ಕೇಂದ್ರ ಸರ್ಕಾರ ಕಟ್ಟಡ ಕಾರ್ಮಿಕರ ಬ್ಯಾಂಕ್ ಖಾತೆಗೆ ಎರಡು ಸಾವಿರ ರೂ. ಜಮಾ ಮಾಡಿದ ಬೆನ್ನಲ್ಲೆ ಗುರುತಿನ ಚೀಟಿ ಪಡೆಯಲು ಕಾರ್ಮಿಕರು ಮುಗಿಬಿದ್ದಿದ್ದಾರೆ.

A case registered for illegally selling building construction laborers identity cards.

ಐಡಿ ವಿತರಿಸಲು ಸೇವಾ ಶುಲ್ಕ ವಾಗಿ 50 ರೂ. ನಿಗದಿ ಪಡಿಸಿ ಐಕ್ಯ ಬಿಸಿನೆಸ್ ಸಲ್ಯೂಷನ್ ಸೆಂಟರ್ ಎಂಬ NGOಗೆ ಕಾರ್ಮಿಕ ಇಲಾಖೆ ಟೆಂಡರ್ ನೀಡಿತ್ತು.

ಚಾಮರಾಜನಗರ ಜಿಲ್ಲೆಯಲ್ಲಿ 47000 ಜನರನ್ನ ಕಟ್ಟಡ ಕಾರ್ಮಿಕರೆಂದು ಗುರುತಿಸಲಾಗಿತ್ತು, 12634 ಜನರಿಗೆ ಈ ಹಿಂದೆಯೆ ಗುರುತಿನ ಚೀಟಿ ವಿತರಿಸಲಾಗಿತ್ತು.

ಐಕ್ಯ ಸಂಸ್ಥೆಯ ಮಾಜಿ ನೌಕರ ಹಾಗೂ ಮಹಿಳೆಯೊಬ್ಬರು ಕೇಂದ್ರ ಸರ್ಕಾರದ ಹಣ ಪಡೆಯಲು ಕಾರ್ಮಿಕ ಇಲಾಖೆಯ ಐಡಿ ಅವಶ್ಯವೆಂದು ಪ್ರಚಾರ ನಡೆಸಿದ್ದರು.

ಗುರುತಿನ ಚೀಟಿ ಅಕ್ರಮವಾಗಿ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ಮಹಿಳೆ, ಐಕ್ಯ ಸಂಸ್ಥೆ ಮಾಜಿ ಪ್ರತಿನಿಧಿ ಹಾಗೂ ಐಕ್ಯ ಸಂಸ್ಥೆ ವಿರುದ್ದ ದೂರು ದಾಖಲಿಸಿರುವ ಕಾರ್ಮಿಕ ಇಲಾಖೆ. ಚಾಮರಾಜನಗರ ಪೂರ್ವ ಪೊಲೀಸ್ ಠಾಣೆಯಲ್ಲಿ ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿಗಳು ದೂರು ದಾಖಲಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+