ಡಿಕೆಶಿಗಿಂತ ಬಿಜೆಪಿಯವರು ಭ್ರಷ್ಟರು: ಸಚಿವ ಪುಟ್ಟರಂಗಶೆಟ್ಟಿ ಮಾತಿನ ಯಡವಟ್ಟು!
ಚಾಮರಾಜನಗರ, ಸೆಪ್ಟೆಂಬರ್ 9: ಬಿಜೆಪಿಯವರನ್ನು ಭ್ರಷ್ಟರು ಎಂದು ಆರೋಪಿಸುವ ಭರದಲ್ಲಿ ಸಚಿವ ಸಿ. ಪುಟ್ಟರಂಗಶೆಟ್ಟಿ ತಮ್ಮದೇ ಪಕ್ಷದವರನ್ನು ಭ್ರಷ್ಟರು ಎಂದು ಒಪ್ಪಿಕೊಳ್ಳುವಂತಹ ಹೇಳಿಕೆ ನೀಡಿ ಪೇಚಿಗೆ ಸಿಲುಕಿದ್ದಾರೆ.
ಜಾರಿ ನಿರ್ದೇಶನಾಲಯದಿಂದ ಬಂಧನ ಭೀತಿ ಎದುರಿಸುತ್ತಿರುವ ಡಿ.ಕೆ. ಶಿವಕುಮಾರ್ ಅವರಿಗಿಂತ ಬಿಜೆಪಿಯವರೇ ಹೆಚ್ಚು ಭ್ರಷ್ಟರು ಎಂದು ಪುಟ್ಟರಂಗಶೆಟ್ಟಿ ಹೇಳಿಕೆ ನೀಡಿದ್ದಾರೆ.
ಇದರಿಂದ ಮಾತಿನ ಭರದಲ್ಲಿ ಪುಟ್ಟರಂಗಶೆಟ್ಟಿ, ಡಿಕೆಶಿ ಅವರನ್ನು ಭ್ರಷ್ಟರು ಎಂದು ಒಪ್ಪಿಕೊಂಡಂತಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಬಿಜೆಪಿ ವಾಮಮಾರ್ಗದ ಮೂಲಕ ಅಧಿಕಾರಕ್ಕೆ ಬರಲು ಯತ್ನಿಸುತ್ತಿದೆ. ಅಧಿಕಾರಕ್ಕಾಗಿ ಸಿಬಿಐಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಪುಟ್ಟರಂಗಶೆಟ್ಟಿ ಆರೋಪಿಸಿದರು.
ಎಲ್ಲ ಸವಾಲುಗಳನ್ನೂ ಎದುರಿಸುವ ತಾಕತ್ತು ಡಿ.ಕೆ. ಶಿವಕುಮಾರ್ ಅವರಿಗೆ ಇದೆ. ಕಾಂಗ್ರೆಸ್‌ನ ಯಾವ ಶಾಸಕರೂ ಬಿಜೆಪಿಗೆ ಹೋಗುತ್ತಿಲ್ಲ. ಬಿಜೆಪಿಗೆ ಹೋಗುವುದು ಒಂದೇ ರಾತ್ರಿ ಕಂಡ ಬಾವಿಗೆ ಹಗಲು ಬೀಳುವುದು ಒಂದೇ ಎಂದು ಕಾಂಗ್ರೆಸ್‌ನ ಶಾಸಕರಿಗೆ ಬಿಜೆಪಿ ಗಾಳ ಹಾಕಿದೆ ಎಂಬ ವದಂತಿಗಳನ್ನು ನಿರಾಕರಿಸಿದರು.












Click it and Unblock the Notifications