ಜೂನ್ 2 ರಿಂದ ಬಂಡೀಪುರದಲ್ಲಿ ಸಫಾರಿ ಸ್ಥಳ ಬದಲಾವಣೆ

ಚಾಮರಾಜನಗರ, ಮೇ 15: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಜೂನ್ 2ರಿಂದ ಸಫಾರಿ ಸ್ಥಳ ಬದಲಾವಣೆಯಾಗಲಿದೆ. ಈ ಹಿನ್ನೆಲೆಯಲ್ಲಿ ಬಂಡಿಪುರದಲ್ಲಿ ಸದ್ಯ ನಡೆಸಲಾಗುತ್ತಿರುವ ಸಫಾರಿಗೆ ನಿರ್ಬಂಧ ಹೇರಲಾಗಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾರ್ಗಸೂಚಿ ಅನ್ವಯ, ಇನ್ಮುಂದೆ ಬಂಡೀಪುರದಲ್ಲಿ ಸಫಾರಿ ಬದಲು ಮೇಲುಕಾಮನಹಳ್ಳಿಯಲ್ಲಿ ಸಫಾರಿ ನಡೆಯಲಿದೆ. ಮೇಲುಕಾಮನಹಳ್ಳಿ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಸಮೀಪವೇ ಇದ್ದು, ಜೂನ್ 2ರಿಂದ ಈ ಮಾರ್ಗದಲ್ಲಿ ಸಫಾರಿ ನಡೆಸಬಹುದಾಗಿದೆ.

Bandipura safari place has been changed to Melakamanahalli

ಸಫಾರಿ ನಡೆಯಲಿರುವ ಸ್ಥಳ ವಿಶೇಷ ಹುಲಿ ಸಂರಕ್ಷಣಾದಳದ ಕ್ಯಾಂಪಸ್ ಆಗಿದೆ.ಹುಲಿ ಸಂರಕ್ಷಿತ ಪ್ರದೇಶದ ಬಂಡೀಪುರ ವಲಯದಲ್ಲಿ ಹಾಲಿ ನಡೆಸುತ್ತಿರುವ ಪರಿಸರ ಪ್ರವಾಸೋದ್ಯಮದ ಸಫಾರಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಜಿ.ಎಸ್ ಬೆಟ್ಟ ವಲಯದ ಮೇಲುಕಾಮನಹಳ್ಳಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ 181ರ ಪಕ್ಕದ ವಿಶೇಷ ಹುಲಿ ಸಂರಕ್ಷಣಾದಳದ ಕ್ಯಾಂಪಸ್ ಗೆ ಜೂನ್ 2ರಿಂದ ಕಾರ್ಯರೂಪಕ್ಕೆ ಬರುವಂತೆ ಸ್ಥಳಾಂತರ ಮಾಡಲಾಗುವುದು.

Bandipura safari place has been changed to Melakamanahalli

ಸಫಾರಿ ಕೈಗೊಳ್ಳಲು ಇಚ್ಛಿಸುವವರು ಹಾಗೂ ಸಾರ್ವಜನಿಕರು ಜೂನ್ 2 ರಿಂದ ಸ್ಥಳಾಂತರಗೊಂಡ ಸ್ಥಳದಲ್ಲಿ ಸಫಾರಿ ಸೇವೆಗಳನ್ನು ಉಪಯೋಗಿಸಿಕೊಳ್ಳುವಂತೆ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+