Get Updates
Get notified of breaking news, exclusive insights, and must-see stories!

ಬಂಡೀಪುರದಲ್ಲಿ ರಾತ್ರಿ ಸಂಚಾರ ತೆರವು ವಿರೋಧಿಸಿ ಹೋರಾಟಕ್ಕೆ ಸಿದ್ಧತೆ!

ಚಾಮರಾಜನಗರ, ಏಪ್ರಿಲ್‌ 05: ವನ್ಯ ಪ್ರಾಣಿಗಳ ಹಿತದೃಷ್ಟಿಯಿಂದ ಮತ್ತು ಹುಲಿ ಸಂರಕ್ಷಿತ ಪ್ರದೇಶವಾಗಿರುವ ಕಾರಣದಿಂದಾಗಿ ಬಂಡೀಪುರ ಉದ್ಯಾನದೊಳಗೆ ಹಾದು ಹೋಗಿರುವ ಎರಡು ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಾತ್ರಿ ಸಂಚಾರವನ್ನು ಈ ಹಿಂದೆಯೇ ನಿಷೇಧಿಸಲಾಗಿದೆ. ಆದರೀಗ ರಾತ್ರಿ ಸಂಚಾರ ನಿಷೇಧವನ್ನು ತೆರವುಗೊಳಿಸುವ ಕುರಿತಂತೆ ಮಾತುಗಳು ಕೇಳಿಬರುತ್ತಿದ್ದು, ಇದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಈ ಸಂಬಂಧ ಅಭಿಯಾನಗಳು ಸಾಮಾಜಿಕ ಜಾಲತಾಣಗಳಲ್ಲಿ ಆರಂಭವಾಗಿದ್ದು, ಇದರ ಮುಂದುವರೆದ ಭಾಗವಾಗಿ ಯಥಾಸ್ಥಿತಿ ಕಾಪಾಡಲು ಆಗ್ರಹಿಸಿ ಏಪ್ರಿಲ್‌ 6 ರಂದು ಭಾನುವಾರ ಕಾಲ್ನಡಿಗೆ ಜಾಥಾ ನಡೆಸಿ ಹಕ್ಕೊತ್ತಾಯದ ಪತ್ರವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಸಲ್ಲಿಸಲಿದ್ದಾರೆ.

Bandipur National Park Night Traffic Ban Sparks Protests from Environmentalists

ಇಷ್ಟಕ್ಕೂ ಬಂಡೀಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವಾಹನ ಸಂಚಾರವನ್ನು ನಿಷೇಧಿಸಿ ಸುಮಾರು ಹದಿನಾರು ವರ್ಷಗಳೇ ಕಳೆದು ಹೋಗಿವೆ. ಆದರೆ ಇದುವರೆಗೆ ಇಲ್ಲದ ಅಗತ್ಯತೆ ಈಗ ಏಕೆ? ಎಂಬುದು ಪರಿಸರ ಪ್ರೇಮಿಗಳ ಪ್ರಶ್ನೆಯಾಗಿದೆ. ಒಂದು ವೇಳೆ ರಾತ್ರಿ ಸಂಚಾರ ನಿಷೇಧವನ್ನು ತೆರವುಗೊಳಿಸಿದ್ದೇ ಆದರೆ ಅದರ ಪರಿಣಾಮಗಳೇನು? ಎಂಬುದು ನಮ್ಮ ಜನನಾಯಕರಿಗೆ ಗೊತ್ತಿಲ್ಲವೆ? ಪರಿಸರ, ವನ್ಯಪ್ರಾಣಿಗಳ ಬಗ್ಗೆ ಮಾರುದ್ದ ಮಾತನಾಡುವವರು ಇದೀಗ ಈ ಪ್ರಸ್ತಾಪವನ್ನು ಮುನ್ನಲೆಗೆ ತಂದಿದ್ದೇಕೆ ಎನ್ನುವುದೇ ಪ್ರಶ್ನೆಯಾಗಿದೆ. ಆದರೆ ಇಲ್ಲಿ ರಾಜಕೀಯವಿರುವುದನ್ನು ತಳ್ಳಿಹಾಕಲಾಗದು.

Take a Poll

ಇದೀಗ ಸರ್ಕಾರದ ನಡೆಗೆ ಆಕ್ರೋಶಗೊಂಡಿರುವ ಪರಿಸರವಾದಿಗಳು ಬಂಡೀಪುರ ಅರಣ್ಯದ ನಡುವೆ ಹಾದು ಹೋಗಿರುವ ಎರಡು ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ಸಂಚಾರ ನಿಷೇಧ ತೆರವು ಮಾಡಬಾರದು ಯಥಾಸ್ಥಿತಿ ಕಾಪಾಡುವಂತೆ ಆಗ್ರಹಿಸಿದ್ದು, ಈಸಂಬಂಧ ಗುಂಡ್ಲುಪೇಟೆ ಕಗ್ಗಳದಹುಂಡಿ ಗ್ರಾಮದಿಂದ ಮದ್ದೂರು ಚೆಕ್ ಪೋಸ್ಟ್ ವರೆಗೆ ಕಾಲ್ನಡಿಗೆ ಮೂಲಕ ಏ.6ರಂದು ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ. ಈ ಕುರಿತಂತೆ ಮಾತನಾಡಿದ ಪರಿಸರ ಪ್ರೇಮಿ ನಾಗಾರ್ಜುನ್ ಅವರು ಏ.6ರಂದು ನೂರಾರು ಪರಿಸರ ಪ್ರೇಮಿಗಳು ಪ್ರತಿಭಟನೆ ನಡೆಸಲಿರುವುದಾಗಿ ತಿಳಿಸಿದ್ದಾರೆ.

2009ರಲ್ಲೇ ರಾತ್ರಿ ಸಂಚಾರ ನಿಷೇಧ

ಬಂಡೀಪುರ ಅರಣ್ಯವು ವಿಶಿಷ್ಟ ಹಾಗೂ ವೈವಿಧ್ಯಮಯದಿಂದ ಕೂಡಿದ್ದು ಬಹುವಿಧದ ಜಾತಿಗಳ ಮರವಿದ್ದು, ಉತ್ತಮ ಪ್ರಾಣಿ ಸಂಕುಲವಿದ್ದು ಪಶ್ಚಿಮ ಘಟ್ಟದಲ್ಲೇ ಈ ಅರಣ್ಯವು ಹೆಸರುವಾಸಿಯಾಗಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ರಾತ್ರಿ ಸಂಚಾರವನ್ನು 2009ರಲ್ಲೇ ಸರ್ಕಾರ ನಿಷೇಧ ಮಾಡಿದೆ. ಹೀಗಿದ್ದರೂ ಕೂಡ ಕೇರಳದ ಕೆಲ ಜನಪ್ರತಿನಿಧಿಗಳು, ರಾಜಕಾರಣಿಗಳು ರಾತ್ರಿ ಸಂಚಾರ ನಿಷೇಧ ತೆರವು ಮಾಡಲು ಪ್ರಯತ್ನಿಸುತ್ತಿದ್ದಾರೆ. ಇವರ ಒತ್ತಡಕ್ಕೆ ಮಣಿದು ಯಾವುದೇ ಕಾರಣಕ್ಕೂ ರಾತ್ರಿ ಸಂಚಾರ ನಿಷೇಧ ತೆರವು ಮಾಡಬಾರದು ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವುದಾಗಿ ಹೇಳಿದ್ದಾರೆ.

Bandipur National Park Night Traffic Ban Sparks Protests from Environmentalists

ಅರಣ್ಯ ಸಂರಕ್ಷಣೆ, ವನ್ಯಪ್ರಾಣಿಗಳ ಹಿತದೃಷ್ಟಿಯಿಂದ ಮತ್ತು ಟಿಂಬರ್ ಮಾಫಿಯಾ, ಅಕ್ರಮ ಕಳ್ಳಸಾಗಣೆ ದಂಧೆ ತಡೆಯುವ ನಿಟ್ಟಿನಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಸಂಚಾರ ನಿಷೇಧಿಸಲಾಗಿದೆ. ನಿಷೇಧದ ನಂತರ ಬದಲಾದ ಕ್ರಮಕ್ಕೆ ಎಲ್ಲರಿಗೂ ತಿಳಿದಿದೆ. ಇದರಿಂದ ಯಾರಿಗೂ ಯಾವುದೇ ತೊಂದರೆ ಇಲ್ಲ ಎಂಬುದು ಸ್ಪಷ್ಟವಾಗಿದೆ.

ಇದಾಗಿಯೂ ರಾತ್ರಿ ಸಂಚಾರಕ್ಕೆ ಅನುವು ಮಾಡಿದರೆ ಮುಂದೆ ಹೋರಾಟಗಳ ಬಗ್ಗೆ ತಿಳಿಸುತ್ತೇವೆ. ಎಂದರಲ್ಲದೆ, ಕಳೆದ ವಯನಾಡು ಲೋಕಸಭಾ ಮರುಚುನಾವಣೆ ವೇಳೆ ಪ್ರಿಯಾಂಕಾ ವಾದ್ರಾ ಗಾಂಧಿ ಅವರು ನೀಡಿದ ಹೇಳಿಕೆಯನ್ನು ವಾಪಸ್ ಪಡೆಯಬೇಕು. ಈ ಹಿಂದೆ ಇಂದಿರಾ ಗಾಂಧಿಯವರೇ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಎಂದು ಹೆಸರು ಘೋಷಿಸಿ ಅರಣ್ಯ ಕಾಯ್ದೆ ಕಟ್ಟಲೆಗಳನ್ನು ತಂದಿದ್ದರು ಅವರ ಹೆಸರಿಗೆ ಋಣಿಯಾಗಿ ಯಾವುದೇ ಬದಲಾವಣೆ ಬೇಡ ನಿಮ್ಮ ಘೋಷಣೆಯನ್ನು ಹಿಂಪಡೆಯಿರಿ ಎಂದು ಆಗ್ರಹಿಸಿದ್ದಾರೆ.

ಪರಿಸರ ಪ್ರೇಮಿಗಳಿಂದ #save bandipura ಅಭಿಯಾನ

ಇನ್ನು ಸಾಮಾಜಿಕ ಕಾರ್ಯಕರ್ತ ಮಡಹಳ್ಳಿ ಮಣಿ ಮಾತನಾಡಿ ಪ್ರಕೃತಿಯನ್ನು ಪ್ರೀತಿಸಿ ಪ್ರಾಣಿಗಳನ್ನು ರಕ್ಷಿಸಿ ಎಂದು ಹೇಳುತ್ತಾ ರಾತ್ರಿ ವೇಳೆ ಸಂಚಾರ ಕಾನೂನು ಮಾಡುವ ಮೊದಲು ಹಲವಾರು ಅಪಘಾತಗಳಾಗಿ ಅನೇಕ ಪ್ರಾಣಿಗಳು ಸತ್ತಿವೆ. ಆದರೆ ತಿಳಿದಿದೆ. ರಾತ್ರಿ ಸಂಚಾರ ನಿಷೇಧ ಆದ ನಂತರ ಯಾವುದೇ ಪ್ರಾಣಿಗಳ ಮರಣ ಹೊಂದದಿರುವುದು ಎಲ್ಲರಿಗೂ ತಿಳಿದಿದೆ. ಇದೀಗ ಕೇರಳ ಸರ್ಕಾರವು ಮತ್ತೆ ರಾತ್ರಿ ಸಂಚಾರ ಬೇಕು ಎಂದು ಕೋರ್ಟ್ ಮೊರೆ ಹೋಗಿರುವುದು ಸರಿಯಿಲ್ಲ. ಒಂದು ವೇಳೆ ರಾತ್ರಿ ಸಂಚಾರಕ್ಕೆ ಅನುಮತಿ ನೀಡಿದರೆ ಕಾನೂನು ಬಾಹಿರ ಚಟುವಟಿಕೆಗಳು ನಡೆಯುವ ಸಾಧ್ಯತೆಗಳಿದ್ದು ಅದಕ್ಕೆ ಎಡೆಮಾಡಿ ಕೊಡಬಾರದು ಎಂದು ಒತ್ತಾಯಿಸಿದರು.

ಸಾಮಾಜಿಕ ಕಾರ್ಯಕರ್ತೆ ತಾರಾ ನಾಗೇಂದ್ರ ಮಾತನಾಡಿ ನೆರೆಯ ರಾಜ್ಯ ಕೇರಳ ಸರ್ಕಾರವು ಪದೇ ಪದೇ ಬಂಡೀಪುರ ವಿಚಾರವಾಗಿ ಕರ್ನಾಟಕ ಸರ್ಕಾರದ ಮೇಲೆ ಒತ್ತಡ ಹೇರುತ್ತಲೇ ಬಂದಿದ್ದಾರೆ. ಇದೀಗ ರಾತ್ರಿ ವೇಳೆ ಸಂಚಾರಕ್ಕೆ ಅನುಮತಿ ಪಡೆಯಲು ಒತ್ತಡ ಏರುತ್ತಿರುವುದು ಸರಿಯಿಲ್ಲ ಆದ್ದರಿಂದ ನಾವು ಪರಿಸರ ಪ್ರೇಮಿಗಳೆಲ್ಲ ಸೇರಿ #save bandipura ಎಂಬ ಅಭಿಯಾನವನ್ನು ನಡೆಸುತ್ತಿದ್ದು ಇದಕ್ಕೆ ಅಧಿಕಾರಿಗಳು ರಾಜಕಾರಣಿಗಳು ಸಾರ್ವಜನಿಕರು ಪಾಲ್ಗೊಂಡು ಯಶಸ್ವಿ ಮಾಡಿಕೊಡಬೇಕೆಂದು ಕೇಳಿಕೊಂಡರಲ್ಲದೆ, ಈ ಅಭಿಯಾನದಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಅನೇಕ ರೀತಿಯ ಸಹಕಾರ ಸಿಗುತ್ತಿದ್ದು ಅಪಾರ ಜನಸಮೂಹವೇ ಸೇರುವ ಮುನ್ಸೂಚನೆ ಇದ್ದು ನಮ್ಮ ಗುಂಡ್ಲುಪೇಟೆ ಭಾಗದ ಎಲ್ಲ ಪರಿಸರ ಪ್ರೇಮಿಗಳು ಭಾಗಿಯಾಗಬೇಕೆಂದು ಮನವಿ ಮಾಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+